ಬೆಂಗಳೂರಿನಲ್ಲಿ ಅಕ್ರಮ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ: ಮೂವರು ಮತಾಂಧರ ಬಂಧನ

ಅಲ್ಪಸಂಖ್ಯಾತರು ಅಪರಾಧದಲ್ಲಿ ಮಾತ್ರ ಅತ್ಯಧಿಕ ಪ್ರಮಾಣ

ಬೆಂಗಳೂರು – ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪಶ್ಚಿಮ ಬಂಗಾಳ ಮೂಲದ ಮೂವರು ಮತಾಂಧರನ್ನು ಬಂಧಿಸಿದ್ದಾರೆ. ಬಂಧಿತರನ್ನು ನೌಶದ್ ಅಲಿ, ರಿಯಾಜುಲ್ ಶೇಕ್, ಸಮೀರ್ ಇವರು ಎಂದು ಗುರುತಿಸಲಾಗಿದೆ. ಈ ಮೂವರು ಬೇರೆ ಹೆಸರಲ್ಲಿ ಆಧಾರ ಕಾರ್ಡ್ ಮಾಡಿಸಿಕೊಂಡು ಮಹಿಳೆಯರನ್ನು ಮೋಸಪಡಿಸಿ ಈ ವೇಶ್ಯಾವಾಟಿಕೆಯ ದಂಧೆ ನಡೆಸುತ್ತಿದ್ದರೆಂದು ಪೋಲೀಸರು ಹೇಳಿದ್ದಾರೆ. ದಾಳಿಯ ಸಮಯದಲ್ಲಿ ಬೇರೆ ಹೆಸರಲ್ಲಿದ್ದ ೧೧ ಆಧಾರ ಕಾರ್ಡ್‌ಗಳು ಹಾಗೂ ಕೆಲ ಗುರುತಿನ ಚೀಟಿ ವಶಪಡಿಸಿಕೊಂಡು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರೂ ಹೆಣ್ಣು ಮಕ್ಕಳನ್ನು ರಕ್ಷಿಸಲಾಗಿದೆ. ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.