ಅತಿಕ್ರಮಣದ ತನಿಖೆ ಮಾಡುವ ಮೂಲಕ ಭೂಮಿಯನ್ನು ಮರುಪಡೆಯಲು ಸರಕಾರದ ಆದೇಶ
ಹಿಂದೂ ದೇವಾಲಯಗಳ ಸರಕಾರಿಕರಣ ಹಾಗೂ ದೇವಾಲಯಗಳ ಭೂಮಿಯ ಮೇಲೆ ಆಗುವ ಅತಿಕ್ರಮಣ ಈ ಎರಡೂ ಅಂಶಗಳಿಂದ ದೇವಾಲಯಗಳನ್ನು ಮುಕ್ತಗೊಳಿಸಲು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದೇ ಏಕೈಕ ಪರಿಹಾರವಾಗಿದೆ ಎಂದು ಭಕ್ತರು ಅರಿತುಕೊಳ್ಳಬೇಕು !
ಬೆಂಗಳೂರು – ಕರ್ನಾಟಕ ರಾಜ್ಯದ ಪ್ರಮುಖ ದೇವಾಲಯಗಳಿಗೆ ಸೇರಿದ ಕೋಟಿ ರೂಪಾಯಿ ಮೌಲ್ಯದ ಭೂಮಿ ಮಾಫಿಯಾಗಳ ಕೈ ಸೇರಿದೆ ಎಂಬ ಮಾಹಿತಿಯು ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ವಿಚಾರಣೆ ನಡೆಸಿ ದೇವಾಲಯದ ಆಸ್ತಿಯನ್ನು ರಕ್ಷಿಸಲು ರಾಜ್ಯ ಸರಕಾರವು ಮುಂದಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ವರದಿಯ ಪ್ರಕಾರ ೧೭೬ ಸ್ಥಳದ ಭೂಮಿಯನ್ನು ಅತಿಕ್ರಮಿಸಿದ ವಿಷಯ ಬಹಿರಂಗವಾಗಿದ್ದು ಮುಜರಾಯಿ ಇಲಾಖೆಯು ಸ್ಥಾವರ (ಸ್ಥಿರಾಸ್ತಿ) ಸಂಪತ್ತಿನ ನೊಂದಣಿಯ ಬಗ್ಗೆ ಗಮನವನ್ನು ಕೇಂದ್ರೀಕರಿಸಿದೆ ಭೂ ಮಾಫಿಯಾದವರಿಂದ ಭೂಮಿಯನ್ನು ಮರಳಿ ಪಡೆಯಲು ಸರಕಾರವು ಕಾನೂನು ಕ್ರಮವನ್ನು ಕೈಗೊಂಡಿದೆ. ಇಲಾಖೆಯ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ನೀಡಲಾಗಿದೆ. ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಸರ್ವೆ ಇಲಾಖೆಯ ಸಹಾಯದಿಂದ ಸಮೀಕ್ಷೆ ನಡೆಸಬೇಕು ಎಂದು ಸೂಚಿಸಲಾಗಿದೆ. ಸರಕಾರಿ ಭೂ ಅತಿಕ್ರಮಣದ ಹಿನ್ನೆಲೆಯಲ್ಲಿ ಎ.ಟಿ. ರಾಮಸ್ವಾಮಿ ಆಯೋಗದ ವರದಿಯಲ್ಲಿ ಉಲ್ಲೇಖಿಸಲಾದ ಅಂಶಗಳನ್ನು ಪರಿಗಣಿಸಲಾಗಿದೆ. ಅತಿಕ್ರಮಣಗಳನ್ನು ತೆಗೆದುಹಾಕಲು ಮತ್ತು ದೇವಾಲಯದ ಆಸ್ತಿಯನ್ನು ಸಂರಕ್ಷಿಸಲು ಸಹ ಆದ್ಯತೆ ನೀಡಲಾಗಿದೆ.
೧. ಮುಜರಾಯಿ ಇಲಾಖೆಯು ಐತಿಹಾಸಿಕ, ಸಾಂಪ್ರದಾಯಿಕ, ಸಾಂಸ್ಕೃತಿಕ ಹಿನ್ನೆಲೆ ಮತ್ತು ಜಾಗೃತ ದೇವತೆಗಳಿಗೆ ಹೆಸರುವಾಸಿಯಾದ ೩೬ ಸಾವಿರ ದೇವಾಲಯಗಳ ಉಸ್ತುವಾರಿಯನ್ನು ಹೊಂದಿದೆ. ಸಾವಿರಾರು ಎಕರೆ ಭೂಮಿಯು ಈ ದೇವಾಲಯದ ಅಧಿಪತ್ಯದ್ದಾಗಿದೆ. ಇದರ ಮೌಲ್ಯ ೧೦ ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಇರಬಹುದು ಎಂದು ಊಹಿಸಲಾಗಿದೆ.
೨. ಮುಜರಾಯಿ ಇಲಾಖೆಯು ಆಯುಕ್ತರಾದ ಕೆ.ಎ. ದಯಾನಂದ ಅವರು ದತ್ತಿ ದೇವಾಲಯಗಳ ಭೂಮಿಯನ್ನು ಎಣಿಕೆ, ನೋಂದಣಿ ಮತ್ತು ಅತಿಕ್ರಮಣದ ತನಿಖೆಯು ಪ್ರಗತಿಯಲ್ಲಿದೆ ಮತ್ತು ಸಂಪೂರ್ಣ ವರದಿಯನ್ನು ತಯಾರಿಸಲು ಸಮಯ ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು. ಪತ್ತೆಯಾದ ಜಮೀನುಗಳಲ್ಲಿ ಅತಿಕ್ರಮಣಕ್ಕೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಸಹಾಯದಿಂದ ಕ್ರಮ ಕೈಗೊಳ್ಳಲಾಗಿದೆ.
ಯಾವ ವಿಭಾಗದಲ್ಲಿ ಎಷ್ಟು ದೇವಾಲಯಗಳಿವೆ ?
ವಾರ್ಷಿಕ ೨೫ ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಆದಾಯ ಹೊಂದಿರುವ ದೇವಸ್ಥಾನಗಳನ್ನು ಎ ಗ್ರೇಡ್ ಎಂದು ವರ್ಗೀಕರಿಸಲಾಗಿದೆ, ೫ ರಿಂದ ೨೫ ಲಕ್ಷ ರೂಪಾಯಿಗಳ ಆದಾಯವನ್ನು ಹೊಂದಿರುವ ದೇವಸ್ಥಾನಗಳನ್ನು ಬಿ ಗ್ರೇಡ್ ಮತ್ತು ೫ ಲಕ್ಷ ಅಥವಾ ಅದಕ್ಕಿಂತ ಕಡಿಮೆ ಆದಾಯವನ್ನು ಹೊಂದಿರುವ ದೇವಾಲಯಗಳಿಗೆ ಸಿ ಗ್ರೇಡ್ ಎಂದು ವರ್ಗೀಕರಿಸಲಾಗಿದೆ. ಈ ಮಾನದಂಡದ ಪ್ರಕಾರ, ರಾಜ್ಯದಲ್ಲಿ ೨೦೫ ಎ ದರ್ಜೆಯ, ೧೩೯ ಬಿ ದರ್ಜೆಯ ಮತ್ತು ೩೪ ಸಾವಿರ ೨೨೦ ಸಿ ದರ್ಜೆಯ ದೇವಾಲಯಗಳು ರಾಜ್ಯದಲ್ಲಿವೆ.