ಸನಾತನದ ಚೈತನ್ಯಮಯ ಗ್ರಂಥಗಳನ್ನು ಮನೆಮನೆಗೆ ತಲುಪಿಸಿ ಪ್ರತಿಯೊಂದು ಜೀವದ ಕಲ್ಯಾಣ ಮಾಡಿ – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ
ಮಂಗಳೂರು (ಸುದ್ದಿ.), ಸೆಪ್ಟೆಂಬರ್ ೧ – ಶ್ರೀಮದ್ ಭಗವದ್ಗೀತೆ, ಮಹಾಭಾರತ ಇತ್ಯಾದಿ ಧರ್ಮಗ್ರಂಥಗಳು ಈಶ್ವರವಾಣಿಯಿಂದ ಸಾಕಾರಗೊಂಡಿವೆ; ಆದ್ದರಿಂದ ಅದರಲ್ಲಿ ಚೈತನ್ಯ ಕೂಡಿವೆ. ಅದೇ ರೀತಿ ಸನಾತನದ ಗ್ರಂಥಗಳೂ ಈಶ್ವರೀ ಸಂಕಲ್ಪದಿಂದ ಸಾಕಾರಗೊಂಡಿವೆ. ಇವು ಸ್ವಯಂಭೂ ಚೈತನ್ಯದ ಆಗರವಾಗಿದ್ದು ಅದರ ಅಧ್ಯಯನ ಮಾಡುವವರು ಗ್ರಂಥದಲ್ಲಿ ಹೇಳಿದಂತೆ ಮಾರ್ಗದರ್ಶನವನ್ನು ಕೃತಿಯಲ್ಲಿ ತಂದರೆ, ಅಂತಹವರು ಸಾಧಕ, ಶಿಷ್ಯ ಮುಂದೆ ಸಂತರೂ ಆಗಬಹುದು. ಈ ಗ್ರಂಥಗಳಿಂದಾಗಿ ಮನೆಯಲ್ಲಿ ಸಾತ್ವಿಕ ಸ್ಪಂದನಗಳು ನಿರ್ಮಾಣವಾಗಿ ವಾಸ್ತುಶುದ್ಧಿಯೂ ಆಗುತ್ತದೆ. ಈ ಗ್ರಂಥಗಳ ಅಧ್ಯಯನದಿಂದ ಅಂತರ್ಮನಸ್ಸಿನಲ್ಲಿ ಸಾಧನೆಯ ಸಂಸ್ಕಾರವಾಗುತ್ತದೆ. ಇದರ ಅಧ್ಯಯನ ಮಾಡಿ ಕೃತಿಯಲ್ಲಿ ತರುವುದೆಂದರೆ ಸಾಧನೆಯೇ ಆಗಿದೆ. ಆದ್ದರಿಂದ ಉದ್ಧಾರವೇ ಆಗುತ್ತದೆ. ಆದ್ದರಿಂದ ವೇದ ಸಮಾನವಾಗಿರುವ ಈ ಗ್ರಂಥಗಳನ್ನು ಮನೆಮನೆಗೆ ತಲುಪಿಸಿ ಪ್ರತಿಯೊಂದು ಜೀವದ ಉದ್ಧಾರ ಮಾಡೋಣ, ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಕರೆ ನೀಡಿದರು. ಅವರು ಇಂದು ಬೆಳಿಗ್ಗೆ ೭.೩೦ಗೆ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ವನ್ನು ಆನ್‌ಲೈನ್ ಮೂಲಕ ಉದ್ಘಾಟನೆ ಮಾಡಿದರು. ಈ ಸಮಯದಲ್ಲಿ ಪೂ. ರಮಾನಂದ ಗೌಡ ಇವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ಸುಮಾರು ೬೦೦ ಕ್ಕೂ ಹೆಚ್ಚು ಜನರು ವೀಕ್ಷಿಸಿದರು. ಶಂಖನಾದ ಮಾಡುವುದರ ಮೂಲಕ ಆರಂಭವಾದ ಈ ಕಾರ್ಯಕ್ರಮದಲ್ಲಿ ಪೂ. ರಮಾನಂದ ಗೌಡ ಇವರು ತಮ್ಮ ಶುಭ ಹಸ್ತದಿಂದ ಶ್ರೀಫಲವನ್ನು ಒಡೆದು ದೀಪ ಬೆಳಗಿಸುವ ಮೂಲಕ ಈ ಅಭಿಯಾನವನ್ನು ಉದ್ಘಾಟಿಸಿದರು. ಸನಾತನದ ಗ್ರಂಥಗಳನ್ನು ಮನೆ ಮನೆಗೆ ತಲುಪಿಸುವ ದೃಷ್ಟಿಯಿಂದ ಸೆಪ್ಟೆಂಬರ್ ೧ ರಿಂದ ೩೦ ರವರೆಗೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಎಲ್ಲಾ ಸಾಧಕರು, ಧರ್ಮಪ್ರೇಮಿಗಳು ಮತ್ತು ಹಿತಚಿಂತಕರು ಪಾಲ್ಗೊಳ್ಳಲಿದ್ದಾರೆ. ಅದೇ ರೀತಿ ಸಾಮಾಜಿಕ ಜಾಲತಾಣಗಳ ಮೂಲಕವೂ ವ್ಯಾಪಕವಾಗಿ ಪ್ರಸಾರ ಮಾಡಲಿದ್ದಾರೆ. ವಿಶೇಷವೆಂದರೆ ಈ ಕಾರ್ಯಕ್ರಮ ಆರಂಭವಾಗಿ ಅರ್ಧಗಂಟೆಯಲ್ಲೇ ಗ್ರಂಥದ ‘ಆನ್‌ಲೈನ್’ ಬೇಡಿಕೆ ಬರಲು ಆರಂಭವಾಯಿತು. ಆಗಸ್ಟ್ ೨೦೨೧ ರ ತನಕ ಕನ್ನಡ, ಮರಾಠಿ, ತಮಿಳು ತೆಲುಗು ಸೇರಿದಂತೆ ೧೭ ಭಾಷೆಗಳಲ್ಲಿ ೩೪೫ ಸನಾತನದ ಗ್ರಂಥಗಳ ಪ್ರಕಾಶನವಾಗಿವೆ. ಈ ಗ್ರಂಥಗಳ ಒಟ್ಟು ೮೬ ಲಕ್ಷದ ೪೬ ಸಾವಿರ ಪ್ರತಿಗಳು ಇಲ್ಲಿಯತನಕ ಮುದ್ರಣವಾಗಿವೆ. ಈ ಅಭಿಯಾನದಲ್ಲಿ ಪಾಲ್ಗೊಂಡು ಗ್ರಂಥಗಳ ಬೇಡಿಕೆ ನೀಡಲು ೯೩೭೯೭೭೧೭೭೧ ಈ ಕ್ರಮಾಂಕಕ್ಕೆ ಸಂಪರ್ಕಿಸಿ ಅಥವಾ www.SanatanShop.com ಜಾಲತಾಣಕ್ಕೆ ಭೇಟಿ ನೀಡಬೇಕೆಂದು ಕೋರಲಾಗಿದೆ!
ಪೂ. ರಮಾನಂದ ಗೌಡ ಇವರು ಮಾಡಿದ ಮಾರ್ಗದರ್ಶನದಲ್ಲಿನ ಮಹತ್ವದ ಅಂಶಗಳು
೧. ಶಾಲೆಯಲ್ಲಿರುವಾಗ ‘ಗ್ರಂಥವೇ ಗುರು ಆಗಿದೆ’ ಎಂದು ಹೇಳಿಕೊಡುತ್ತಿದ್ದರು. ಆಗ ಅದರ ಅರ್ಥ ಗೊತ್ತಾಗುತ್ತಿರಲಿಲ್ಲ. ಸನಾತನದ ಗ್ರಂಥಗಳನ್ನು ಓದಿದ ನಂತರ, ಆ ಗ್ರಂಥಗಳಿಂದ ಜ್ಞಾನವು ಸಿಗತೊಡಗಿತು. ಆಗ ‘ಗ್ರಂಥವೇ ಗುರುವಾಗಿದೆ’ ಎಂಬುದು ಅರಿವಾಯಿತು.
೨. ಸನಾತನದ ಗ್ರಂಥಗಳು ಜ್ಞಾನದ ಭಂಡಾರವಾಗಿವೆ. ಜ್ಞಾನದ ಸಾಗರವಾಗಿವೆ; ಹಾಗಾಗಿ ನಮ್ಮ ಗುರು ಪರಾತ್ಪರ ಗುರು ಡಾ. ಆಠವಲೆಯವರು ಜ್ಞಾನಗುರುಗಳಾಗಿದ್ದಾರೆ. ‘ಜ್ಞಾನವನ್ನು ಕೃತಿಯಲ್ಲಿ ತಂದರೆ, ಆಚರಣೆಯಲ್ಲಿ ತಂದರೆ, ನಮಗೆ ಮೋಕ್ಷಪ್ರಾಪ್ತಿಯಾಗುತ್ತದೆ’, ಇದನ್ನು ನಮಗೆ ಪ.ಪೂ. ಗುರುಗಳೇ ಕಲಿಸಿದ್ದಾರೆ. ಅಂದರೆ ಅವರೇ ಸಾಧಕರಿಗೆ ಮೋಕ್ಷದ ತನಕ ಕರೆದುಕೊಂಡು ಹೋಗುತ್ತಿದ್ದಾರೆ. ಅವರೇ ಮೋಕ್ಷ ಗುರುಗಳಾಗಿದ್ದಾರೆ.
೩. ಪರಾತ್ಪರ ಗುರುಗಳು ನೀಡಿದ ಜ್ಞಾನವನ್ನು ನಮಗೆ ಸಮಾಜಕ್ಕೆ ಕೊಡಬೇಕಿದೆ. ಈ ಜ್ಞಾನಪ್ರಸಾರದ ಸೇವೆ ಎಂದರೆ ಕಾಲಾನುಸಾರ ದೊಡ್ಡ ಸಮಷ್ಟಿ ಸಾಧನೆಯೇ ಆಗಿದೆ. ಈ ಸಮಯದಲ್ಲಿ ಸಮಾಜದಲ್ಲಿ ಜ್ಞಾನಶಕ್ತಿಯ ಪ್ರಸಾರ ಮಾಡುವುದೇ ಗುರುಗಳಿಗೆ ಅಪೇಕ್ಷಿತವಿದೆ.
೪. ಈ ಅಭಿಯಾನದಲ್ಲಿ ನಾವೆಲ್ಲರೂ ತಳಮಳದಿಂದ ಭಾಗವಹಿಸೋಣ. ಜ್ಞಾನರೂಪಿ ಗ್ರಂಥವನ್ನು ಮನೆ ಮನೆಗೆ ತಲುಪಿಸೋಣ. ಇದರಿಂದ ನಮ್ಮ ಸಾಧನೆಯಾಗುವುದರ ಜೊತೆಗೆ ಸಮಾಜದಲ್ಲಿರುವ ಜಿಜ್ಞಾಸು ಜೀವಗಳ ಸಾಧನೆಯಾಗಬೇಕು ಎಂದು ಪ್ರಯತ್ನ ಮಾಡೋಣ.