ಹಿರಿಯ ಪೊಲೀಸ್ ಅಧಿಕಾರಿಗಳು ಕಿರಿಯ ಪೊಲೀಸರೊಂದಿಗೆ ಮನೆಯಾಳಿನಂತೆ ವರ್ತಿಸುವ ಘಟನೆಗಳು ಸಾರಾಸಗಟಾಗಿ ನಡೆಯುತ್ತಿವೆ. ಇಂತಹ ಪ್ರಕರಣಗಳ ವಿಚಾರಣೆಯಾಗಿ ಪೊಲೀಸ್ ದಳದಲ್ಲಿ ಪರಿವರ್ತನೆಯಾಗುವುದು ಅವಶ್ಯಕ ! ಸಂಬಂಧಿತ ಪೊಲೀಸರು ನೀಡಿದ ದೂರಿನಲ್ಲಿ ಸತ್ಯವಿದ್ದರೆ, ಪೊಲೀಸ್ ಅಧಿಕಾರಿಗಳು ಅವರು ನೀಡಿದ ಮನವಿಯನ್ನು ಗಮನಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವರೇನು ? |
ಧಮತಾರಿ (ಛತ್ತೀಸಗಡ) – ಹಿರಿಯ ಪೊಲೀಸ್ ಅಧಿಕಾರಿಗಳು ಮನೆಯ ಪಾತ್ರೆಗಳನ್ನು ತೊಳೆಸಿಕೊಳ್ಳುತ್ತಾರೆ, ತೋಟಗಾರಿಕೆಯನ್ನು ಸಹ ಮಾಡಿಸುತ್ತಾರೆ ಮತ್ತು ಅಡಚಣೆ ಹೇಳಿದರೆ ಅವಾಚ್ಯ ಭಾಷೆಯಿಂದ ಬಯ್ಯುತ್ತಾರೆ ಮತ್ತು ಇಂತಹ ಇತರ ಆರೋಪಗಳನ್ನು ಹೊರಿಸಿ ಉಜ್ವಲ ದಿವಾಣ ಅವರು ತಮ್ಮ ರಾಜೀನಾಮೆಯನ್ನು ಮತ್ತು ನಿವೇದನೆಯನ್ನು ಪೊಲೀಸ್ ವರಿಷ್ಠಾಧಿಕಾರಿಗೆ ಒಪ್ಪಿಸಿದ್ದಾರೆ. ಉಜ್ವಲ ದಿವಾಣ ತಮಗಾದ ಕಿರುಕುಳದ ಬಗೆಗಿನ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ.
ದಿವಾಣ ಸಲ್ಲಿಸಿದ ಹೇಳಿಕೆಯಲ್ಲಿ, ಅವರು ತಮ್ಮ ಮೇಲಧಿಕಾರಿಗಳೊಂದಿಗೆ ತಮಗೆ ಬಂದ ಅಡಚಣೆಯ ಬಗ್ಗೆ ಹೇಳಿದರೆ ಅವರಿಗೆ ಹಳೆಯ ಪೊಲೀಸ್ ಕಾಯ್ದೆಯನ್ನು ಉಲ್ಲೇಖಿಸಿ ಅವಾಚ್ಯವಾಗಿ ನಿಂದಿಸುತ್ತಾರೆ ಎಂದು ಹೇಳಿದರು. ಅದೇರೀತಿ ಅವರು ತಮ್ಮ ಮೇಲಧಿಕಾರಿಗಳ ಬಗ್ಗೆ ಮಾತನಾಡಿದರೆ ಅವರಿಗೆ ನೋಟಿಸ್ ನೀಡುವುದು, ಅವರು ದೂರು ನೀಡಿದರೆ ಯಾವುದೇ ತನಿಖೆಯಿಲ್ಲದೆ ಅಮಾನತುಗೊಳಿಸುವುದು ಇತ್ಯಾದಿ ಹಿರಿಯ ಅಧಿಕಾರಿಗಳಿಂದ ಆಗುತ್ತಿರುತ್ತದೆ. ‘ಕೊರೋನಾ ಸೋಂಕಿನ ಸಮಯದಲ್ಲಿ, ಒಂದು ದಿನದ ವೇತನವನ್ನು ಕಡಿತಗೊಳಿಸದಂತೆ ಸರಕಾರ ನ್ಯಾಯಾಲಯಕ್ಕೆ ಹಲವಾರು ದೂರುಗಳನ್ನು ನೀಡಿದೆ. ಆದ್ದರಿಂದ ನನ್ನನ್ನು ನಕ್ಸಲ್ ಪೀಡಿತ ಭಾಗವಾದ ಮೆಚಕಾಗೆ ವರ್ಗಾಯಿಸಲಾಯಿತು. ನಾನು ಅಲ್ಲಿಗೆ ಹೋಗಲು ಸಿದ್ಧನಾಗಿದ್ದೆ; ಆದರೆ ಅದಕ್ಕಾಗಿ ನನಗೆ ಸಾಕಷ್ಟು ಸಮಯವಿಲ್ಲ’ ಎಂದು ದಿವಾಣ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ. ಉಜ್ವಲ ದಿವಾಣ ಕಳೆದ ೧೧ ವರ್ಷಗಳಿಂದ ಪೊಲೀಸ್ ಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ರಾಜೀನಾಮೆಯನ್ನು ಪೊಲೀಸ್ ಅಧೀಕ್ಷಕರು ಸ್ವೀಕರಿಸಿದ್ದರೂ, ಅದನ್ನು ಅನುಮೋದಿಸಲಾಗಿಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಉಜ್ವಲ ದಿವಾಣ ಅವರನ್ನು ಆಡಳಿತಾತ್ಮಕ ಆದೇಶದಂತೆ ವರ್ಗಾವಣೆ ಮಾಡಲಾಗಿದ್ದು, ಅವರು ಅಲ್ಲಿಗೆ ಹೋಗಲಿಲ್ಲ. ಅವರು ಅನೇಕ ಕಾರಣಗಳನ್ನು ನೀಡಿದರು. ಇದು ಪೊಲೀಸರಿಗೆ ಶೋಭಿಸುವುದಿಲ್ಲ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮನೀಶಾ ಠಾಕೂರ್ ಹೇಳಿದರು.