ಹಿಂದೂಗಳು ಎಲ್ಲೆಲ್ಲಿ ಅಲ್ಪಸಂಖ್ಯಾತರಾಗಿದ್ದಾರೆಯೋ ಅಲ್ಲಿಯೂ ಅವರು ಸುರಕ್ಷಿತರಾಗಿರಲು ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದು ಅನಿವಾರ್ಯವಾಗಿದೆ !- ಸಂಪಾದಕರು
ಉದಯಪುರ (ರಾಜಸ್ಥಾನ) – ಹಿಂದೂಗಳ ಜನಸಂಖ್ಯೆ ಯಾವ್ಯಾವ ಸ್ಥಳಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಕಡಿಮೆಯಾಗಿದೆಯೋ ಅಲ್ಲೆಲ್ಲ ಸಮಸ್ಯೆಗಳು ಉದ್ಭವಿಸಿವೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ ಭಾಗವತ ಇವರು ಇಲ್ಲಿಯ ಒಂದು ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದರು. ‘ಹಿಂದೂ ರಾಷ್ಟ್ರದ ಪರಮ ವೈಭವಗಳಿಂದಾಗಿ ಜಗತ್ತಿನ ಕಲ್ಯಾಣವಾಗುತ್ತದೆ’, ಎಂಬ ವಿಶ್ವಾಸವನ್ನೂ ಸರಸಂಘಚಾಲಕ ಡಾ. ಭಾಗವತರು ವ್ಯಕ್ತಪಡಿಸಿದರು. ಹಾಗೂ ‘ಕೊರೊನಾ ಸಮಯದಲ್ಲಿ ಸಂಘದ ಸ್ವಯಂಸೇವಕರು ಮಾಡಿರುವ ನಿಸ್ವಾರ್ಥ ಸೇವೆ ಎಂದರೆ ಹಿಂದುತ್ವವಾಗಿದೆ’, ಎಂಬ ಹಿಂದುತ್ವದ ವ್ಯಾಖ್ಯೆಯನ್ನು ಅವರು ಮಾಡಿದ್ದಾರೆ.
Welfare of world possible in supreme glory of Hindu nation: RSS chief https://t.co/GV4r4XpXKz pic.twitter.com/CrdVFdhJM7
— The Times Of India (@timesofindia) September 20, 2021
ಸರಸಂಘಚಾಲಕ ಡಾ. ಭಾಗವತ ತಮ್ಮ ಮಾತಿನಲ್ಲಿ ಮುಂದಿನಂತೆ ಹೇಳಿದರು,
1. ಹಿಂದೂಗಳು ಸನಾತನ ಸಂಸ್ಕೃತಿಯನ್ನು ನಂಬುವವರಾಗಿದ್ದಾರೆ. ಸನಾತನ ಸಂಸ್ಕೃತಿಯ ವಿಚಾರಧಾರೆಯಲ್ಲಿನ ಸಂಸ್ಕಾರಗಳು ಸಂಪೂರ್ಣ ವಿಶ್ವದ ವಿಚಾರ ಮಾಡುವ ಶಿಕ್ಷಣವನ್ನು ನೀಡುತ್ತವೆ. ಹಿಂದೂಗಳ ವಿಚಾರಧಾರೆಯಲ್ಲಿ ಶಾಂತಿ ಮತ್ತು ಸತ್ಯ ಈ ಎರಡು ಸಂಗತಿಗಳು ಒಳಗೊಂಡಿವೆ ‘ನಾವು ಹಿಂದೂಗಳಲ್ಲ’ ಎಂಬಂತಹ ಒಂದು ಚಳುವಳಿಯನ್ನು ದೇಶ ಮತ್ತು ಸಮಾಜವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗುತ್ತಿದೆ.
2. ಅನೇಕ ತಲೆಮಾರುಗಳಿಂದ ಈ ಪುಣ್ಯವಂತ ಪ್ರದೇಶದಲ್ಲಿ ವಾಸಿಸುವ ಪೂರ್ವಜರ ವಂಶಸರಾಗಿರುವ ನಾವೆಲ್ಲರೂ ಹಿಂದೂಗಳೇ ಆಗಿದ್ದೇವೆ. ಇದೇ ಹಿಂದುತ್ವದ ಭಾವನೆ ಆಗಿದೆ.
‘ಎಲ್ಲಿ ಮುಸಲ್ಮಾನರು ಅಲ್ಪಸಂಖ್ಯಾತರಾಗಿದ್ದಾರೆಯೋ, ಅಲ್ಲಿ ಮುಸಲ್ಮಾನರ ಮೇಲೆ ಅತ್ಯಾಚಾರ !’ – ಎಂ.ಐ.ಎಂ.
ಎಂ.ಐ.ಎಂ ನ ಅಸೀಮ ವಕಾರ ಇವರು ಸರಸಂಘಚಾಲಕರ ಹೇಳಿಕೆಯನ್ನು ಟೀಕಿಸಿದ್ದಾರೆ. ಅವರು, ಯಾವ್ಯಾವ ಸ್ಥಳಗಳಲ್ಲಿ ಮುಸಲ್ಮಾನರು ಅಲ್ಪಸಂಖ್ಯಾತ ಇದ್ದಾರೆಯೋ ಅಲ್ಲೆಲ್ಲ ಅವರ ಮೇಲೆ ತುಂಬಾ ಅತ್ಯಾಚಾರವಾಗಿರುವುದು ಕಂಡುಬರುತ್ತದೆ. ಅದು ಗುಜರಾತ ಇರಬಹುದು ಅಥವಾ ಮಹಾರಾಷ್ಟ್ರ. ಆದರೆ ನಮ್ಮ ನೆರೆಯ ದೇಶಗಳಾದ ದೋಹಾ, ಕತಾರ್, ದುಬೈ ಆಗಲಿ ಅಥವಾ ಒಮಾನ ಆಗಲಿ ಅಲ್ಲಿಯೂ ಹಿಂದೂಗಳ ಮೇಲೆ ಮುಸಲ್ಮಾನರು ಅತ್ಯಾಚಾರ ಮಾಡುತ್ತಿರುವುದು ಕಂಡುಬಂದಿಲ್ಲ. (ಹಿಂದೂಗಳ ಮೇಲೆ ಅತ್ಯಾಚಾರ ಆಗುವ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನ ಈ ಭಾರತದ ನೆರೆ ದೇಶದ ಹೆಸರು ಹೇಳುವಲ್ಲಿ ಜಾಣ ಕುರುಡರಾಗುವ ವಕಾರ ! – ಸಂಪಾದಕರು) ಭಾರತದಲ್ಲಿ ಗುಜರಾತ ಸಹಿತ ಅನೇಕ ಸ್ಥಳಗಳಲ್ಲಿ ಮುಸಲ್ಮಾನರ ಮೇಲಿನ ಅತ್ಯಾಚಾರಗಳು ಮಿತಿಮೀರಿದೆ. (ಸುಳ್ಳುಕೋರ ಅಸಿಮ ವಕಾರ ! ಗುಜರಾತನಲ್ಲಿ ಇಂತಹ ಎಷ್ಟು ಘಟನೆಗಳು ನಡೆದಿದೆ, ಇದರ ಅಂಕಿ ಅಂಶವನ್ನು ವಕಾರ ಇವರು ಸ್ಪಷ್ಟಪಡಿಸಬೇಕು ! – ಸಂಪಾದಕರು) ಆದ್ದರಿಂದ ಭಾಗವತ ಇವರು ಅವರ ಹೇಳಿಕೆಯ ಬಗ್ಗೆ ಪುನರ್ ವಿಚಾರ ಮಾಡಬೇಕಾಗಿದೆ. (ವಕಾರರು ಕಾಶ್ಮೀರದ ವಿಷಯವಾಗಿ ಏಕೆ ಮಾತನಾಡುತ್ತಿಲ್ಲ ? ದೇಶದಲ್ಲಿನ ಅನೇಕ ಜಿಲ್ಲೆಗಳು ಮುಸಲ್ಮಾನ ಬಹುಸಂಖ್ಯಾತವಾಗಿವೆ, ಅಲ್ಲಿಯ ಹಿಂದುಗಳ ಸ್ಥಿತಿ ವಿಷಯವಾಗಿ ವಕಾರರು ಯಾಕೆ ಮೌನವಾಗಿದ್ದಾರೆ ? – ಸಂಪಾದಕರು)