ಉತ್ತರಪ್ರದೇಶದ ಸಂಭಲ ನಗರವನ್ನು ‘ಗಾಝಿ'(ಇಸ್ಲಾಮಿ ಧರ್ಮಯೋದ್ದ) ಭೂಮಿ ಎಂದು ಉಲ್ಲೇಖಿಸಿದ ಎಂಐಎಂ !

ಭಾಜಪ ಮತ್ತು ಸಂತರಿಂದ ವಿರೋಧ

ಮೊಘಲ ವಂಶದವರೆಂದು ಸಾಬೀತು ಪಡಿಸಿದ ಎಂಐಎಂ ಪಕ್ಷ ! ಇಂತಹ ಪಕ್ಷದ ಮೇಲೆ ನಿಷೇಧ ಹೇರುವಂತೆ ಹಿಂದೂಗಳು ಒತ್ತಾಯಿಸಲೇಬೇಕು ! – ಸಂಪಾದಕರು 

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ ರಾಜ್ಯದ ಸಂಭಲನಲ್ಲಿ ಎಂಐಎಂನ ಅಧ್ಯಕ್ಷ ಹಾಗೂ ಸಂಸದ ಅಸದುದ್ದಿನ್ ಓವೈಸಿ ಇವರ ಪ್ರವಾಸದ ಸಮಯದಲ್ಲಿ ಹಚ್ಚಲಾಗಿದ್ದ ಭಿತ್ತಿ ಪತ್ರಗಳ ಮೇಲೆ ‘ಗಾಝಿ’ಗಳ (ಇಸ್ಲಾಮಿ ಧರ್ಮ ಯೋಧರ) ಭೂಮಿಗೆ ಸ್ವಾಗತ’, ಎಂದು ಬರೆದಿದ್ದರಿಂದ ವಾದ-ವಿವಾದವು ಉದ್ಬವಿಸಿದೆ. ಈ ಭಿತ್ತಿಪತ್ರಗಳನ್ನು ಎಂಐಎಂನ ನಾಯಕ ಮುಶೀರ ಖಾನ ತರೀನ ಇವನು ಹಚ್ಚಿದ್ದನು. ಭಾಜಪ ಮತ್ತು ರಾಜ್ಯದಲ್ಲಿನ ಸಂತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

‘ಗಾಝಿ’ ಎಂದರೆ ಏನು ?

ಇಸ್ಲಾಮ್‍ನಲ್ಲಿ ಗಾಝಿ ಎಂದರೆ ಧರ್ಮಯೋಧ ! ಯಾರು ತನ್ನ ಧರ್ಮ ಸ್ಥಾಪನೆಗಾಗಿ ಹೋರಾಡಿದರೋ ಮತ್ತು ಯಾರು ಅನ್ಯಧರ್ಮಿಯರನ್ನು ಮತಾಂತರ ಮಾಡಿದ್ದಾರೆಯೋ ಆತನೇ ಧರ್ಮಯೋಧ. ಸಂಭಲನಲ್ಲಿ ಪೃಥ್ವಿರಾಜ ಚೌಹಾನ್ ಮತ್ತು ಮಹಮ್ಮದ ಗಝನಿಯ ಸಹೋದರನ ಮಗ ಸಯ್ಯದ ಸಾಲಾರ ಮಸೂದ ಗಝನಿ ಇವರ ಮಧ್ಯೆ ಎರಡು ಯುದ್ಧಗಳಾಗಿದ್ದವು. ಅದರಲ್ಲಿ ಮೊದಲನೆಯ ಯುದ್ಧ ಪೃಥ್ವಿರಾಜ ಚೌಹಾನರು ಗೆದ್ದಿದ್ದರು ಹಾಗೂ ಎರಡನೆಯ ಯುದ್ಧದಲ್ಲಿ ಸೋತಿದ್ದರು. ಅಲ್ಲಿಂದ ಅಲ್ಲಿ ಮೊಘಲರ ಆಡಳಿತವಿತ್ತು.

ಸಂಭಲನಲ್ಲಿ ಭಗವಾನ ಕಲ್ಕಿಯ ಅವತಾರ ಆಗಲಿದೆ !

ಸಂಭಲನಲ್ಲಿ ಭಗವಾನ ಶ್ರೀವಿಷ್ಣುವಿನ ಹತ್ತನೇ ಅವತಾರವಾದ ಕಲ್ಕಿ ಜನ್ಮವಾಗಲಿದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಅವರು ಬ್ರಾಹ್ಮಣನ ಕುಲದವರಾಗಿರುವರು. ಸಿಖ್ಕರ ಹತ್ತನೆಯ ಗುರು ಶ್ರೀ ಗುರು ಗೋವಿಂದ ಸಿಂಹ ಇವರ ‘ದಶಮ್’ ಗ್ರಂಥದಲ್ಲಿಯೂ ಇದರ ಉಲ್ಲೇಖವಿದೆ.