ಆಫ್ರಿಕಾ ವಲಸೆಗಾರರ ಹಡಗು ಸಮುದ್ರದಲ್ಲಿ ಮುಳುಗಿ 57 ಜನರ ಸಾವು !

ತ್ರಿಪೋಲೀ (ಲಿಬಿಯಾ) – ಆಫ್ರಿಕಾದಿಂದ ಯುರೋಪಿಗೆ ವಲಸೆ ಹೋಗುವವರನ್ನು ಕೊಂಡೊಯ್ಯುತ್ತಿದ್ದ ಹಡಗು ಲಿಬಿಯಾದ ಸಮುದ್ರದಲ್ಲಿ ಮುಳುಗಿದುದರಿಂದ 57 ಜನರು ಮೃತಪಟ್ಟಿದ್ದಾರೆ. ಹಡಗಿನ ಇಂಜಿನಿನಲ್ಲಿ ಉಂಟಾದ ದೋಷದಿಂದ ಈ ದುರ್ಘಟನೆ ನಡೆದಿರುವುದಾಗಿ ಹೇಳಲಾಗುತ್ತಿದೆ. ಯುರೋಪಿನಲ್ಲಿ ಒಳ್ಳೆಯ ಜೀವನಶೈಲಿಯಿರುವುದರಿಂದ ಆಫ್ರಿಕಾ ಹಾಗೂ ಸಿರಿಯಾದ ಲಕ್ಷಗಟ್ಟಲೆ ಜನರು ಕಳೆದ ಕೆಲವು ವರ್ಷಗಳಿಂದ ಯುರೋಪಿಗೆ ವಲಸೆ ಹೋಗುತ್ತಿದ್ದಾರೆ. ಆ ಕ್ಷೇತ್ರದಲ್ಲಿರುವ ಸಮುದ್ರದಲ್ಲಿ ಈ ರೀತಿಯ ದುರ್ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುತ್ತದೆ. ಈಗ ನಡೆದ ದುರ್ಘಟನೆಯಲ್ಲಿ 20 ಜನರನ್ನು ರಕ್ಷಿಸುವಲ್ಲಿ ಯಶಸ್ಸು ಸಿಕ್ಕಿದ್ದು ಅವರು ನೈಜೀರಿಯಾ, ಘಾನಾ ಹಾಗೂ ಗ್ಯಾಂಬಿಯಾ ದೇಶದವರಾಗಿದ್ದಾರೆ.