ಕೊರೋನಾ ನಿಯಮಗಳನ್ನು ಪಾಲಿಸಲು ಹೇಳುತ್ತಿದ್ದ ಪೊಲೀಸರೊಂದಿಗೆ ವಾದಿಸಿದ್ದಕ್ಕಾಗಿ ನಗರಸಭೆ ಉಪಾಧ್ಯಕ್ಷನ ಪುತ್ರನ ಬಂಧನ

ಕೊರೋನಾದಿಂದಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಉದ್ಭವಿಸಿರುವಂತಹ ಸಮಯದಲ್ಲಿ ಈ ರೀತಿಯ ನಿರ್ಲಕ್ಷ್ಯವನ್ನು ತೋರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು !

ಗದಗ (ಕರ್ನಾಟಕ) – ಕೊರೋನದ ಎರಡನೇ ಅಲೆಯನ್ನು ನಿಯಂತ್ರಿಸಲು ರಾಜ್ಯದಾದ್ಯಂತ ಕಠಿಣ ನಿಯಮಗಳನ್ನು ವಿಧಿಸಲಾಗಿದೆ. ನಿಯಮಗಳನ್ನು ಉಲ್ಲಘಿಸಿ ಬೇಜವಾಬ್ದಾರತನದಿಂದ ವರ್ತಿಸುವ ನಗರಸಭೆ ಮಾಜಿ ಉಪಾಧ್ಯಕ್ಷರ ಪುತ್ರ ವಿನಾಯಕ ಬಾಕಳೆ ಅವರನ್ನು ಬಂಧಿಸಲಾಯಿತು. ವಿನಾಯಕ ಇವನು ತನ್ನ ಪೀಠೋಪಕರಣಗಳ ಅಂಗಡಿಯಲ್ಲಿ ಮಾಸ್ಕ್‌ಗಳು, ಸ್ಯಾನಿಟೈಜರ್‌ಗಳು, ಥರ್ಮಲ್ ಸ್ಕ್ಯಾನಿಂಗ್ ಅನ್ನು ಇಟ್ಟುಕೊಳ್ಳದೇ ಅವುಗಳನ್ನು ನಿರ್ಲಕ್ಷಿಸಿದ್ದಾನೆ. ನಿಯಮಗಳನ್ನು ಪಾಲಿಸುವಂತೆ ಪೊಲೀಸರು ಆತನಿಗೆ ಸೂಚನೆ ನೀಡಿದರು. ಆಕ್ರೋಶಗೊಂಡ ವಿನಾಯಕನು ಪೊಲೀಸರೊಂದಿಗೆ ವಾಗ್ವಾದ ನಡೆಸಿದನು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ನೋಡಿ ಪೊಲೀಸರು ವಿನಾಯಕನನ್ನು ಬಂಧಿಸಿದರು. ‘ಕೋವಿಡ್ ನಿಯಮಗಳ ಉಲ್ಲಂಘನೆ ಮಾಡಿದ್ದಲ್ಲಿ ಪ್ರಖ್ಯಾತ(ಗಣ್ಯ) ವ್ಯಕ್ತಿಗಳ ವಿರುದ್ಧವೂ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು’ ಎಂಬ ಸಂದೇಶವನ್ನು ಪೊಲೀಸರು ಈ ಘಟನೆಯ ಮೂಲಕ ನೀಡಿದ್ದಾರೆ.