ಅಕ್ರಮವಾಗಿ ಭಾರತೀಯ ಪರಿಚಯಪತ್ರವನ್ನು ತಯಾರಿಸುವ ಬಾಂಗ್ಲಾದೇಶೀ ಗುಂಪಿನ ಬಂಧನ

  • ಅಪರಾಧ ಶಾಖೆಯ ಕಾರ್ಯಾಚರಣೆ !

  • ೫ ಜನ್ಮದಾಖಲಾತಿ, ೪ ಆಧಾರಕಾರ್ಡ್, ೪ ಪ್ಯಾನ್‌ಕಾರ್ಡ್ ಹಾಗೂ ೪ ಸಿಮ್‌ಕಾರ್ಡ್ ಸಹಿತ ಬಾಂಗ್ಲಾದೇಶೀ ಬ್ಯಾಂಕ್ ನ ೨ ಎಟಿಮ್ ವಶ

ಬಾಂಗ್ಲಾದೇಶೀ ನುಸುಳುಕೋರರಿಗೆ ನಂದನವನವಾಗಿರುವ ಭಾರತ ! ಭಾರತದೊಳಗೆ ಅಕ್ರಮವಾಗಿ ಪ್ರವೇಶಿಸುವ ಬಾಂಗ್ಲಾದೇಶೀ ನುಸುಳುಕೋರರ ಮೇಲೆ ಕಠೋರ ಕಾರ್ಯಾಚರಣೆಯಾಗದೆ ಈ ಪ್ರಕಾರಗಳು ನಿಲ್ಲುವುದಿಲ್ಲ – ಸಂಪಾದಕರು

ಠಾಣೆ – ಬಾಂಗ್ಲಾದೇಶೀ ನಾಗರಿಕರು ಭಾರತೀಯ ಪರಿಚಯಪತ್ರ (ಪಾಸ್ ಪೋರ್ಟ್) ವನ್ನು ತಯಾರಿಸಿ ಕೊಡುವ ಗುಂಪೊಂದನ್ನು ಠಾಣೆ ಅಪರಾಧ ಶಾಖೆಯು ಬಂಧಿಸಿದೆ. ಬಂಧಿಸಿದ ಆರೋಪಿಗಳಲ್ಲಿ ರಾಜೂ ಅಲಿಯಾಸ್ ಫಾರೂಖ ಸಫಿ ಮೊಲ್ಲಾ (ವಯಸ್ಸು ೨೯ ವರ್ಷ) ಎಂಬುವವನು ಬಾಂಗ್ಲಾದೇಶದ ಮೂಲನಿವಾಸಿಯಾಗಿದ್ದು ಅವನಿಗೆ ನ್ಯಾಯಾಲಯವು ಆಗಸ್ಟ್ ೧೬ರ ವರೆಗೆ ಪೊಲೀಸ್ ಕೊಠಡಿಯನ್ನು ವಿಧಿಸಿದೆ. ಅವನಿಂದ ಮಾಹಿತಿ ಪಡೆದುಕೊಂಡು ಕಲವಾ ಪೊಲೀಸರು ಸೂರತ್‌ಗೆ ಹೋಗಿ ೧೧ ಬಾಂಗ್ಲಾದೇಶೀ ನಾಗರಿಕರನ್ನು ವಶಪಡಿಸಿಕೊಂಡಿದ್ದಾರೆ. ಅವರಲ್ಲಿ ೩ ಆರೋಪಿಗಳನ್ನು ಕಲವಾ ಪೊಲೀಸರು ಬಂಧಿಸಿದ್ದು ಉಳಿದ ಎಂಟು ಆರೋಪಿಗಳನ್ನು ಸೂರತನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವರಿಂದ ಭಾರತೀಯ ಮಾದರಿಯ ೧೨ ಪರಿಚಯಪತ್ರ (ಪಾಸ್ ಪೋರ್ಟ್)ಗಳು, ಪಶ್ಚಿಮ ಬಂಗಾಳದಲ್ಲಿ ತಯಾರಿಸಲಾದ ೫ ಜನ್ಮದಾಖಲೆಗಳು, ೪ ಆಧಾರಕಾರ್ಡ್, ೪ ಪ್ಯಾನ್‌ಕಾರ್ಡ್ ಹಾಗೂ ೪ ಸಿಮ್‌ಕಾರ್ಡ್ ಸೇರಿದಂತೆ ಬಾಂಗಲಾದೇಶದ ಬ್ಯಾಂಕಿಗೆ ಸೇರಿದ ೨ ಎಟಿಮ್ ಈ ರೀತಿಯ ವಸ್ತುಗಳನ್ನು ವಶಪಡಿಸಕೊಳ್ಳಲಾಗಿದೆ. ಬಾಂಗ್ಲಾದೇಶೀ ಮಹಿಳೆಯರೂ ಭಾರತೀಯ ಪರಿಚಯಪತ್ರ (ಪಾಸ್ ಪೋರ್ಟ್) ಮಾಡಿಸಿಕೊಂಡು ವಿದೇಶದಲ್ಲಿ ವೇಶ್ಯಾವ್ಯವಸಾಯವನ್ನು ನಡೆಸಲು ಹೋಗುತ್ತಿರುವುದು ಸಹ ಅನ್ವೇಷಣೆಯಿಂದ ತಿಳಿದು ಬಂದಿದೆ.