ಸನಾತನ ಸಂಸ್ಥೆಯ ‘Survival Guide (ಆಪತ್ಕಾಲಿನ ಸುರಕ್ಷೆ)’ ಈ ‘ಆಂಡ್ರಾಯ್ಡ್ ಆಪ್ ಲೋಕಾರ್ಪಣೆ

ಆಪ್ ಲೋಕಾರ್ಪಣೆ ಮಾಡುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಗೋವಾ – ಸನಾತನ ಸಂಸ್ಥೆಯ ‘Survival Guide (ಆಪತ್ಕಾಲಿನ ಸುರಕ್ಷೆ)’ ಎಂಬ ಆಪ್‌ಅನ್ನು ಮೇ ೧೪ ರ ಅಕ್ಷಯ ತದಿಗೆಯ ಶುಭ ಮುಹೂರ್ತದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಹಸ್ತದಿಂದ ‘ಆನ್‌ಲೈನ್ ಸತ್ಸಂಗದಲ್ಲಿ ಲೋಕಾರ್ಪಣೆ ಮಾಡಲಾಯಿತು. ‘ಮುಂಬರುವ ಮೂರನೇ ಮಹಾಯುದ್ಧ ಹಾಗೂ ನೈಸರ್ಗಿಕ ವಿಪತ್ತಿನ ಸಮಯದಲ್ಲಿ ಕೋಟಿಗಟ್ಟಲೆ ಜನರು ಸಾವನ್ನಪ್ಪುವರು, ಎಂದು ನಾಸ್ಟ್ರಾಡಾಮಸ್‌ನಂತಹ ಭವಿಷ್ಯಕಾರರು, ಪ.ಪೂ. ಗಗನಗಿರಿ ಮಹಾರಾಜರಂತಹ ಸಂತರು, ಮಹರ್ಷಿಗಳು ಮೊದಲಾದವರು ಈ ಮೊದಲೇ ಭವಿಷ್ಯವಾಣಿಯನ್ನು ಹೇಳಿಟ್ಟಿದ್ದಾರೆ. ಪ್ರಸ್ತುತ ಜಾಗತಿಕ ಘಟನಾವಳಿಗಳನ್ನು ಗಮನಿಸಿದರೆ ಆಪತ್ಕಾಲವು ಹೊಸ್ತಿಲಿಗೆ ಬಂದು ನಿಂತಿದೆ. ಈ ನಿಟ್ಟಿನಲ್ಲಿ ಈ ಆಪ್‌ನಲ್ಲಿ ‘ಆಪತ್ಕಾಲೀನ ಪರಿಸ್ಥಿತಿಯ ಸ್ವರೂಪವು ಹೇಗಿರುತ್ತದೆ ? ಆಪತ್ಕಾಲೀನ ಪರಿಸ್ಥಿತಿಯ ಕಾರಣಗಳು ಮತ್ತು ಅವುಗಳಿಂದ ರಕ್ಷಣೆಯಾಗಲು ಈಶ್ವರನ ಕೃಪೆಯನ್ನು ಹೇಗೆ ಸಂಪಾದಿಸುವುದು ? ಆಪತ್ಕಾಲೀನ ಪರಿಸ್ಥಿತಿಯನ್ನು ಎದುರಿಸಲು ದೈಹಿಕವಾಗಿ, ಮಾನಸಿಕವಾಗಿ, ಭೌತಿಕವಾಗಿ ಇತ್ಯಾದಿ ಸಿದ್ಧತೆಯನ್ನು ಹೇಗೆ ಮಾಡಬೇಕು ?, ಈ ಬಗ್ಗೆ ವಿವೇಚನೆ ಮಾಡಲಾಗಿದೆ, ಈ ಆಪ್ ಕನ್ನಡ, ಮರಾಠಿ, ಹಿಂದಿ, ಆಂಗ್ಲ, ಗುಜರಾತಿ, ತೆಲುಗು, ತಮಿಳು, ಮಲಯಾಳಂ ಮತ್ತು ನೇಪಾಳಿ ಹೀಗೆ ೯ ಭಾಷೆಗಳಲ್ಲಿ ಲಭ್ಯವಿದೆ.

ಒಮ್ಮೆ ಓದಿದ ಲೇಖನವನ್ನು ‘ಆಫ್‌ಲೈನ್ (ಇಂಟರನೆಟ್ ಇಲ್ಲದೇ)ನಲ್ಲಿ ಓದುವಂತಹ ಸೌಲಭ್ಯವಿದೆ. ಈ ಆಪ್ ‘ಪ್ಲೇ ಸ್ಟೋರ್ನಲ್ಲಿ ಉಚಿತವಾಗಿ ಲಭ್ಯವಿದೆ. ‘ವಾಚಕರು ಈ ಆಪ್‌ಅನ್ನು ತಮ್ಮ ಸಂಚಾರವಾಣಿಯಲ್ಲಿ ಡೌನ್‌ಲೋಡ್ ಮಾಡಿ ಮತ್ತು ಅದರ ಅಮೂಲ್ಯವಾದ ಜ್ಞಾನದ ಲಾಭವನ್ನು ಪಡೆದುಕೊಳ್ಳಬೇಕು ಮತ್ತು ತಮ್ಮ ಪರಿಚಯದವರು, ಸಂಬಂಧಿಕರನ್ನು ಡೌನ್ ಲೋಡ್ ಮಾಡಿಕೊಳ್ಳಲು ಹೇಳಿ, ಎಂದು ಸನಾತನ ಸಂಸ್ಥೆಯು ಮನವಿ ಮಾಡಿದೆ.

ಈ ಆಪ್ ಡೌನ್‌ಲೋಡ್ ಮಾಡಲು ಲಿಂಕ್ ಮಾಡಿ:

https://www.sanatan.org/survival-guide-app