ಜಿಂದ(ಹರಿಯಾಣಾ) ಇಲ್ಲಿಯ ಸರಕಾರಿ ಆಸ್ಪತ್ರೆಯಿಂದ ೧ ಸಾವಿರದ ೭೦೦ ಕೊರೋನಾ ಲಸಿಕೆಯ ಡೋಸ ಕಳ್ಳತನ !

ಇಂದು ದೇಶದಲ್ಲಿ ಆಕ್ಸಿಜನ್, ಕೊರೋನಾ ಲಸಿಕೆ, ರೆಮಡೆಸಿವಿರ ಈ ಅಂಶಗಳ ಕೊರತೆ ಇರುವುದರಿಂದ ಅದನ್ನು ಕಳ್ಳತನ ಮಾಡಲಾಗುತ್ತದೆ. ಮುಂದಿನ ಭೀಕರ ಆಪತ್ಕಾಲದಲ್ಲಿ ಜನರಿಗೆ ಅನ್ನ ನೀರು ಸಿಗುವುದು ಕಷ್ಟವಾಗುವಾಗ ಇದಕ್ಕಿಂತ ಭೀರಕ ಅರಾಜಕತೆಯು ಉದ್ಭವಿಸಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಜನರು ಈಗಲಾದರೂ ಸಾಧನೆಯನ್ನು ಮಾಡಿ ಈಶ್ವರನ ಕೃಪೆಯನ್ನು ಸಂಪಾದಿಸಿಕೊಳ್ಳಬೇಕು ಹಾಗೂ ಮುಂಬರುವ ಸಂಕಟದ ಸಮಯದಲ್ಲಿ ತಮ್ಮ ತಮ್ಮನ್ನು ರಕ್ಷಿಸಿಕೊಳ್ಳಬೇಕು !

ಜಿಂದ(ಹರಿಯಾಣಾ) – ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆಯ ಒಟ್ಟು ೧ ಸಾವಿರದ ೭೧೦ ಡೋಸ್ ಕಳ್ಳತನವಾಗಿದೆ. ಇವುಗಳಲ್ಲಿ ೧ ಸಾವಿರದ ೨೭೦ ಕೊವಿಶಿಲ್ಡ್ ಹಾಗೂ ೪೪೦ ಕೊವ್ಯಾಕ್ಸಿನ್‌ನ ಒಳಗೊಂಡಿವೆ. ಆರೋಗ್ಯ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂಧಿಗಳು ಆಸ್ಪತ್ರೆಗೆ ತಲುಪಿದಾಗ, ಆಗ ಪಿಪಿ ಸೆಂಟರ್‌ನ ಬೀಗ ಒಡೆದಿರುವುದು ಕಂಡುಬಂದಿತು. ನಂತರ ಒಳಗೆ ಹೋಗಿ ನೋಡಿದಾಗ, ಆಗ ಸ್ಟೋರ್ ಕೋಣೆಯ ಬೀಗ ಮುರಿದಿರುವುದು ಕಂಡು ಬಂದಿತು. ಕೊರೋನಾ ಲಸಿಕೆಯ ಪರೀಕ್ಷಣೆಯನ್ನು ಮಾಡಿದನಂತರ ಲಸಿಕೆಯು ಕಳ್ಳತನವಾಗಿರುವುದು ಬೆಳಕಿಗೆ ಬಂದಿತು.

ಅದೇ ಸಮಯದಲ್ಲಿ ಸೆಂಟರ್‌ನಲ್ಲಿ ಇಟ್ಟಿದ್ದ ೫೦ ಸಾವಿರ ರೂಪಾಯಿ ಸುರಕ್ಷಿತವಾಗಿರುವುದು ಕಂಡು ಬಂತು. ಈ ಆಸ್ಪತ್ರೆಯಲ್ಲಿ ಕೊವಿಡ್ ವಾರ್ಡ್ ನಿರ್ಮಿಸಲಾಗಿದ್ದು ಸಿಬ್ಬಂಧಿಗಳು ಹಗಲು ರಾತ್ರಿ ಕೆಲಸದಲ್ಲಿ ಇರುತ್ತಾರೆ. ಭದ್ರತಾ ಪಡೆಗಳನ್ನೂ ನೇಮಿಸಲಾಗಿತ್ತು ಆದರೂ ಈ ರೀತಿಯ ಲಸಿಕೆಯ ಕಳ್ಳತನವಾಗಿರುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಪೊಲೀಸರು ಕಳ್ಳತನದ ತನಿಖೆಯನ್ನು ನಡೆಸುತ್ತಿದ್ದಾರೆ.