ಕರ್ನಾಟಕದಲ್ಲಿ ಆರೋಗ್ಯ ಇಲಾಖೆಯ ಮತಿಗೆಟ್ಟ ಕಾರುಬಾರು !
|
ಯಾದಗಿರಿ – ಕೊರೋನಾ ಪರೀಕ್ಷಣೆಯ ವರದಿಯು ನಕಾರಾತ್ಮಕವಾಗಿದ್ದು ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದ ಸಮಯದಲ್ಲಿ ವ್ಯಕ್ತಿಯ ವರದಿಯಲ್ಲಿ ಸಕಾರಾತ್ಮಕ ಇದೆ ಎಂದು ತಿಳಿದನಂತರ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭಯಗೊಂಡರು. ಮೃತಪಟ್ಟ ವ್ಯಕ್ತಿಯಯ ಕೊರೋನಾ ಪೀಡಿತನೆಂದು ತಿಳಿದನಂತರ ಅಂತ್ಯಕ್ರಿಯೆಗೆ ಬಂದಿದ್ದ ಅವರ ಸಂಬಂಧಿಕರು ಪರಾರಿಯಾಗಿರುವ ಘಟನೆ ಇಲ್ಲಿಯ ಶಹಾಪುರ ಗ್ರಾಮದಲ್ಲಿ ನಡೆದಿದೆ. ತದನಂತರ ಮತ್ತೊಮ್ಮೆ ವರದಿಯು ನಕಾರಾತ್ಮಕ ಬಂದಿದೆ ಎಂದು ಹೇಳಿದಾಗ ಗೊಂದಲದ ವಾತಾವರಣವು ಉಂಟಾಯಿತು.
ರಸ್ತಾಪುರ ಗ್ರಾಮದಲ್ಲಿಯ ೭೫ ವರ್ಷದ ಓರ್ವ ವ್ಯಕ್ತಿಯು ಅನಾರೋಗ್ಯಪೀಡಿತನಾಗಿದ್ದರಿಂದ ಊರಿನ ಒಂದು ಖಾಸಗಿ ಆಸ್ಪತ್ರೆಯಲ್ಲಿ ಎಪ್ರಿಲ ೧೮ ರಂದು ಅವರನ್ನು ದಾಖಲಿಸಲಾಗಿತ್ತು. ಅದೇ ದಿನ ರೋಗಿಯ ಕೊರೋನಾ ಪರೀಕ್ಷಣೆಯನ್ನು ಮಾಡಲಾಗಿತ್ತು ಆಗ ರೋಗಿಯ ವರದಿಯು ನಕಾರಾತ್ಮಕ ಎಂದು ಬಂದಿದ್ದರಿಂದ ಆಧುನಿಕ ವೈದ್ಯರು ಅವರಿಗೆ ಚಿಕಿತ್ಸೆ ನೀಡಿದರು. ಚಿಕಿತ್ಸೆಯ ಸಮಯದಲ್ಲಿ ವ್ಯಕ್ತಿಯು ಸಾವನ್ನಪ್ಪಿದನು. ಮೃತ ವ್ಯಕ್ತಿಯ ಕೊರೋನಾ ಪರೀಕ್ಷಣೆಯು ನಕಾರಾತ್ಮಕವಾಗಿದ್ದರಿಂದ ಮೃತದೇಹದ ಅಂತ್ಯಕ್ರಿಯೆಗಾಗಿ ಸಂಬಂಧಿಕರಿಗೆ ಒಪ್ಪಿಸಲಾಯಿತು. ಎಪ್ರಿಲ್ ೨೦ ರಂದು ಅಂತ್ಯಕ್ರಿಯೆ ಮಾಡುವಾಗ ಆರೋಗ್ಯ ಇಲಾಖೆಯ ಸಿಬ್ಬಂದಿಯು ಓಡಿ ಬಂದು ಮೃತ ವ್ಯಕ್ತಿಯ ವರದಿಯು ಸಕಾರಾತ್ಮಕವಾಗಿದೆ ಎಂದು ಹಾಗೂ ಮೃತಪಟ್ಟ ವ್ಯಕ್ತಿಯು ಕೊರೋನಾ ಪೀಡಿತನೆಂದು ಹೇಳಿದರು. ಇದನ್ನು ಕೇಳುತ್ತಿದ್ದಂತೆ ಅಂತ್ಯಕ್ರಿಯೆಗೆ ಸೇರಿದ್ದರೆಲ್ಲರೂ ಹೆದರಿ ಎಲ್ಲರೂ ಕಾಲ್ಕಿತ್ತರು. ನಂತರ ಕೊರೋನಾ ನಿಯಮಗಳನ್ನು ಪಾಲಿಸುತ್ತಾ ಕುಟುಂಬದ ೪ ಜನರು ಅಂತ್ಯಕ್ರಿಯೆಯನ್ನು ಮುಗಿಸಿದರು. ಅಂತ್ಯಕ್ರಿಯೆ ಮುಗಿದನಂತರ ಮತ್ತೊಮ್ಮೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಬಂದು ಮೃತ ವ್ಯಕ್ತಿಯ ವರದಿ ನಕಾರಾತ್ಮಕವಾಗಿದೆ ಎಂದು ಹೇಳಿದರು. ಮೃತಪಟ್ಟ ವ್ಯಕ್ತಿಯ ಯಾವ ವರದಿಯು ನಿಜವಾಗಿದೆ ಎಂದು ತಿಳಿಯದೇ ಕಂಗೆಟ್ಟರು.
ಆಶ್ಚರ್ಯವೆಂದರೆ ಆ ವ್ಯಕ್ತಿಯ ಗಂಟಲಿನ ಹಾಗೂ ಮೂಗಿನ ದ್ರವವನ್ನು ಒಂದೇ ಸಲ ತೆಗೆದುಕೊಂಡು ಪರೀಕ್ಷಣೆಗಾಗಿ ಕಳುಹಿಸಿದ ನಂತರ ಅದರ ೩ ವರದಿಯು ಬಂದಿತ್ತು. ಮೊದಲು ನಕಾರಾತ್ಮಕ, ಎರಡನೇಯದು ಸಕಾರಾತ್ಮಕ ಮತ್ತು ಮೂರನೇಯದು ನಕಾರಾತ್ಮಕ ಹೀಗೆ ಬಂದಿದ್ದರಿಂದ ಗೊಂದಲದ ಪರಿಸ್ಥಿತಿಯು ಉದ್ಭವಿಸಿದೆ.