‘ಗಾಯತ್ರಿ ಮಂತ್ರದಿಂದ ಕೊರೋನಾವನ್ನು ಗುಣಪಡಿಸಬಹುದೇ?’ ಕುರಿತು ಸಂಶೋಧನೆ ನಡೆಯಲಿದೆ !

ಕೇಂದ್ರ ವಿಜ್ಞಾನ ಸಚಿವಾಲಯದ ಸಂಶೋಧನೆಗಾಗಿ ‘ಏಮ್ಸ್’ ಗೆ ೩ ಲಕ್ಷ ರೂಪಾಯಿ ಮಂಜೂರು !

ಗಾಯತ್ರಿ ಮಂತ್ರ ಮಾತ್ರವಲ್ಲ, ಇತರ ಮಂತ್ರಗಳನ್ನು ಸಹ ಇತರ ಕಾಯಿಲೆಗಳ ನಿವಾರಣೆಗಾಗಿ ಬಳಸಬಹುದು, ಎಂಬ ಬಗ್ಗೆಯೂ ಸಂಶೋಧನೆ ಮಾಡಬೇಕು !

ನವ ದೆಹಲಿ – ಕೇಂದ್ರ ವಿಜ್ಞಾನ ಸಚಿವಾಲಯವು ಗಾಯತ್ರಿ ಮಂತ್ರದಿಂದ ಕೊರೋನಾವನ್ನು ಗುಣಪಡಿಸಬಹುದೇ ? ಈ ಬಗ್ಗೆ ಸಂಶೋಧನೆಯನ್ನು ಮಾಡಲು ಹೃಷಿಕೇಶದಲ್ಲಿರುವ ಏಮ್ಸ್ ಆಸ್ಪತ್ರೆಗೆ ೩ ಲಕ್ಷ ರೂಪಾಯಿ ನೀಡಿದೆ.

ಈ ಆಸ್ಪತ್ರೆಯಲ್ಲಿ ಸಂಶೋಧನೆ ನಡೆಸಲು ಕೊರೊನಾದ ಸಾಮಾನ್ಯ ರೋಗಲಕ್ಷಣಗಳನ್ನು ಹೊಂದಿರುವ ೨೦ ಜನರನ್ನು ಆಯ್ಕೆ ಮಾಡಲಾಗುತ್ತದೆ. ಈ ಪೈಕಿ ಒಂದು ಗುಂಪಿಗೆ ನಿಯಮಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದರೆ, ಇನ್ನೊಂದು ಗುಂಪಿಗೆ ನಿಯಮಿತ ಔಷಧದೊಂದಿಗೆ ಆಯುರ್ವೇದ ಔಷಧ, ಗಾಯತ್ರಿ ಮಂತ್ರ ಪಠಣ ಮತ್ತು ಯೋಗಾಸನವನ್ನು ನಿಯಮಿತ ಮಾಡಲು ಹೇಳಲಾಗುತ್ತದೆ. ನಂತರ ಎರಡೂ ಗುಂಪಿನ ರೋಗಿಗಳ ಮೇಲಿನ ಪರಿಣಾಮಗಳನ್ನು ಪರಿಶೀಲಿಸಲಾಗುತ್ತದೆ. ರೋಗಿಗಳ ಮೇಲ್ವಿಚಾರಣೆಗಾಗಿ ತಜ್ಞ ವೈದ್ಯರನ್ನು ನಿಯೋಜಿಸಲಾಗುವುದು. ಈ ಸಂಶೋಧನೆಯು ಸುಮಾರು ೨-೩ ತಿಂಗಳುಗಳ ತನಕ ನಡೆಯಲಿದೆ. ಈ ಅವಧಿಯಲ್ಲಿ ರೋಗಿಗಳಿಗೆ ಸಾಮಾನ್ಯ ಔಷಧಿಗಳೊಂದಿಗೆ ಪತಂಜಲಿಯ ‘ಕೊರೊನಿಲ್’ ಈ ಆಯುರ್ವೇದ ಔಷಧವನ್ನೂ ನೀಡಲಾಗುವುದು. ಈ ಚಿಕಿತ್ಸೆಗಳಿಂದ ಕೊರೋನಾ ರೋಗಿಗಳಿಗೆ ಸಹಾಯ ಆಗುತ್ತದೆಯೇ ಎಂಬುದನ್ನು ನೋಡಬೇಕಾಗಿದೆ. ಎಂದು ಡಾ. ರುಚಿ ದುವಾ ಮಾಹಿತಿ ನೀಡಿದ್ದಾರೆ.