ನವರಾತ್ರಿಯಲ್ಲಿ ರಕ್ತಪಾತ ನಡೆಸುವ ಸಿದ್ಧತೆಯಲ್ಲಿದ್ದ ೬ ಜಿಹಾದಿ ಉಗ್ರರ ಬಂಧನ !

  • ಅದರಲ್ಲಿ ಇಬ್ಬರು ಪಾಕಿಸ್ತಾನೀಯರು

  • ಬೃಹತ್ ಪ್ರಮಾಣದ ಸ್ಪೋಟಕಗಳು ವಶಕ್ಕೆ

ಈ ಉಗ್ರರನ್ನು ಜೀವಮಾನವಿಡೀ ಸಾಕುವ ಬದಲು ಅವರ ಮೇಲೆ ತ್ವರಿತಗತಿ ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಸಿ ಅವರಿಗೆ ಗಲ್ಲು ಶಿಕ್ಷೆಯಾಗಲು ಸರಕಾರವು ಪ್ರಯತ್ನಿಸಬೇಕು – ಸಂಪಾದಕರು

ನವ ದೆಹಲಿ – ದೆಹಲಿ ಪೊಲೀಸರ ವಿಶೇಷ ಪಡೆಯು ಉತ್ತರಪ್ರದೇಶ, ದೆಹಲಿ ಮತ್ತು ಮಹಾರಾಷ್ಟ್ರದಿಂದ ೬ ಜಿಹಾದಿ ಉಗ್ರರನ್ನು ಬಂಧಿಸಿದೆ. ಇದರಲ್ಲಿ ಇಬ್ಬರು ಪಾಕಿಸ್ತಾನದ ಉಗ್ರರಿದ್ದಾರೆ. ಇವರಿಂದ ದೊಡ್ಡ ಪ್ರಮಾಣದ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನದಲ್ಲಿನ ಇವರ ಸೂತ್ರಧಾರರಿಂದ ಸಿಗುವ ಆದೇಶದಂತೆ ಇವರೆಲ್ಲ ನವರಾತ್ರಿ ಮತ್ತು ಇತರ ಹಬ್ಬಗಳಲ್ಲಿ ರಕ್ತಪಾತ ನಡೆಸುವವರಿದ್ದರು. ಹಾಗೆಯೇ ಉತ್ತರಪ್ರದೇಶದ ಮುಂದಿನ ವರ್ಷ ನಡೆಯುವ ವಿಧಾನಸಭೆಯ ಚುನಾವಣೆಯಲ್ಲಿಯೂ ರಕ್ತಪಾತ ನಡೆಸುವ ಸಂಚು ರೂಪಿಸಿದ್ದರು.