ದೇಶದ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಶಾಖೆಯನ್ನು ತೆರೆಯಲಿರುವ ರಾ.ಸ್ವ.ಸಂಘ !

ಸಂಘದ ಈ ಶಾಖೆಯ ಮೂಲಕ ಮುಸಲ್ಮಾನರಲ್ಲಿ ಹೆಚ್ಚೆಚ್ಚು ರಾಷ್ಟ್ರಪ್ರೇಮ ಮೂಡಿ ಅವರು ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಸಹಭಾಗಿಯಾಗುವರು, ಎಂಬ ಅಪೇಕ್ಷೆ !

ಸಾಂಧರ್ಭಿಕ ಚಿತ್ರ

ಚಿತ್ರಕೂಟ (ಉತ್ತರಪ್ರದೇಶ) – ಇಲ್ಲಿ ಕಳೆದ ೫ ದಿನಗಳಿಂದ ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ರಾಜ್ಯ ಪ್ರಚಾರ ಸಭೆಯು ಮುಕ್ತಾಯವಾಯಿತು. ಇದರಲ್ಲಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಕೇವಲ ಹಿಂದೂಗಳಷ್ಟೇ ಅಲ್ಲ, ಮುಸಲ್ಮಾನರನ್ನೂ ಸಂಘದೊಂದಿಗೆ ಸೇರಿಸಲು ವಿಶೇಷ ಪ್ರಯತ್ನ ಮಾಡಲು ಒತ್ತು ನೀಡುವಂತೆ ನಿರ್ಧಾರವನ್ನು ಕೈಗೊಳ್ಳಲಾಯಿತು. ಅದಕ್ಕನುಸಾರ ದೇಶದ ಮುಸಲ್ಮಾನ ಬಹುಸಂಖ್ಯಾತ ಪ್ರದೇಶಗಳಲ್ಲಿ ಶಾಖೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಅದೇ ರೀತಿ ಕೊರೊನಾದ ಕಾಲದಲ್ಲಿ ಸ್ಥಗಿತಗೊಂಡಿರುವ ಕಾರ್ಯಕ್ರಮಗಳ ಜೊತೆಗೆ ಶಾಖೆಗಳನ್ನೂ ಪುನಃ ಆರಂಭಿಸಲಾಗುವುದು.