ಪೋಲಂಡಿನ ವಾರ್ಸಾ ವಿಶ್ವವಿದ್ಯಾಲಯದ ಗ್ರಂಥಾಲಯದ ಗೋಡೆಯ ಮೇಲೆ ಉಪನಿಷತ್ತಿನ ಶ್ಲೋಕಗಳನ್ನು ಬರೆಯಲಾಗಿದೆ !

  • ಪಾಶ್ಚಿಮಾತ್ಯ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಉಪನಿಷತ್‌ಗಳ ಪ್ರಾಮುಖ್ಯತೆಯನ್ನು ಅರಿತುಕೊಳ್ಳಲಾಗಿದೆ; ಆದರೆ ಭಾರತದಲ್ಲಿ ತಥಾಕಥಿತ ಜಾತ್ಯತೀತರು ಮತ್ತು ಪ್ರಗತಿ(ಅಧೋ)ಗತಿ ಪರರು ಇದನ್ನು ಅರಿತುಕೊಂಡಿಲ್ಲ, ಇದು ನಾಚಿಕೆಗೇಡಿನ ಸಂಗತಿ !
  • ಭಾರತದ ಎಷ್ಟು ವಿಶ್ವವಿದ್ಯಾನಿಲಯಗಳು ಉಪನಿಷತ್‌ನಿಂದ ಇಂತಹ ಶ್ಲೋಕಗಳನ್ನು ಗೋಡೆಗಳ ಮೇಲೆ ಬರೆದಿವೆ ?

ನವದೆಹಲಿ : ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಛಾಯಾಚಿತ್ರ ಹರಿದಾಡುತ್ತಿದೆ. ಅದರಲ್ಲಿ ಪೋಲಂಡಿನ ವಾರ್ಸಾ ವಿಶ್ವವಿದ್ಯಾಲಯದ ಗ್ರಂಥಾಲಯದ ಹೊರಗೋಡೆಯಲ್ಲಿ ಉಪನಿಷತ್ತಿನ ಶ್ಲೋಕಗಳನ್ನು ಬರೆದಿರುವುದು ಕಂಡು ಬರುತ್ತಿದೆ. ಪೋಲೆಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿ ಮಾಹಿತಿಯನ್ನು ನೀಡುತ್ತಾ, ‘ಎಂತಹ ಸುಂದರ ದೃಶ್ಯವಾಗಿದೆ. ಉಪನಿಷತ್ತುಗಳು ಹಿಂದೂ ಧರ್ಮದ ಆಧಾರವಾಗಿರುವ ಸಂಸ್ಕೃತ ಗ್ರಂಥಗಳ ಅಂಗವಾಗಿವೆ.’

ಸಾಮಾಜಿಕ ಮಾಧ್ಯಮಗಳ ಮೂಲಕ ಅನೇಕರು ಈ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅವರಲ್ಲಿ ಒಬ್ಬರು, ಜಗತ್ತಿನಾದ್ಯಂತ ಹಿಂದೂ ಧರ್ಮವನ್ನು ಸ್ವೀಕರಿಸುತ್ತಿರುವಾಗ, ನಾವು ಮಾತ್ರ ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಆಕರ್ಷಿತರಾಗಿದ್ದೇವೆ ಎಂದು ಹೇಳಿದರು.