ದೊಡ್ಡ ಮಾರಾಟಗಾರರು ತಮ್ಮ ಬಳಿ ಮಾದಕ ಪದಾರ್ಥಗಳನ್ನು ಇಟ್ಟುಕೊಳ್ಳದಿದ್ದರೂ, ಅವರ ವಿರುದ್ಧ ತೆಗೆದುಕೊಂಡ ಕ್ರಮವು ಯೋಗ್ಯ ! – ಪಂಜಾಬ ಮತ್ತು ಹರಿಯಾಣ ಉಚ್ಚ ನ್ಯಾಯಾಲಯ

ಮಾದಕ ಪದಾರ್ಥಗಳ ವ್ಯಾಪಾರಿಯ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ !

ಚಂಡಿಗಡ – ಪೊಲೀಸರು ಯಾವಾಗಲೂ ಮಾದಕ ಪದಾರ್ಥಗಳ ಸಣ್ಣಪುಟ್ಟ ಮಾರಾಟಗಾರರನ್ನು ಬಂಧಿಸುತ್ತಾರೆ. ಮಾದಕ ಪದಾರ್ಥಗಳ ವ್ಯಾಪಾರದ ಹಿಂದೆ ಅನೇಕ ಜನರಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಮಾದಕ ಪದಾರ್ಥಗಳ ಮಾರಾಟ ಮತ್ತು ಕಳ್ಳಸಾಗಾಣಿಕೆದಾರರಿಗೆ ರಾಜಕೀಯ ರಕ್ಷಣೆ ಸಿಗುತ್ತದೆ. ಆದ್ದರಿಂದ ಪೊಲೀಸರು ಅವರನ್ನು ನಿರ್ಲಕ್ಷಿಸುತ್ತಾರೆ. ಯಾವಾಗ ಈ ಕಳ್ಳಸಾಗಾಣಿಕೆದಾರರು ಅಥವಾ ದೊಡ್ಡ ಮಾರಾಟಗಾರರು ಸಿಕ್ಕಿಬಿದ್ದಾಗ, ಅವರು ಕಾನೂನಿನಲ್ಲಿನ ಲೋಪದೋಷಗಳು ಮತ್ತು ಒತ್ತಡಗಳನ್ನು ಹೇರುವ ಮೂಲಕ ಶಿಕ್ಷೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹೆಚ್ಚಿನ ಸಮಯದಲ್ಲಿ, ಈ ದೊಡ್ಡ ಮಾರಾಟಗಾರರು ಬಡವರಿಂದ ಮಾದಕ ಪದಾರ್ಥಗಳ ಸಣ್ಣಪುಟ್ಟ ಪ್ರಮಾಣದಲ್ಲಿ ಮಾರಾಟ ಮಾಡಿಸಿಕೊಳ್ಳುತ್ತಿದ್ದರಿಂದ ಪೊಲೀಸರಿಗೆ ಅವರ ತನಕ ತಲುಪಲು ಆಗುವುದಿಲ್ಲ. ಆದ್ದರಿಂದ ‘ಒಬ್ಬರ ಬಳಿ ಮಾದಕ ಪದಾರ್ಥ ಸಿಗಲಿಲ್ಲ ಅಂದರೆ ಅವರ ಮೇಲೆ ಕ್ರಮ ಕೈಗೊಳ್ಳಬಾರದು’, ಎಂದು ಹೇಳಲು ಸಾಧ್ಯವಿಲ್ಲ, ಎಂದು ಪಂಜಾಬ ಮತ್ತು ಹರಿಯಾಣ ಉಚ್ಚ ನ್ಯಾಯಾಲಯವು ಸೋಮವಾರ ಪ್ರಮುಖ ಮಾದಕ ಪದಾರ್ಥಗಳ ಮಾರಾಟಗಾರನಿಗೆ ಬಂಧನ ಪೂರ್ವ ಜಾಮೀನು ನೀಡಲು ನಿರಾಕರಿಸಿದೆ. ‘ಮಾದಕ ಪದಾರ್ಥಗಳನ್ನು ತಮ್ಮ ಹತ್ತಿರ ಇಟ್ಟುಕೊಳ್ಳದಿರಲು ಮತ್ತು ತಮ್ಮ ಮೇಲೆ ಕ್ರಮದಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ’, ಎಂದು ನ್ಯಾಯಾಲಯವು ಹೇಳಿದೆ.