ರಾಷ್ಟ್ರ ಧ್ವಜವನ್ನು ತಲೆಕೆಳಗಾಗಿ ಹರಿಸಿದ್ದಕ್ಕೆ ಕೇರಳದ ಭಾಜಪ ನೇತಾರರ ಮೇಲೆ ಅಪರಾಧ ನೋಂದಾಯಿಸಲಾಗಿದೆ

ತಿರುವನಂತಪುರಂ (ಕೇರಳ) – ಸ್ಥಳೀಯ ಭಾಜಪ ಕಾರ್ಯಾಲಯದಲ್ಲಿ ಧ್ವಜಾರೋಹಣ ಸಮಾರಂಭದ ಸಮಯದಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಆರೋಹಿಸಲಾಗಿರುವ ಪ್ರಕರಣದಲ್ಲಿ ಕೇರಳ ಪೊಲೀಸರು ಭಾಜಪದ ಕೇರಳ ಶಾಖೆಯ ಪ್ರಮುಖ ಕೆ. ಸುರೇಂದ್ರನ್ ಇವರ ಮೇಲೆ ಅಪರಾಧವನ್ನು ದಾಖಲಿಸಿದ್ದಾರೆ. ಈ ಬಗ್ಗೆ ಕೆ. ಸುರೇಂದ್ರನ್ ಇವರು ‘ನನ್ನ ಮೇಲೆ ರಾಜಕೀಯ ಉದ್ದೇಶದಿಂದಲೇ ಅಪರಾಧವನ್ನು ದಾಖಲಿಸಲಾಗಿದೆ. ರಾಷ್ಟ್ರಧ್ವಜವನ್ನು ಹಾರಿಸುವಾಗ ಅರ್ಧದಲ್ಲಿಯೇ ನಮಗೆ ನಮ್ಮ ತಪ್ಪು ಗಮನಕ್ಕೆ ಬಂದಿತ್ತು ಮತ್ತು ನಾವು ಅದನ್ನು ತಕ್ಷಣ ಸುಧಾರಿಸಿದೆವು. ಆದರೆ ಅನೇಕ ಸಾಮ್ಯವಾದಿ ಕಾರ್ಯಕರ್ತರು ಇದರ ವೀಡಿಯೋವನ್ನು ದೊಡ್ಡ ಪ್ರಮಾಣದಲ್ಲಿ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರ ಮಾಡಿದ್ದಾರೆ’ ಎಂದು ಹೇಳಿದರು.

ಮಾಕಪದ ಕಾರ್ಯಾಲಯದಲ್ಲಿ ರಾಷ್ಟ್ರಧ್ವಜವನ್ನು ಪಕ್ಷದ ಬಾವುಟದ ಸಮಾನ ಮಟ್ಟದಲ್ಲಿ ಹಾರಿಸಿ ಧ್ವಜ ಸಂಹಿತೆಯ ಉಲ್ಲಂಘನೆ

ರಾಜ್ಯದಲ್ಲಿ ಮಾಕಪದ ಸರಕಾರ ಇರುವುದರಿಂದ ಮಾಕಪದ ಕಾರ್ಯಕರ್ತರ ಮೇಲೆ ದೂರು ದಾಖಲಾಗುವುದಿಲ್ಲ, ಎಂಬುದನ್ನು ಗಮನದಲ್ಲಿಡಿ!

ಇನ್ನೊಂದು ಕಡೆಯಲ್ಲಿ ಅಧಿಕಾರದಲ್ಲಿರುವ ಮಾಕಪ ಪಕ್ಷವು ಮೊಟ್ಟಮೊದಲ ಬಾರಿಗೆ ತನ್ನ ಪಕ್ಷದ ಕಾರ್ಯಾಲಯದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದೆ, ಅದರ ಮೇಲೆಯೂ ಟೀಕೆಗಳಾಗುತ್ತಿವೆ. ಕಾಂಗ್ರೆಸ್ ನೇತಾರ ಕೆ. ಎಸ್. ಸಬರೀನಾಥನ್ ಇವರು ‘ಮಾಕಪದ ಕಾರ್ಯಾಲಯದಲ್ಲಿ ರಾಷ್ಟ್ರಧ್ವಜವನ್ನು ಮಾಕಪದ ಧ್ವಜದ ಸಮಾನ ಮಟ್ಟದಲ್ಲಿ ಹಾರಿಸಲಾಗಿದೆ. ಇದು ರಾಷ್ಟ್ರೀಯ ಧ್ವಜ ಸಂಹಿತೆಯ ಉಲ್ಲಂಘನೆಯಾಗಿದೆ. ಧ್ವಜ ಸಂಹಿತೆಯ ಅನುಸಾರ ಇತರ ಯಾವುದೇ ಧ್ವಜ ಅಥವಾ ಬಾವುಟವನ್ನು ರಾಷ್ಟ್ರಧ್ವಜದ ಮೇಲೆ ಅಥವಾ ಸಮಾನ ಮಟ್ಟದಲ್ಲಿ ಹಾರಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಈ ಬಗ್ಗೆ ಭಾಜಪವೂ ಟೀಕಿಸುವಾಗ ‘ಮಾಕಪ ಪಕ್ಷದ ಬಾವುಟದ ಸಮಾನ ಮಟ್ಟದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿರುವ ಸಚಿವರ ವಿರುದ್ಧ ದೂರನ್ನು ದಾಖಲಿಸಬೇಕು’ ಎಂಬ ಬೇಡಿಕೆ ಇಟ್ಟಿದೆ. ಆದರೆ ಮಾಕಪವು ಈ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದೆ.