ಸತನಾ(ಮಧ್ಯಪ್ರದೇಶ)ದಲ್ಲಿ ದ್ವಿಚಕ್ರವನ್ನು ಸರಿಪಡಿಸಲು ಹೋಗಿದ್ದ ರೋಹಿತ್‌ನನ್ನು ನಿರ್ದಯವಾಗಿ ಹತ್ಯೆ ಗೈದ ಸಲಾಂ ಮತ್ತು ಸದ್ದಾಂ !

ಕ್ಲಚ್ ತಂತಿಯಿಂದ ಕುತ್ತಿಗೆ ಹಿಸುಕಿ ಹತ್ಯೆ !

ಶವವನ್ನು ಹೂಳಿ ಅದರ ಮೇಲೆ ‘ಹ್ಯಾಂಡ್‌ಪಂಪ್’ ನಿರ್ಮಿಸಿದರು !

ಮತಾಂಧರ ಹಿಂದೂ ದ್ವೇಷ ತಿಳಿಯಿರಿ ! ಇದರಿಂದ ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಎಷ್ಟು ಉದ್ಧಟರಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ! ಅಲ್ಪಸಂಖ್ಯಾತರಿಗಾಗಿ ಕೂಗಾಡುತ್ತಿದ್ದ ಪ್ರಗತಿ(ಅಧೋಗತಿ)ಪರರು ಮತ್ತು ಹಿಂದುದ್ವೇಷಿ ಪ್ರಸಾರ ಮಾಧ್ಯಮಗಳು ಮತಾಂಧರ ಕ್ರೌರ್ಯದ ಬಗ್ಗೆ ಒಂದು ಮಾತು ಕೂಡ ಹೇಳುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಸತನಾ (ಮಧ್ಯಪ್ರದೇಶ) – ದ್ವಿಚಕ್ರ ವಾಹನವನ್ನು ದುರುಸ್ತಿ ಮಾಡಲು ಹೋಗಿದ್ದ ರೋಹಿತ್ ಕುಶವಾಹಾ (ವಯಸ್ಸು ೧೯) ರನ್ನು ಸಲಾಂ ಖಾನ್ ಮತ್ತು ಸದ್ದಾಂ ಖಾನ್ ಇಬ್ಬರೂ ಸೇರಿ ಕ್ಲಚ್ ತಂತಿಯಿಂದ ಕತ್ತು ಹಿಸುಕಿ ಹತ್ಯೆಗೈದಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ರೋಹಿತ್ ಕಾಣೆಯಾಗಿದ್ದನು. ಆತನು ಎಲ್ಲಿಯೂ ಸಿಗದಿದ್ದಾಗ, ಆತನ ತಂದೆಯು ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪೊಲೀಸರು ಆತನನ್ನು ಹುಡುಕಿದರು; ಆದರೆ ಅವನು ಪತ್ತೆಯಾಗಿಲ್ಲ. ಅಂತಿಮವಾಗಿ, ಪೊಲೀಸರು ತಮ್ಮ ‘ಸೈಬರ್ ಸೆಲ್’ ಮತ್ತು ‘ಸಿಸಿಟಿವಿ ದೃಶ್ಯಾವಳಿ’ಗಳ ಸಹಾಯವನ್ನು ಪಡೆದರು. ಅದರಲ್ಲಿ ಪೊಲೀಸರು ಕೆಲವು ಪುರಾವೆಗಳನ್ನು ಕಂಡುಕೊಂಡರು. ಆ ಆಧಾರದ ಮೇಲೆ, ಸಲಾಮ್ ಮತ್ತು ಸದ್ದಾಂ ಅವರನ್ನು ಪೊಲೀಸರು ಕೂಲಂಕೂಷವಾಗಿ ವಿಚಾರಿಸಿದರು, ಆಗ ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ.

ಸಲಾಮ್ ಮತ್ತು ಸದ್ದಾಂ ಇಬ್ಬರಿಗೂ ರೋಹಿತ್‌ನಿಂದ ಸಾಲ ಬೇಕಿತ್ತು. ರೋಹಿತ್ ಅದನ್ನು ನಿರಾಕರಿಸಿದರು. ಇದರಿಂದ ಕೋಪಗೊಂಡ ಇಬ್ಬರು ರೋಹಿತ್‌ನನ್ನು ಕೊಂದರು. ನಂತರ, ಮೂರು ಅಡಿ ಆಳ ಮತ್ತು ಒಂದೂವರೆ ಅಡಿ ಅಗಲದ ಹಳ್ಳವನ್ನು ಅಗೆದು ರೋಹಿತ್ ಅವರ ದೇಹವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಅದರಲ್ಲಿ ಹೂಳಿದರು ಮತ್ತು ಅದರ ಮೇಲೆ ‘ಹ್ಯಾಂಡ್‌ಪಂಪ್’ ನಿರ್ಮಿಸಿದರು.