‘ನಾನು ಹುಟ್ಟಿನಿಂದ ಹಿಂದೂ ಆಗಿರುವೆನು ಹಾಗೂ ನಾನು ಕೊನೆಯ ತನಕ ಹಿಂದೂವಾಗಿಯೇ ಉಳಿಯುವೆನು !’ – 75 ವರ್ಷದ ಮಂಝಲೀ ಮರಾಂಡಿಯವರ ತೀರ್ಮಾನ!
ಮತಾಂತರ ಇದು ರಾಷ್ಟ್ರಾಂತರವೇ ಆಗಿದೆ. ಹಿಂದೂಗಳು ಮತಾಂತರವಾದರೆ, ಅವರಿಗೆ ತಮ್ಮ ದೇಶದ ಮೇಲಿನ ನಿಷ್ಠೆ ಕಡಿಮೆಯಾಗಿ ಅವರು ಪೋಪ್‍ನ ಕಾಲಕೆಳಗೆ ಹೊರಳಾಡುತ್ತಿರುತ್ತಾರೆ. ಆದ್ದರಿಂದ ಮತಾಂತರವೆಂದರೆ ಒಂದು ರೀತಿ ದೇಶದ ಮಾನಸಿಕ ವಿಭಜನೆಯಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರವು ಶೀಘ್ರಾತಿಶೀಘ್ರವಾಗಿ ಮತಾಂತರದ ಮೇಲೆ ನಿರ್ಬಂಧ ಹೇರುವ ಕಾನೂನು ಮಾಡುವ ಅವಶ್ಯಕತೆಯಿದೆ ! – ಸಂಪಾದಕರು
ಹಜಾರಿಬಾಗ (ಝಾರಖಂಡ) – ಜಿಲ್ಲೆಯಲ್ಲಿನ ದಾರೂ ಪ್ರಭಾಗದಲ್ಲಿ ಕ್ರೈಸ್ತ ಮಿಶನರಿಗಳು ಕೊರೊನಾ ಪಿಡುಗಿನ ಕಾಲದಲ್ಲಿ 200 ಕ್ಕಿಂತ ಹೆಚ್ಚು ಹಿಂದೂಗಳನ್ನು ಮತಾಂತರಿಸಿದ್ದಾರೆ. ಇಲ್ಲಿನ 75 ವರ್ಷ ವಯಸ್ಸಿನ ಮಂಝಲೀ ಮರಾಂಡಿ ಎಂಬ ಮಹಿಳೆಯ ಕುಟುಂಬದವರೆಲ್ಲರೂ ಮತಾಂತರಗೊಂಡಿದ್ದಾರೆ. ಆದರೆ ಅವರು ಮಾತ್ರ ಮತಾಂತರಗೊಳ್ಳಲು ನಿರಾಕರಿಸಿದ್ದಾರೆ. ಅವರು ಕ್ರೈಸ್ತ ಮಿಷನರಿಗಳು ತಮಗೆ ಒಡ್ಡಿದ ಎಲ್ಲಾ ಆಮಿಷಗಳನ್ನು ನಿರಾಕರಿಸಿದ್ದು ‘ನಾನು ಹಿಂದೂವಾಗಿ ಹುಟ್ಟಿದ್ದೇನೆ ಹಾಗೂ ಕೊನೆಯವರೆಗೂ ಹಿಂದೂವಾಗಿಯೇ ಉಳಿಯುವೆನು’, ಎಂದು ದೃಢ ನಿರ್ಧಾರ ಮಾಡಿದ್ದಾರೆ.
1. ದಾರೂ ಪ್ರಭಾಗದಲ್ಲಿ ಕ್ರೈಸ್ತ ಮಿಶನರಿಗಳು ಪಿಪಚೋದಲ್ಲಿನ ಮಿಶನ್ ವಿದ್ಯಾಲಯವನ್ನು ಮುಂದಿರಿಸಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಮತಾಂತರಿಸಲು ಪ್ರಾರಂಭಿಸಿದ್ದಾರೆ. ಅವರು ಈ ಭಾಗದಲ್ಲಿ ಖುರ್ದ ಅಕಕುಮ್ಬಾ, ಬಂಧು ಟೊಲಾ, ಪಿಪರಾ ಟೋಲಾ, ಝರನಾ ಇತ್ಯಾದಿ ಸ್ಥಳಗಳಲ್ಲಿರುವ ಹಿಂದೂಗಳನ್ನು ಮತಾಂತರಗೊಳಿಸಿದ್ದಾರೆ. ಮತಾಂತರವಾಗಲು ಮಿಶನರಿಗಳು ಜನರಿಗೆ ಅನೇಕ ಆಮಿಷಗಳನ್ನು ನೀಡಿದ್ದಾರೆ.
2. ಮಂಝಲೀ ಮರಾಂಡಿ ಎಂಬ ಮಹಿಳೆಯು ಈ ಆಮಿಷಗಳಿಗೆ ಒಳಗಾಗದೆ ಅದನ್ನು ನಿರಾಕರಿಸಿದ್ದಾರೆ. ಮಂಝಲೀಯವರು ಮಾತನಾಡುತ್ತಾ, ಅವರನ್ನು ಬಿಟ್ಟು ಅವರ ಕುಟುಂಬದಲ್ಲಿನ 9 ಸದಸ್ಯರು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದು, ಈಗ ಅವರು ಮತಾಂತರಕೊಂಡ ಅವರ ಕುಟುಂಬದವರೊಂದಿಗೆ ವಾಸಿಸುತ್ತಿದ್ದಾರೆ. ಅವರು ಹನುಮಂತನ ಭಕ್ತರಾಗಿದ್ದು ಇತರ ದೇವತೆಗಳ ಪೂಜೆಯನ್ನೂ ಮಾಡುತ್ತಾರೆ. ಅವರು ಕುಟುಂಬದ ಎಲ್ಲಾ ಸದಸ್ಯರಿಗೆ ಮತ್ತೆ ಹಿಂದೂ ಧರ್ಮಕ್ಕೆ ಮರಳಿ ಬರಲು ವಿನಂತಿಸುತ್ತಿದ್ದಾರೆ; ಆದರೆ ಎಲ್ಲರೂ ಅವರತ್ತ ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಹೇಳಿದರು.
3. ಮಂಝಲೀಯವರು, ‘ಬಜರಂಗಬಲಿಯು ನಮ್ಮ ದೇವತೆಯಾಗಿದ್ದಾರೆ. ನಾವು ಜೀವನಪೂರ್ತಿ ಹಿಂದೂಗಳಾಗಿಯೇ ಉಳಿಯುವೆವು, ನನ್ನ ಧರ್ಮದಿಂದ ಯಾರೂ ನನ್ನನ್ನು ದೂರ ಮಾಡಲು ಸಾಧ್ಯವಿಲ್ಲ. ಆಮಿಷ ಒಡ್ಡಿ ಯಾರೂ ನನ್ನ ಧರ್ಮವನ್ನು ಬದಲಾಯಿಸಲು ಸಾಧ್ಯವಿಲ್ಲ”. ಎಂದು ಹೇಳಿದರು.
4. ಮಂಝಲೀ ಮರಾಂಡಿಯವರ ಇಬ್ಬರು ಪುತ್ರರಾದ ಬಾದಲ ಹಾಗೂ ಮೋಹನ ಇವರು 18 ತಿಂಗಳ ಮೊದಲೇ ಕ್ರೈಸ್ತರಾಗಿದ್ದಾರೆ. ದಾರೂ ಪೊಲೀಸ್ ಠಾಣೆಯಿಂದ ಈ ಮಿಶನ್ ವಿದ್ಯಾಲಯವು ಕೇವಲ 100 ಮೀಟರ್ ಅಂತರದಲ್ಲಿದರೂ ಕೂಡ ಪೊಲೀಸರಿಗೆ ಹಾಗೂ ಆಡಳಿತಕ್ಕೆ ಇದರ ಬಗ್ಗೆ ಯಾವುದೇ ಸುಳಿವು ಸಹ ಇಲ್ಲ.