ದಂತೇವಾಡಾ (ಛತ್ತೀಸಗಡ್) ದ ಕಾಂಗ್ರೆಸ್‍ನ ಮತಾಂಧ ಮುಖಂಡನಿಂದ ಫೇಸ್‍ಬುಕ್‍ನಲ್ಲಿ ಹಿಂದೂ ಧರ್ಮದ ಬಗ್ಗೆ ಅಕ್ಷೆಪಾರ್ಹ ಪೋಸ್ಟ್

ಪೊಲೀಸರಿಂದ ಅಪರಾಧ ದಾಖಲು

ಹಿಂದುತ್ವನಿಷ್ಠ ಸಂಘಟನೆಗಳಿಂದ ಬಂಧನಕ್ಕೆ ಆಗ್ರಹ

‘ಮೊದಲೇ ಮಂಗ, ಹೆಂಡ ಬೇರೆ ಕುಡಿದಿದೆ’ ಎಂಬ ಗಾದೆಗನುಸಾರ ‘ಮೊದಲೇ ಕಾಂಗ್ರೆಸಿಗ ಅದರಲ್ಲೂ ಮತಾಂಧ’, ಹೀಗಿರುವಾಗ ಹಿಂದೂ ಧರ್ಮವನ್ನು ಖಂಡಿತವಾಗಿಯೂ ಅವಮಾನಿಸುವನು ! ಇಂತಹವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು !

ದಂತೇವಾಡಾ (ಛತ್ತೀಸಗಡ) – ಇಲ್ಲಿನ ಕಿರಂದುಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಾಂಗ್ರೆಸ್‍ನ ನಾಯಕ ಬಬ್ಲು ಸಿದ್ದಕಿಯು ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ದೇವತೆಗಳ ವಿರುದ್ಧ ಪೋಸ್ಟ್ ಶೇರ್ ಮಾಡಿದ್ದರಿಂದ ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಪರಾಧವು ದಾಖಲಾಗಿದೆ. ಸಿದ್ದಿಕಿಯು ಪ್ರಸ್ತುತ ಪರಾರಿಯಾಗಿದ್ದು, ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ. ಆತನನ್ನು ಬಂಧಿಸುವಂತೆ ಬಜರಂಗದಳ ಮತ್ತು ಹಿಂದೂ ಸೇನಾ ಮುಂತಾದ ಹಿಂದುತ್ವನಿಷ್ಠ ಸಂಘಟನೆಗಳು ಒತ್ತಾಯಿಸಿದೆ. ಆತನನ್ನು ಬಂಧಿಸದಿದ್ದರೆ ಉಗ್ರವಾದ ಆಂದೋಲನ ಮಾಡುವ ಬಗ್ಗೆಯೂ ಎಚ್ಚರಿಕೆಯನ್ನು ನೀಡಿದ್ದಾರೆ. ಸಿದ್ದಕಿ ಹಿಂದೂ ಧರ್ಮ ಮತ್ತು ನ್ಯಾಯಾಂಗದ ಬಗ್ಗೆ ಫೇಸ್‍ಬುಕ್‍ನಲ್ಲಿ ಅಕ್ಷೆಪಾರ್ಹವಾಗಿ ಬರೆದಿದ್ದಾನೆ.