ಕರ್ನಾಟಕದ ಧಾರ್ಮಿಕ ಸ್ಥಳಗಳಿಗೆ ಸಂರಕ್ಷಣೆ ನೀಡುವ ವಿಧೇಯಕ ಅಂಗೀಕಾರ

ಬೆಂಗಳೂರು – ಕರ್ನಾಟಕ ರಾಜ್ಯದಲ್ಲಿನ ದೇವಸ್ಥಾನಗಳು ಮತ್ತು ಅದಕ್ಕೆ ಸಂಬಂಧಿಸಿದ ಸಂಪತ್ತು ಇವುಗಳ ರಕ್ಷಣೆಗಾಗಿ ‘ಕರ್ನಾಟಕ ಧಾರ್ಮಿಕ ಸ್ಥಳ ಸಂರಕ್ಷಣೆ ವಿಧೇಯಕ’ವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಕಾಂಗ್ರೆಸ್‌ನವರು ಈ ವಿಧೇಯಕವನ್ನು ವಿರೋಧಿಸಿದ್ದಾರೆ. ಈ ವಿಧೇಯಕದ ಮೂಲಕ ರಾಜ್ಯ ಸರಕಾರಕ್ಕೆ ಯಾವುದೇ ಧಾರ್ಮಿಕ ಸ್ಥಳದ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಸಿಗಲಿದೆ. ಸಾರ್ವಜನಿಕ ಸ್ಥಳದಲ್ಲಿ ಕಟ್ಟಿರುವ ಧಾರ್ಮಿಕ ಸ್ಥಳಗಳಿಗೂ ಈ ಮೂಲಕ ಸಂರಕ್ಷಣೆ ನೀಡಲಾಗಿದೆ.