ಆಂಬ್ಯುಲನ್ಸ್ ಮತ್ತು ಅಂತ್ಯಕ್ರಿಯೆಯ ಖರ್ಚಿಗಾಗಿ ಬೆಂಗಳೂರಿನಲ್ಲಿ ಮೂರುವರೆ ಸಾವಿರ ರೂಪಾಯಿಯ ಬದಲಿಗೆ ೬೦ ಸಾವಿರ ರೂಪಾಯಿಯ ಬೆಡಿಕೆ !

ಇಂತಹ ಲೂಟಿಗಳ ಬಗ್ಗೆ ಸರಕಾರವು ಯಾಕೆ ಗಮನ ಹರಿಸುತ್ತಿಲ್ಲ ? ಆಪತ್ಕಾಲದಲ್ಲಿ ಮೃತ ವ್ಯಕ್ತಿಯ ಹಣೆಯ ಮೇಲಿನ ಬೆಣ್ಣೆ ತಿನ್ನುವಂತಹ ಸಮಾಜದಲ್ಲಿನ ಇಂತಹ ಜನಪ್ರತಿನಿಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ !

ಬೆಂಗಳೂರು – ಕೊರೋನಾ ಮಹಾಮಾರಿಯಿಂದಾಗಿ ದೇಶದಲ್ಲಿಯ ಜನರ ಸ್ಥಿತಿಯು ಚಿಂತಾಜನಕವಾಗಿರುವಾಗ ಜನರಿಗೆ ತಮ್ಮ ಕುಟುಂಬದವರನ್ನು ಬದುಕಿಸಲು ಪರಾಕಾಷ್ಠೆಯ ಪ್ರಯತ್ನ ಮಾಡಬೇಕಾಗುತ್ತಿದೆ. ಮಹಾಮಾರಿಯಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ: ಆದರೆ ಇಂತಹ ಕಠಿಣ ಪ್ರಸಂಗದಲ್ಲಿಯೂ ಶವದ ನೆತ್ತಿಯ ಮೇಲಿನ ಬೆಣ್ಣೆಯನ್ನು ತಿನ್ನುವಂತಹ ಘಟನೆಯು ಇಲ್ಲಿಯ ಅಂತ್ಯಕ್ರಿಯೆ ಮಾಡುವವರಿಂದ ಆಗುತ್ತಿರುವುದು ಬೆಳಕಿಗೆ ಬಂದಿದೆ. ಇಲ್ಲಿಯ ಮತ್ತಿಕೆರೆಯ ಆಂಬ್ಯುಲನ್ಸ್ ಮತ್ತು ಅಂತ್ಯಕ್ರಿಯೆಯ ಖರ್ಚಿಗಾಗಿ ಸಂಬಂಧಿಕರಿಂದ ಮೂರುವರೆ ಸಾವಿರ ರೂಪಾಯಿಯ ಬದಲಿಗೆ ೬೦ ಸಾವಿರ ರೂಪಾಯಿಯ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ. ತಂದೆಯ ಅಂತ್ಯಕ್ರಿಯೆಗಾಗಿ ೬೦ ಸಾವಿರ ರೂಪಾಯಿ ಬೇಡಿದ್ದರಿಂದ ತನ್ನ ಮಂಗಳಸೂತ್ರವನ್ನು ಮಾರಲೂ ವಿವಾಹಿತ ಪುತ್ರಿಯು ಸಿದ್ಧಳಾದಳು.

ಮತ್ತಿಕೆರೆಯಲ್ಲಿ ಕೊರೋನಾದಿಂದಾಗಿ ಓರ್ವ ವಿವಾಹಿತೆಯ ತಂದೆಯು ಮನೆಯಲ್ಲಿ ತೀರಿಕೊಂಡಿದ್ದರು. ಅವರ ಸಾವನ್ನಪ್ಪಿರುವುದು ಆ ಯುವತಿಗೆ ಗೊತ್ತಿರಲಿಲ್ಲ. ಚಿಕಿತ್ಸೆಗಾಗಿ ಆಕೆಯು ತಂದೆಯನ್ನು ಆಂಬ್ಯುಲನ್ಸ್ ನಿಂದ ಚಿಕಿತ್ಸಾಲಯಕ್ಕೆ ಕರೆದುಕೊಂಡು ಹೋಗಿದ್ದಳು. ಅವರ ಪರೀಕ್ಷಣೆಯನ್ನು ಮಾಡಿ ಅವರು ತೀರಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದರು. ಶವವನ್ನು ಕೊಂಡೊಯ್ಯುವ ವಾಹನದಿಂದ ಶವವನ್ನು ಖಾಸಗಿ ಚಿತಾಗಾರದಲ್ಲಿ ಇಡಲಾಗಿತ್ತು. ಆಗ ಶವ ಇಡಲು ಅದೇರೀತಿ ಅಂತ್ಯಕ್ರಿಯೆಗಾಗಿ ಆಂಬ್ಯಲನ್ಸ್‌ನ ಮಾಲಿಕನು ೬೦ ಸಾವಿರ ರೂಪಾಯಿ ಕೇಳಿದನು. ಪ್ರತ್ಯಕ್ಷವಾಗಿ ಒಂದು ದಿನದ ಬಾಡಿಗೆ ೩ ಸಾವಿರದ ೫೦೦ ರೂಪಾಯಿ ಇದೆ. ೪೦ ಸಾವಿರ ಕೊಟ್ಟರೇ ಫ್ಲೈಓವರ್ ನಿಂದ ಕೆಳಗೆ ಎಸೆಯಲಾಗುವುದು ಎಂದು ಮಾಲೀಕನು ಬೆದರಿಕೆಯನ್ನು ಸಹ ಹಾಕಿದನು ಈ ಘಟನೆಯ ಮಾಹಿತಿಯು ಒಂದು ಸುದ್ದಿ ವಾಹಿನಿಗೆ ಸಿಕ್ಕಿದನಂತರ ಅದರ ಪ್ರತಿನಿಧಿಯು ಆ ಘಟನಾ ಸ್ಥಳಕ್ಕೆ ತಲುಪಿದರು. ಅವರನ್ನು ನೋಡಿ ಮಾಲೀಕರು ಹೆದರಿದರು ಮತ್ತು ಆತ ೧೩ ಸಾವಿರ ತೆಗೆದುಕೊಳ್ಳಲು ಒಪ್ಪಿದನು. (೩ ಸಾವಿರದ ೫೦೦ ರೂಪಾಯಿ ಶುಲ್ಕ ಇರುವಾಗ ೧೩ ಸಾವಿರ ರೂಪಾಯಿ ತೆಗೆದುಕೊಳ್ಳುವುದು, ಇದೂ ಸಹ ಲೂಟಿಯೇ ಆಗಿದೆ. ಇಂತಹವರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು !ಸರಕಾರವು ಇಂತಹ ಪ್ರಸಂಗಗಳತ್ತ ಗಮನ ಹರಿಸಬೇಕು! – ಸಂಪಾದಕರು) ವಿವಾಹಿತೆಯು ಮಾಲೀಕನಿಗೆ ಮಂಗಳಸೂತ್ರವನ್ನು ಮಾರಿ ೬೦ ಸಾವಿರ ಹಣವನ್ನು ನೀಡಲು ಸಿದ್ಧರಾಗಿದ್ದರು; ಆದರೆ ಹಾಗೆ ಮಾಡುವ ಪ್ರಮೆಯ ಬರಲಿಲ್ಲ.