ಯಾದಗಿರಿಯಲ್ಲಿ ಹಾಸಿಗೆ ಇಲ್ಲದ ಕಾರಣ ಕೊರೋನಾ ಪೀಡಿತನನ್ನು ದಾಖಲಿಸಲು ನಕಾರ!

‘ಪ್ರಸಾರಮಾಧ್ಯಮಗಳಿಗೆ ಹೇಳುವೆವು’, ಎಂದು ಹೇಳಿದ ನಂತರ ದಾಖಲಾತಿ !

ಪ್ರಸಾರಮಾಧ್ಯಮಗಳ ಭಯದಿಂದ ಆಸ್ಪತ್ರೆಯ ವೈದ್ಯರು ರೋಗಿಗಳನ್ನು ದಾಖಲಿಸಲು ಸಿದ್ಧರಾಗುತ್ತಾರೆ. ಇದರಿಂದ ಆಸ್ಪತ್ರೆಗಳ ಜನತಾದ್ರೋಹಿ ನಿರ್ವಹಣೆಯು ಗಮನಕ್ಕೆ ಬರುತ್ತದೆ. ಇಂತಹ ಘಟನೆಗಳು ನಡೆಯುತ್ತಿರುವಾಗ, ಕರ್ನಾಟಕ ಸರಕಾರವು ಮಧ್ಯಪ್ರವೇಶಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದು ಅಪೇಕ್ಷಿತವಿದೆ !

ಯಾದಗಿರಿ (ಕರ್ನಾಟಕ) – ಇಲ್ಲಿಯ ಭೀಮೇಶ ಎಂಬ ಹೆಸರಿನ ಕೊರೋನಾ ಪೀಡಿತ ರೋಗಿಗೆ ಹಾಸಿಗೆ ಇಲ್ಲ ಎಂದು ಹೇಳಿ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲು ನಿರಾಕರಿಸಲಾಯಿತು. ‘ಭೀಮೇಶನಿಗೆ ಏನೂ ಆಗಿಲ್ಲ’ ಎಂದು ವೈದ್ಯರು ವಾಪಾಸು ಕಳಿಸಲು ನೋಡಿದರು. ಭೀಮೇಶನ ಸಹೋದರಿಯು ಅವನ ಸ್ಥಿತಿ ಚೆನ್ನಾಗಿಲ್ಲ ಎಂದು ವೈದ್ಯರಿಗೆ ಹೇಳಿದಾಗ, ‘ನೀವು ವೈದ್ಯರೋ ಅಥವಾ ನಾನು ?’ ಎಂದು ಸಂಬಂಧಿತ ವೈದ್ಯರು ವಿಚಾರಿಸಿದರು. (ಇದರಿಂದ ಅವರ ಉದ್ಧಟತನ ಕಂಡುಬರುತ್ತದೆ ! – ಸಂಪಾದಕರು) ಈ ರೋಗಿಯ ಸ್ಥಿತಿಯು ಚಿಂತಾಜನಕವಾಗಿರುವುದನ್ನು ನೋಡಿದ ಸ್ಥಳಿಯ ನಾಗರಿಕರು ‘ಈ ವಿಷಯವನ್ನು ಪ್ರಸಾರಮಾಧ್ಯಮಗಳಿಗೆ ತಿಳಿಸುತ್ತೇವೆ’, ಎಂದು ಹೇಳಿದಾಗ ಭೀಮೇಶನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಇಲ್ಲಿನ ಜಿಲ್ಲಾ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡಲಾಗಿದೆ.