ಬಿಹಾರದ ಚಿರಾಗ್ ಪಾಸ್ವಾನ್ ರ ವಿರುದ್ಧ ಲೋಕ ಜನಶಕ್ತಿ ಪಕ್ಷದ ಐದೂ ಸಂಸದರಿಂದ ಬಂಡಾಯ !

ಭಾರತೀಯ ರಾಜಕೀಯದಲ್ಲಿ ತತ್ತ್ವಶೂನ್ಯತೆ ! ಪಕ್ಷಕ್ಕೆ ನಿಷ್ಠರಾಗಿರಲು ಸಾಧ್ಯವಾಗದ ಜನಪ್ರತಿನಿಧಿಗಳು ಎಂದಾದರೂ ಜನತೆಗೆ ನಿಷ್ಠರಾಗಿ ಉಳಿಯುವರೇ ?

ಸಂಸದರು ಜೆಡಿಯು ಪಕ್ಷದ ಮಾರ್ಗದಲ್ಲಿ !

ಪಶುಪತಿ ಕುಮಾರ ಪರಾಸ ಮತ್ತು ಚಿರಾಗ್ ಪಾಸ್ವಾನ್

ಪಾಟಲಿಪುತ್ರ (ಪಾಟ್ನಾ) – ಬಿಹಾರದ ಲೋಕ ಜನಶಕ್ತಿ ಪಕ್ಷದ ಮುಖಂಡ ರಾಮ ವಿಲಾಸ ಪಾಸ್ವಾನ್ ಅವರ ನಿಧನದ ನಂತರ ಅವರ ಪಕ್ಷವು ವಿಭಜನೆಯ ಹಾದಿಯಲ್ಲಿದೆ. ಪಕ್ಷದ ಎಲ್ಲಾ ಐದು ಸಂಸದರು ರಾಮ ವಿಲಾಸ ಪಾಸ್ವಾನ್ ಅವರ ಪುತ್ರ ಮತ್ತು ಅವರ ರಾಜಕೀಯ ಉತ್ತರಾಧಿಕಾರಿ ಚಿರಾಗ್ ಪಾಸ್ವಾನ ವಿರುದ್ಧ ಬಂಡಾಯ ಎದ್ದಿದ್ದಾರೆ. ಸಂಸದರು ಪಶುಪತಿ ಕುಮಾರ ಪರಾಸ (ಚಿರಾಗ್ ಪಾಸ್ವಾನ್ ಅವರ ಚಿಕ್ಕಪ್ಪ), ಪ್ರಿನ್ಸ್ ರಾಜ (ಚಿರಾಗ್ ಪಾಸ್ವಾನ್ ಅವರ ಸೋದರಸಂಬಂಧಿ), ಚಂದನ ಸಿಂಗ, ವೀಣಾ ದೇವಿ ಮತ್ತು ಮೆಹಬೂಬ ಅಲಿ ಕೇಶರ ಎಂಬುದು ಇವರ ಹೆಸರುಗಳಾಗಿವೆ.

ಇವರೆಲ್ಲರೂ ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಅವರ ಜನತಾದಳ (ಯುನೈಟೆಡ್) ಗೆ ಸೇರುತ್ತಿದ್ದಾರೆ ಎನ್ನಲಾಗಿದೆ. ಆದರೆ, ಐವರು ಸಂಸದರು ‘ನಮ್ಮನ್ನು ಸ್ವತಂತ್ರ ಗುಂಪು ಎಂದು ಗುರುತಿಸಬೇಕೆಂದು’ ಒತ್ತಾಯಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಮತ್ತು ಬಿಜೆಪಿಯೊಂದಿಗೆ ಸ್ಪರ್ಧಿಸದೆ ಸ್ವತಂತ್ರವಾಗಿ ಸ್ಪರ್ಧಿಸುವ ಚಿರಾಗ್ ಪಾಸ್ವಾನ ಅವರ ನಿರ್ಧಾರವು ಎಲ್ಲಾ ಐದು ಸಂಸದರಿಗೆ ಸ್ವೀಕಾರಾರ್ಹವಾಗಲಿಲ್ಲ. ಅಂದಿನಿಂದ, ಈ ವಿಭಜನೆಯಾಗುವ ಸಾಧ್ಯತೆಯನ್ನು ಹೇಳಲಾಗುತ್ತಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಚಿರಾಗ ಪಾಸ್ವಾನ, ‘ನನ್ನ ತಂದೆಯ ಸಾವಿನ ಆಘಾತದಿಂದ ನಾನು ಚೇತರಿಸಿಕೊಂಡಿದ್ದೇನೆ’, ಈ ಆಘಾತದಿಂದಲೂ ನಾನು ಚೇತರಿಸಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.