‘ಯೇಸು : ನಾಟ್ ಫ್ರಾಮ್ ದ ಬಾಯಬಲ್ ಚಲನಚಿತ್ರದ ವಿರುದ್ಧ ‘ಮಹಂಮದ್ : ದ ಪೋಕ್‌ಸೋ ಕ್ರಿಮಿನಲ್ ಕಿರುಚಿತ್ರವನ್ನು ತಯಾರಿಸುವೆವು !

ಕೇರಳ ಚಲನಚಿತ್ರ ಜಗತ್ತನ್ನು ಇಸ್ಲಾಮಿ ಕಟ್ಟರವಾದಿಗಳು ನಿಯಂತ್ರಿಸುತ್ತಿದ್ದಾರೆ ಎಂದು ಮಾಜಿ ಕ್ರೈಸ್ತ ಶಾಸಕರ ಆರೋಪ !

  • ಹಿಂದೂಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಡೋಸ್ ಕುಡಿಸುವವರು ಇಂತಹ ಪ್ರಕರಣದಲ್ಲಿ ಮೌನವಾಗಿರುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !
  • ಕೇರಳದಲ್ಲಿ ಕ್ರೈಸ್ತಪ್ರೇಮಿ ಹಾಗೂ ಮುಸಲ್ಮಾನಪ್ರೇಮಿ ಸಾಮ್ಯವಾದಿ ಮುಂಚೂಣಿ ಸರಕಾರವು ಈಗ ಯಾರ ಪರ ವಹಿಸಲಿದೆ ಹಾಗೂ ಯಾರ ಮೇಲೆ ಕಾರ್ಯಾಚರಣೆ ನಡೆಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ !

ತಿರುವನಂತಪುರಂ (ಕೇರಳ) – ಕೇರಳದಲ್ಲಿನ ಚಲನಚಿತ್ರ ನಿರ್ದೇಶಕರಾದ ನಾದಿರ ಶಾಹರವರು ‘ಯೇಸೂ : ನಾಟ್ ಫ್ರಾಮ್ ದ ಬಾಯಬಲ್ (ಯೇಸು – ಬಾಯಬಲ್‌ನಲ್ಲಿಲ್ಲದ) ಎಂಬ ಚಲನಚಿತ್ರವನ್ನು ತಯಾರಿಸಲು ಪ್ರಾರಂಭಿಸಿದ್ದಾರೆ. ಈ ಚಲನಚಿತ್ರದ ಹೆಸರಿನಲ್ಲಿ ‘ಯೇಸು ಎಂದು ಇರುವುದರಿಂದ ರಾಜ್ಯದಲ್ಲಿನ ಕ್ರೈಸ್ತರು ಆವೇಶಗೊಂಡಿದ್ದಾರೆ; ಆದರೆ ನಾದಿರ ಶಾಹರವರು ಈ ಚಲನಚಿತ್ರದಲ್ಲಿ ಯೇಸುವಿನ ವಿಷಯವಾಗಿ ಏನೂ ಇಲ್ಲ; ಆದರೂ ಕ್ರೈಸ್ತರು ಕೇಳಲು ಸಿದ್ಧರಿಲ್ಲದ ಕಾರಣ ಚಲನಚಿತ್ರದ ಹೆಸರಿನಲ್ಲಿರುವ ‘ನಾಟ್ ಫ್ರಂ ದಿ ಬೈಬಲ್’ ಎಂಬ ವಾಕ್ಯವನ್ನು ತೆಗೆದು ಹಾಕಲಾಗುವುದು ಎಂದು ಅವರು ಹೇಳಿದ್ದಾರೆ.

೧. ಮಾಜಿ ಶಾಸಕರಾದ ಪಿ. ಸಿ. ಜಾರ್ಜರವರು ಕೇರಳ ಚಲನಚಿತ್ರವು ಜಗತ್ತನ್ನು ಇಸ್ಲಾಮಿ ಕಟ್ಟರವಾದಿಗಳಿಂದ ನಿಯಂತ್ರಿಸಲಾಗುತ್ತದೆ ಎಂದು ಆರೋಪಿಸಿದ್ದಾರೆ.

೨. ನಾದಿರ ಶಾಹರವರು ಫೇಸಬುಕ್ ನಲ್ಲಿ ಪೋಸ್ಟ್ ಮಾಡಿ, ಚಲನಚಿತ್ರದೊಂದಿಗೆ ಯೇಸುವಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ನಾನು ಯೇಸುವನ್ನು ಗೌರವಿಸುತ್ತೇನೆ. ಈ ಚಲನಚಿತ್ರದಲ್ಲಿ ಕೇವಲ ಆ ಪಾತ್ರದ ಹೆಸರು ‘ಯೇಸು ಎಂದಾಗಿದೆ. ಚಲನಚಿತ್ರ ಪ್ರದರ್ಶನವಾದ ಬಳಿಕ ಒಂದು ವೇಳೆ ಜನರ ಧಾರ್ಮಿಕ ಭಾವನೆ ನೋಯಿಸಿದರೆ, ಆಗ ನಾನು ಯಾವುದೇ ಶಿಕ್ಷೆಯನ್ನು ಅನುಭವಿಸಲು ತಯಾರಾಗಿರುವೆನು ಎಂದು ಹೇಳಿದ್ದಾರೆ.

ಕ್ರೈಸ್ತರಿಂದ ‘ಮಹಂಮದ್ : ದ ಪಾಕ್‌ಸೋ ಕ್ರಿಮಿನಲ್ ಎಂಬ ಕಿರುಚಿತ್ರವನ್ನು ತಯಾರಿಸುವುದಾಗಿ ಘೋಷಣೆ

ನಾದಿರ ಶಾಹರವರ ವಿರುದ್ಧ ಈಗ ‘ಕ್ರಿಶ್ಚಿಯನ್ ಅಸೋಸಿಏಶಿನ್ ಆಂಡ್ ಅಲಾಯಂಸ್ ಫಾರ್ ಸೋಶಲ್ ಆಕ್‌ಶನ್ (ಸಾಮಾಜಿಕ ಕಾರ್ಯಕ್ಕಾಗಿ ಕಾರ್ಯನಿರತವಾಗಿರುವ ಕ್ರೈಸ್ತ ಸಂಘಟನೆಯ ಯುತಿ) ಎಂಬ ಹೆಸರಿನ ಫೇಸ್‌ಬುಕ್ ಗುಂಪು ಕಿರುಚಿತ್ರವನ್ನು ತಯಾರಿಸುವುದಾಗಿ ಘೋಷಿಸಿದೆ ಹಾಗೂ ಅದರ ಹೆಸರು ‘ಮಹಂಮದ್ : ದ ಪೋಕ್‌ಸೋ ಕ್ರಿಮಿನಲ್ (ಅಲ್ಪವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ಮಾಡುವವರ ಮೇಲೆ ‘ಪೋಕ್‌ಸೊ ಕಾನೂನಿನ ಅಡಿಯಲ್ಲಿ ಅಪರಾಧವನ್ನು ನೋಂದಾಯಿಸಲಾಗುತ್ತದೆ. ಅದಕ್ಕನುಸಾರ ‘ಪೋಕ್‌ಸೋ ಅಪರಾಧಿ ಎಂಬ ಶಬ್ದವನ್ನು ಬಳಸಲಾಗಿದೆ.) ಎಂದು ಇಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ನವೆಂಬರ್ ೧೯ರಂದು ಈ ಕಿರುಚಿತ್ರ ಪ್ರದರ್ಶನ ಮಾಡುವುದಾಗಿ ಘೋಷಿಸಲಾಗಿದೆ. ಈ ಕಿರುಚಿತ್ರವು ಅಸ್ಸಾಂನ ದಿಬ್ರೂಗಡದಲ್ಲಿ ಮಹಂಮದ್ ಎಂಬ ಹೆಸರಿನ ಬಾಂಗಲಾದೇಶೀ ನುಸುಳುಕೋರರು ಓರ್ವ ೬ ವರ್ಷದ ಬಾಲಕಿಯನ್ನು ಬಲಾತ್ಕಾರ ಮಾಡಿದ ಘಟನೆಯ ಮೇಲೆ ಆಧಾರಿತವಾಗಿದೆ.