ವೃದ್ಧ ಕ್ರೈಸ್ತ ವ್ಯಕ್ತಿಯೊಬ್ಬರಿಂದ ೨ ಕೋಟಿ ರೂಪಾಯಿ ಖರ್ಚು ಮಾಡಿ ಶ್ರೀ ಸಿದ್ಧಿವಿನಾಯಕ ದೇವಾಲಯದ ನಿರ್ಮಾಣ !

ಮತಾಂಧ ಕ್ರೈಸ್ತರಿಂದ ವಿರೋಧ !

ಕ್ರೈಸ್ತ ಗೇಬ್ರಿಯಲ್ ನಾಜೆರಥ ಅವರು ಉಡುಪಿಯಲ್ಲಿ ನಿರ್ಮಿಸಿದ ಶ್ರೀ ಸಿದ್ಧಿವಿನಾಯಕ ದೇವಾಲಯ

ಮುಂಬಯಿ : ಮುಂಬಯಿನಲ್ಲಿ ವಾಸಿಸುತ್ತಿರುವ ೭೭ ವರ್ಷದ ಕ್ರೈಸ್ತ ಗೇಬ್ರಿಯಲ್ ನಾಜೆರಥ ಅವರು ತಮ್ಮ ಊರಿನಲ್ಲಿ ೨ ಕೋಟಿ ರೂಪಾಯಿ ಖರ್ಚು ಮಾಡಿ ಶ್ರೀ ಸಿದ್ಧಿವಿನಾಯಕ ದೇವಾಲಯವನ್ನು ನಿರ್ಮಿಸಿದರು. ಅವರು ತಮ್ಮ ಹೆತ್ತವರ ಸ್ಮರಣಾರ್ಥ ೨ ಕೋಟಿ ರೂಪಾಯಿಯ ವೆಚ್ಚದಲ್ಲಿ ಈ ದೇವಾಲಯವನ್ನು ನಿರ್ಮಿಸಿದ್ದಾರೆ.

ನಾಜೆರೆಥರು ೧೩ ನೇ ವಯಸ್ಸಿನಿಂದ ಮುಂಬಯಿನಲ್ಲಿದ್ದರು. ಅವರು ಮುಂಬಯಿನ ಪ್ರಭಾದೇವಿಯಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಕೆಲಸ ಮಾಡುತ್ತಿದ್ದರು. ಅವರು ಪ್ರತಿದಿನ ದೇವಾಲಯದ ಹೊರಗಿನಿಂದ ಶ್ರೀ ಸಿದ್ಧಿವಿನಾಯಕನಿಗೆ ನಮಸ್ಕರಿಸುತ್ತಿದ್ದರು. ಕ್ರಮೇಣ ಅವರು ಶ್ರೀ ಸಿದ್ಧವಿನಾಯಕನ ಭಕ್ತರಾದರು. ಕೆಲವು ವರ್ಷಗಳ ನಂತರ, ಅವರು ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಿದರು. ಅವರ ವ್ಯವಹಾರವು ಉತ್ತಮವಾಗಿ ನಡೆಯುತ್ತಿದ್ದಂತೆ ಅವರು ವೃದ್ಧರಾದ ನಂತರ, ಅವರು ಕರ್ನಾಟಕದ ಉಡುಪಿಯಲ್ಲಿರುವ ಶಿರ್ವಾ ಗ್ರಾಮಕ್ಕೆ ಹೋಗಲು ನಿರ್ಧರಿಸಿದರು. ಅಲ್ಲಿ ಅವರು ತಮ್ಮ ಜಮೀನಿನಲ್ಲಿ ಶ್ರೀ ಸಿದ್ಧಿವಿನಾಯಕನ ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದರು. ಅವರು ತಮ್ಮ ಸ್ನೇಹಿತರಾದ ಸತೀಶ್ ಶೆಟ್ಟಿ ಮತ್ತು ರತ್ನಾಕರ ಕುಕಿಯಾ ಅವರನ್ನು ದೇವಾಲಯದ ವಿಶ್ವಸ್ಥರನ್ನಾಗಿ ಮಾಡಿದರು. ಈ ದೇವಾಲಯದಲ್ಲಿರುವ ವಿಗ್ರಹವು ಮುಂಬಯಿನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿರುವ ವಿಗ್ರಹದಂತೆಯೇ ಇದೆ. ನಾಜೆರಥರ ಪ್ರಕಾರ ಅವರ ಜೀವನದಲ್ಲಿ ಏನೆಲ್ಲ ಸಿಕ್ಕಿದೆಯೋ ಅದು ಶ್ರೀ ಸಿದ್ಧಿವಿನಾಯಕನ ಕೃಪೆಯಿಂದ ಸಿಕ್ಕಿದೆ ಎಂಬ ಭಾವವಿದೆ.

ನಾಜೆರಥನನ್ನು ಚರ್ಚ್‍ಗೆ ಹೋಗದಂತೆ ತಡೆದ ಕ್ರೈಸ್ತರು !

ಇಂತಹ ಕ್ರೈಸ್ತರಲ್ಲಿ ಎಷ್ಟು ಜಾತ್ಯತೀತತೆ ಮತ್ತು ಸರ್ವಧರ್ಮ ಸಮಭಾವವಿದೆ ! ಎಂಬುದು ಗಮನಕ್ಕೆ ಬರುತ್ತದೆ ! ಈ ಬಗ್ಗೆ ಪ್ರಗತಿ(ಅಧೋಗತಿ)ಪರರು ಮತ್ತು ಜಾತ್ಯತೀತವಾದಿಗಳು ಏಕೆ ಮಾತನಾಡುವುದಿಲ್ಲ ?

ಗೇಬ್ರಿಯಲ್ ನಾಜೆರಥ

ಸತೀಶ್ ಶೆಟ್ಟಿಯವರು ಇದರ ಬಗ್ಗೆ ಹೇಳುವಾಗ, ದೇವಾಲಯ ನಿರ್ಮಾಣಕ್ಕೆ ನಾಜೆರಥರಿಗೆ ವಿರೋಧವನ್ನು ವ್ಯಕ್ತಪಡಿಸಲಾಗುತ್ತಿದೆ. ಅವರನ್ನು ಚರ್ಚ್‍ಗೆ ಹೋಗದಂತೆ ತಡೆಯಲಾಗುತ್ತಿದೆ. ದೇವಾಲಯದ ಉದ್ಘಾಟನೆಗೆ ನಾಜೆರಥರು ಚರ್ಚ್‍ನ ಪಾದ್ರಿಯನ್ನು ಆಹ್ವಾನಿಸಿದ್ದರು; ಆದರೆ, ಅವರು ಹಾಜರಾಗಲಿಲ್ಲ. ಅವರು ದೇವಸ್ಥಾನಕ್ಕೆ ಬರುವುದಾಗಿ ಮಾತ್ರ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.