ಕರೀಮ್‌ಗಂಜ್(ಅಸ್ಸಾಂ) ನಲ್ಲಿ ದೇವಾಲಯವನ್ನು ದೋಚುವ ೧೨ ಮತಾಂಧರ ತಂಡಗಳ ಬಂಧನ !

ಅಸ್ಸಾಂನ ದೇವಾಲಯಗಳಲ್ಲಿ ಲೂಟಿ ಮಾಡುವ ಮತಾಂಧರ ಗುಂಪು ಸಕ್ರಿಯ

ಮತಾಂಧರ ತಂಡವು ಶ್ರೀಮಂತ ಇಸ್ಲಾಮಿಕ್ ಸಂಘಟನೆಗಳ ಕಚೇರಿಗಳನ್ನು ಅಥವಾ ಮಸೀದಿಗಳನ್ನು ದೋಚುವುದಿಲ್ಲ, ಆದರೆ ದೇವಾಲಯಗಳಲ್ಲಿ ಲೂಟಿ ಮಾಡುತ್ತಾರೆ. ಇದರಿಂದ ಅವರ ಮತಾಂಧತೆ ಕಂಡು ಬರುತ್ತದೆ !

ಕರೀಮ್‌ಗಂಜ್ (ಅಸ್ಸಾಂ) – ಬಾಂಗ್ಲಾದೇಶ ಗಡಿಯ ಬಳಿಯ ಕರೀಮ್‌ಗಂಜ್ ಜಿಲ್ಲೆಯ ಬಾಲಿಯಾದಲ್ಲಿರುವ ೩೦೦ ವರ್ಷಗಳ ಹಳೆಯ ಪ್ರಸಿದ್ಧ ಶ್ರೀ ನುರಸಿಂಹ ದೇವಸ್ಥಾನದಲ್ಲಿ ಸಶಸ್ತ್ರ ಮತಾಂಧರು ದಾಳಿ ಮಾಡಿ ಚಿನ್ನದ ಆಭರಣ, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಈ ಸಮಯದಲ್ಲಿ ದೇವಾಲಯದ ಅರ್ಚಕನ ಕುಟುಂಬ ಸದಸ್ಯರನ್ನು ಕಟ್ಟಿಹಾಕಿ ಥಳಿಸಲಾಯಿತು. ಈ ಪ್ರಕರಣದಲ್ಲಿ ನೀಲಂಬಜಾರ್ ಪೊಲೀಸರ ತಂಡ ೧೨ ಮತಾಂಧರನ್ನು ಬಂಧಿಸಿದೆ. ಈ ಗುಂಪು ದರೋಡೆಗೆ ಬಳಸಿದ ವಾಹನವನ್ನು ವಶಪಡಿಸಿಕೊಂಡು ಅದರ ಚಾಲಕನನ್ನು ಬಂಧಿಸಿದೆ.

೧. ದೇವಾಲಯದಲ್ಲಿ ಅರ್ಚಕರ ಕದ್ದ ಮೊಬೈಲ್ ಫೋನ್‌ನಿಂದ ಮತಾಂಧ ದರೋಡೆಕೋರರನ್ನು ತನಿಖಾ ತಂಡ ಪತ್ತೆ ಮಾಡಿದೆ ಎಂದು ಕರಿಮ್‌ಗಂಜ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಪೊಲೀಸರು ಅವರಿಂದ ಆಭರಣ ಮತ್ತು ೩ ಸಾವಿರ ರೂಪಾಯಿ ಜಪ್ತಿ ಮಾಡಿದೆ.

೨. ಅಸ್ಸಾಂನ ಹಲವಾರು ಜಿಹಾದಿ ಗುಂಪುಗಳು ಅಸ್ಸಾಂನ ಬ್ರಹ್ಮಪುತ್ರ, ಬರಾಕ್ ಕಣಿವೆ ಮತ್ತು ಕಚಾರನಲ್ಲಿನ ದೇವಾಲಯಗಳನ್ನು ಲೂಟಿ ಮಾಡುವಲ್ಲಿ ಸಕ್ರಿಯವಾಗಿವೆ. ಈ ಗುಂಪುಗಳು ಗೋಸಾಗಾಟದಲ್ಲೂ ಭಾಗಿಯಾಗಿವೆ. ಅವರಲ್ಲಿ ಹೆಚ್ಚಿನವರು ಬಾಂಗ್ಲಾದೇಶದ ನುಸುಳುವವರು ಆಗಿದ್ದಾರೆ.