ಖಾಸಗಿ ಆಸ್ಪತ್ರೆಗಳು ಹಣ ಗಳಿಸುವ ಯಂತ್ರಗಳಾಗಿವೆ !

ಖಾಸಗಿ ಆಸ್ಪತ್ರೆಗಳಿಗೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ!

ಅಗ್ನಿಸುರಕ್ಷೆಯ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸದ ಗುಜರಾತ ಸರಕಾರದ ಅಧಿಸೂಚನೆಯ ಬಗ್ಗೆ ನ್ಯಾಯಾಲಯದ ಅಸಮಾಧಾನ !

ನವದೆಹಲಿ – ಖಾಸಗಿ ಆಸ್ಪತ್ರೆಗಳು ಹಣ ಗಳಿಸುವ ಯಂತ್ರಗಳಾಗಿವೆ. ಆಸ್ಪತ್ರೆಗಳು ‘ರಿಯಲ್ ಎಸ್ಟೇಟ್’(ಜಮೀನು ಮಾರಾಟ ಮತ್ತು ಖರೀದಿಯ ವ್ಯವಸಾಯ) ಉದ್ಯೋಗವಾಗುತ್ತಿದೆ. ರೋಗಿಗಳಿಗೆ ಬಿಕ್ಕಟ್ಟಿನ ಸಮಯದಲ್ಲಿ ಸಹಾಯ ಮಾಡುವ ಬದಲು ಹಣ ಗಳಿಸುವುದು, ಇದು ಆಸ್ಪತ್ರೆಗಳ ಧ್ಯೇಯವಾಗಿ ಬಿಟ್ಟಿದೆ. ವಿಶೇಷವೆಂದರೆ ಮನುಷ್ಯನ ಜೀವವನ್ನು ಬಿಕ್ಕಟ್ಟಿನಲ್ಲಿ ಹಾಕಿ ಈ ಉದ್ಯೋಗವನ್ನು ನಿರ್ಮಿಸಲಾಗುತ್ತಿದೆ. ಜನರ ಪ್ರಾಣವನ್ನು ಅಪಾಯಕ್ಕೆ ತಳ್ಳಿ ಆಸ್ಪತ್ರೆಗಳ ಏಳಿಗೆ ಸಾಧಿಸಲು ನಾವು ಅನುಮತಿ ನೀಡುವುದಿಲ್ಲ. ಅದಕ್ಕಿಂತ ಆಸ್ಪತ್ರೆಗಳನ್ನು ಮುಚ್ಚಿದರೆ ಒಳ್ಳೆಯದು, ಎಂಬ ಪದಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಖಾಸಗಿ ಆಸ್ಪತ್ರೆಗಳಿಗೆ ಚಾಟಿ ಬೀಸಿದೆ. ‘ಖಾಸಗಿ ಆಸ್ಪತ್ರೆಗಳಿಗೆ ಸಣ್ಣ ‘ನಿವಾಸ ಭವನ’ ನಿರ್ಮಿಸಲಿಕ್ಕೆ ಅನುಮತಿಸುವ ಬದಲಾಗಿ ರಾಜ್ಯ ಸರಕಾರವು ಉತ್ತಮ ಶ್ರೇಣಿಯ ಆಸ್ಪತ್ರೆಗಳನ್ನು ನಿರ್ಮಿಸಬೇಕು’, ಎಂದೂ ನ್ಯಾಯಾಲಯವು ಹೇಳಿದೆ. ಗುಜರಾತ ಸರಕಾರವು ಜ್ಯಾರಿಗೊಳಿಸಿದ ಅಧಿಸೂಚನೆಯ ಬಗೆಗಿನ ಅರ್ಜಿಯ ಆಲಿಕೆಯ ಸಮಯದಲ್ಲಿ ನ್ಯಾಯಾಲಯವು ಖಾಸಗಿ ಆಸ್ಪತ್ರೆಗಳ ಕಿವಿ ಹಿಂಡಿತು.

ನ್ಯಾಯಾಲಯವು, ನಾವು ಒಮ್ಮೆ ಆದೇಶ ನೀಡಿದ ನಂತರ ಅದಕ್ಕೆ ಅಧಿಸೂಚನೆ ಜಾರಿಮಾಡಿ ಯಾರನ್ನೂ ಬೆದರಿಸಲು ಆಗುವುದಿಲ್ಲ. ಗುಜರಾತ ಸರಕಾರವು ಮಾತ್ರ್ರ ‘ಅಗ್ನಿ ಸುರಕ್ಷೆಯ ಮಾನದಂಡಗಳ ಬಗ್ಗೆ ‘ಸರ್ವೋಚ್ಚ ನ್ಯಾಯಾಲಯವು ನೀಡಿದ ಆದೇಶವನ್ನು ೨೦೨೨ರ ತನಕ ಪಾಲನೆ ಮಾಡದೇ ಇದ್ದರೂ ಪರವಾಗಿಲ್ಲ’ ಎಂಬಂತಹ ಅಧಿಸೂಚನೆಯನ್ನು ಜಾರಿಗೊಳಿಸಿ ಆಸ್ಪತ್ರೆಗಳಿಗೆ ಸ್ವಾತಂತ್ರ್ಯ ನೀಡಿದೆ. ಹೀಗೆ ಮಾಡಿದ್ದರಿಂದ ‘ಪ್ರತಿಯೊಂದು ಆಸ್ಪತ್ರೆಯಲ್ಲಿ ಯೋಗ್ಯವಾದ ಅಗ್ನಿಸುರಕ್ಷೆ ವ್ಯವಸ್ಥೆ ಕೂಡಿಸುವ ತನಕ ಜನರು ನರಳಿ ಸಾಯುವ ಘಟನೆಗಳು ನಡೆಯುತ್ತಲೇ ಇರುವುವು’, ಎಂದು ನ್ಯಾಯಾಲಯವು ಟೀಕಿಸಿದೆ.