ದೇವರನ್ನು ನಂಬದ ಕಮ್ಯುನಿಸ್ಟರು ದೇವರ ಹೆಸರನ್ನು ಏಕೆ ಇಟ್ಟುಕೊಂಡಿರುತ್ತಾರೆ ? – ಮಹಂತ ಪವನಕುಮಾರ ದಾಸ ಶಾಸ್ತ್ರೀಜಿ, ಮಹಾಮಂತ್ರಿ, ಅಯೋಧ್ಯಾ ಸಂತ ಸಮಿತಿ

ಪ್ರಭು ಶ್ರೀರಾಮ ಮತ್ತು ರಾಮರಾಜ್ಯವು ಏಕೆ ಆದರ್ಶವಾಗಿದೆ ? ಈ ವಿಷಯದಲ್ಲಿ ಆನ್‌ಲೈನ್ ವಿಶೇಷ ಪರಿಸಂವಾದ !

ಶ್ರೀರಾಮನನ್ನು ನಂಬದ ಮತ್ತು ‘ಶ್ರೀರಾಮನು ದೇವರು ಅಲ್ಲ’ ಎಂದು ಹೇಳುವ ಕಮ್ಯುನಿಸ್ಟ್ ಮತ್ತು ಎಡಪಂಥೀಯರು ಜನರು ಇಂದಿನ ಕಾಲದಲ್ಲಿ ಈಗಲೂ ಇದ್ದಾರೆ ಮಾತ್ರವಲ್ಲ, ಸತ್ಯಯುಗದಲ್ಲಿಯೂ ಇದ್ದರು. ಹಿರಣ್ಯಕಶ್ಯಪುವು ಭಕ್ತ ಪ್ರಹ್ಲಾದನಿಗೆ ‘ದೇವರು ಎಲ್ಲಿದ್ದಾನೆ?’ ಎಂದು ಕೇಳಿದ್ದನು. ಹಿರಣ್ಯಕಶ್ಯಪುವು ಸತ್ಯಯುಗದ ಕಮ್ಯುನಿಸ್ಟ್‌ನೇ ಆಗಿದ್ದನು. ಸತ್ಯಯುಗದಲ್ಲಿ ಭಗವಂತನು ಕಂಬದಿಂದ ಪ್ರತ್ಯಕ್ಷನಾದನು. ಹಾಗೆಯೇ ಇಂದಿನ ಕಲಿಯುಗದಲ್ಲಿ ‘ರಾಮ ಇಲ್ಲ’ ಎನ್ನುವವರಿಗಾಗಿ ಭಗವಾನ ಶ್ರೀರಾಮನು ಭೂಮಿಯಿಂದ (ಉತ್ಖನನದಿಂದ) ಪ್ರತ್ಯಕ್ಷನಾದರು. ಕಮ್ಯುನಿಸ್ಟರು ರಾಮನನ್ನು ಒಪ್ಪುವುದಿಲ್ಲ ಎಂದಾದರೆ ‘ಸೀತಾರಾಮ ಯೆಚೂರಿ’ಯವರಂತಹ ಕಮ್ಯುನಿಸ್ಟರು ತಮ್ಮ ಹೆಸರನ್ನು ‘ಸೀತಾರಾಮ’ ಎಂದು ಏಕೆ ಇಟ್ಟುಕೊಂಡಿದ್ದಾರೆ ? ಅವರು ತಮ್ಮ ಹೆಸರನ್ನು ಏಕೆ ಬದಲಾಯಿಸಿಕೊಳ್ಳುವುದಿಲ್ಲ ? ಅನೇಕ ಕಮ್ಯುನಿಸ್ಟರು ತಮ್ಮ ಮನೆಗಳಲ್ಲಿ ದೇವದೇವಿಯರ ಮೂರ್ತಿಗಳನ್ನು ಮತ್ತು ಚಿತ್ರಗಳನ್ನು ಇಟ್ಟುಕೊಂಡಿರುತ್ತಾರೆ ಮತ್ತು ಹೊರಗೆ ದೇವತೆಗಳಿಗೆ ವಿರೋಧಿಸುತ್ತಾರೆ ಎಂಬುದು ವಾಸ್ತವ ಸಂಗತಿಯಾಗಿದೆ. ದ್ವೇಷದಿಂದಲೇ ಇರಬಹುದು, ರಾವಣನು ಶ್ರೀರಾಮನ ಹೆಸರನ್ನು ಉಚ್ಚರಿಸಿದ್ದರಿಂದ ಅವನ ಉದ್ಧಾರವಾಯಿತು. ಆದರೆ ತನ್ನ ಮುಕ್ತಿಗಾಗಿ ಚಡಪಡಿಸುವ ಕಮ್ಯುನಿಸ್ಟರನ್ನು ಸಹ ಭಗವಾನ ಶ್ರೀರಾಮನು ಉದ್ಧರಿಸುವನು ಎಂದು ಉತ್ತರಪ್ರದೇಶದ ‘ಅಯೋಧ್ಯಾ ಸಂತ ಸಮಿತಿ’ಯ ಪ್ರಧಾನ ಕಾರ್ಯದರ್ಶಿ ಮಹಂತ ಪವನಕುಮಾರದಾಸ ಶಾಸ್ತ್ರೀಜಿ ಮಹಾರಾಜರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ‘ಪ್ರಭು ಶ್ರೀರಾಮ ಮತ್ತು ರಾಮರಾಜ್ಯವು ಏಕೆ ಆದರ್ಶವಾಗಿದೆ ?’ ಎಂಬ ‘ಆನ್‌ಲೈನ್ ವಿಶೇಷ ಪರಿಸಂವಾದ’ದಲ್ಲಿ ಅವರು ಮಾತನಾಡುತ್ತಿದ್ದರು. ಈ ಕಾರ್ಯಕ್ರಮವನ್ನು ‘ಫೇಸ್‌ಬುಕ್’ ಮತ್ತು ‘ಯು-ಟ್ಯೂಬ್’ಗಳಿಂದ 8200 ಜನರು ವೀಕ್ಷಿಸಿದ್ದಾರೆ

ಶ್ರೀರಾಮನ ಅಸ್ತಿತ್ವದ ವಿಷಯದಲ್ಲಿ ಪ್ರಶ್ನೆಯನ್ನು ಎತ್ತುವವರಿಗೆ ಉತ್ತರ ನೀಡುವಾಗ ಇತಿಹಾಸದ ಅಧ್ಯಯನಕಾರರಾದ ಶ್ರೀಮತಿ ಮೀನಾಕ್ಷಿ ಶರಣರು ಮಾತನಾಡುತ್ತಾ, ರಾಮಾಯಣದ 300 ಕ್ಕಿಂತಲೂ ಹೆಚ್ಚು ಅಧಿಕ ಆವೃತ್ತಿಗಳು ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿವೆ. ಏಷ್ಯಾ, ಯುರೋಪ್ ಸಹಿತ ಅನೇಕ ಖಂಡಗಳಲ್ಲಿ ಶ್ರೀರಾಮನ ಅಸ್ತಿತ್ವದ ಪುರಾವೆಗಳು ಸಿಕ್ಕಿವೆ. ಮಲೇಶಿಯಾದಂತಹ ಇಸ್ಲಾಮೀ ದೇಶದಲ್ಲಿ ಅಲ್ಲಿನ ಮಂತ್ರಿಗಳು ಮಂತ್ರಿಪದವಿಯ ಪ್ರತಿಜ್ಞೆಯನ್ನು ಸ್ವೀಕರಿಸುವಾಗ ಶ್ರೀರಾಮನ ಚರಣಧೂಳಿ ಹಾಗೂ ಪಾದುಕೆಗಳನ್ನು ಉಲ್ಲೇಖಿಸಿ ಸ್ವೀಕರಿಸುತ್ತಾರೆ. ಇಂಡೋನೇಶಿಯಾದ ಗೋಡೆಗಳ ಮೇಲೆ ರಾಮಾಯಣವನ್ನು ಕೆತ್ತಲಾಗಿದೆ. ಬಾಲಿಯಲ್ಲಿಯಂತೂ ರಸ್ತೆಯಲ್ಲಿ, ಗಲ್ಲಿಗಲ್ಲಿಗಳಲ್ಲಿ ಶ್ರೀರಾಮನ ವಿಷಯಗಳನ್ನು ಬರೆದಿರುವುದು ಕಂಡುಬರುತ್ತದೆ. ಥೈಲ್ಯಾಂಡ್‌ನಲ್ಲಿ ಅಲ್ಲಿನ ರಾಜರು ತಮ್ಮ ಹೆಸರಿನ ಮುಂದೆ ‘ರಾಮ’ ಎಂದು ಸೇರಿಸುತ್ತಿದ್ದರು. ಇಲ್ಲಿನ ಶಾಲೆ-ಮಹಾವಿದ್ಯಾಲಯಗಳಲ್ಲಿ ರಾಮಾಯಣವನ್ನು ಕಲಿಸಲಾಗುತ್ತದೆ ಮತ್ತು ಹಿಂದುಸ್ಥಾನದಲ್ಲಿ ಮಾತ್ರ ರಾಮನ ಅಸ್ತಿತ್ವದ ವಿಷಯದಲ್ಲಿ ಪುರಾವೆಗಳನ್ನು ಕೇಳಲಾಗುತ್ತದೆ. ಇದು ಅನ್ಯ ಪಂಥೀಯರು ಮತ್ತು ಕಮ್ಯುನಿಸ್ಟರು ಹಿಂದೂಗಳಲ್ಲಿ ಬಿರುಕನ್ನು ಉಂಟು ಮಾಡಲು ನಡೆಸಿದಂತಹ ಷಡ್ಯಂತ್ರವಾಗಿದೆ, ಇದನ್ನು ಅರಿತುಕೊಳ್ಳಲು ಹಿಂದೂಗಳು ತಮ್ಮ ಧರ್ಮದ ಅಧ್ಯಯನ ಮಾಡಬೇಕು, ಎಂದರು.

ಈ ಸಮಯದಲ್ಲಿ ಮಾತನಾಡಿದ ನವ ದೆಹಲಿಯ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ನರೇಂದ್ರ ಸುರ್ವೆಯವರು, ಇಂದು ನಮ್ಮ ಜಾತ್ಯತೀತ ದೇಶದಲ್ಲಿ ಶ್ರೀರಾಮನ ದೇವಸ್ಥಾನದ ನಿರ್ಮಿತಿಯಾಗುತ್ತಿದ್ದರೂ ದೇಶದಲ್ಲಿ ಮಂದಿರಗಳನ್ನು ಒಡೆದು ಹಾಕುವುದು, ಹಿಂದೂ ಯುವತಿಯರನ್ನು ಗುಂಡಿಕ್ಕಿ ಸಾಯಿಸುವುದು, ಲವ್ ಜಿಹಾದ್, ಭಯೋತ್ಪಾದನೆ, ಯುವಕರಲ್ಲಿ ವ್ಯಸನಾಧೀನತೆ, ಗೋಹತ್ಯೆ, ಕೊರೊನಾ ಮಹಾಮಾರಿಯ ಸಮಯದಲ್ಲಿ ರೋಗಿಗಳನ್ನು ಲೂಟಿಗೈಯ್ಯುವುದು ಮುಂತಾದವುಗಳು ನಡೆಯುತ್ತಲೇ ಇವೆ. ಕಳೆದ 70 ವರ್ಷಗಳಲ್ಲಿ ಜನತೆಗೆ ಧರ್ಮಾಚರಣೇ ಕಲಿಸದೇ ಇದ್ದುದರಿಂದ ಈ ಪರಿಸ್ಥಿತಿಯು ಉದ್ಭವಿಸಿದೆ. ತದ್ವಿರುದ್ಧವಾಗಿ ರಾಮರಾಜ್ಯದಲ್ಲಿ ಯಾವುದೇ ವ್ಯಕ್ತಿಯು ದುಃಖಿತ, ಪೀಡಿತರು ಇರಲಿಲ್ಲ. ಎಲ್ಲರೂ ಸುಖವಾಗಿದ್ದರು. ಏಕೆಂದರೆ ಎಲ್ಲರೂ ಧರ್ಮಾಚರಣಿಗಳು, ಪರೋಪಕಾರಿಗಳು ಹಾಗೂ ಮರ್ಯಾದೆಗಳನ್ನು ಪಾಲಿಸುವವರಾಗಿದ್ದರು. ಹಾಗಾಗಿ ಅವರಿಗೆ ಭಗವಾನ ಶ್ರೀರಾಮನಂತಹ ಆದರ್ಶ ರಾಜನು ಸಿಕ್ಕಿದ್ದನು. ನಮಗೂ ಶ್ರೀರಾಮನಂತಹ ಆದರ್ಶ ರಾಜನು ಬೇಕಾಗಿದ್ದಲ್ಲಿ ನಾವೂ ಸಹ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಬೇಕು. ಹಾಗಾದರೆ ಮಾತ್ರ ಕೇವಲ ಶ್ರೀರಾಮ ಮಂದಿರ ನಿರ್ಮಾಣ ಮಾತ್ರವಲ್ಲ, ಸಂಪೂರ್ಣ ಪೃಥ್ವಿಯಲ್ಲಿ ‘ರಾಮರಾಜ್ಯ’ವು ಬಂದೇ ಬರುವುದು ಎಂದರು