ರೆಮ್ಡೆಸಿವಿರ್ ಚುಚ್ಚುಮದ್ದಿನ ಹೆಸರಿನಲ್ಲಿ ಲವಣಯುಕ್ತ ನೀರು ಹಾಗೂ ಅಂಟಿಬಯೋಟಿಕ್ಸ್ ಅನ್ನು ಸೇರಿಸಿ ಮಾರಾಟ ಮಾಡುತ್ತಿದ್ದ ನರ್ಸ್ ನ ಬಂಧನ

ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿಯು ಉದ್ಭವಿಸಿರುವಾಗ ಇಂತಹ ವಂಚನೆಗಳನ್ನು ಮಾಡಿ ರೋಗಿಗಳ ಜೀವದೊಂದಿಗೆ ಆಟವಾಡುವವರಿಗೆ ಗಲ್ಲಿನ ಶಿಕ್ಷೆ ವಿಧಿಸಬೇಕು!

ಮೈಸೂರು (ಕರ್ನಾಟಕ) – ರೆಮ್ಡೆಸಿವಿರ್ ಚುಚ್ಚು ಮದ್ದಿನ ಹೆಸರಿನಲ್ಲಿ ಅದರ ಬಾಟಲಿಯಿಂದ ಲವಣಯುಕ್ತ ನೀರು ಮತ್ತು ಅಂಟಿಬಯೋಟಿಕ್ಸ್ ಅನ್ನು ಸೇರಿಸಿ ಮಾರಾಟ ಮಾಡುತ್ತಿದ್ದ ಗಿರೀಶ ಎಂಬ ನರ್ಸ್ ಅನ್ನು ಬಂಧಿಸಲಾಗಿದೆ.

ಗಿರೀಶ್ ಇಂತಹ ಚುಚ್ಚುಮದ್ದನ್ನು ಮಾರಾಟ ಮಾಡುವ ಕೆಲಸವನ್ನು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅವನು ಒಂದು ಗುಂಪಿನ ಮುಖ್ಯ ಸೂತ್ರದಾರ ಆಗಿದ್ದಾನೆ. ಆತ ವಿವಿಧ ಸಂಸ್ಥೆಗಳ ರೆಮ್ಡೆಸಿವಿರ್ ಚುಚ್ಚು ಮದ್ದಿನ ಬಾಟಲಿಗಳನ್ನು ಮರುಬಳಕೆ ಮಾಡುತ್ತಿದ್ದನು ಮತ್ತು ಲವಣಯುಕ್ತ ನೀರು ಮತ್ತು ಅಂಟಿಬಯೋಟಿಕ್ ಅನ್ನು ಸೇರಿಸಿ ಮಾರಾಟ ಮಾಡುತ್ತಿದ್ದನು. ಆತ ೨೦೨೦ ರಿಂದ ಹೀಗೆ ಮಾಡುತ್ತಿದ್ದನು. ಕಳೆದ ಒಂದು ವರ್ಷದಿಂದ ತನ್ನ ಸಹಚರರೊಂದಿಗೆ ಇಂತಹ ಮೋಸವನ್ನು ಮಾಡುತ್ತಿದ್ದಾನೆ ಎಂದು ಗಿರೀಶ್ ಸ್ವತಃ ಹೇಳಿದ್ದಾನೆ.