ಮಂಗಳೂರಿನ ಶ್ರೀ. ಗುರುಪ್ರಸಾದ ಗೌಡ ಇವರಿಗೆ ಧರ್ಮಪ್ರೇಮಿಗಳಿಂದ ಕಲಿಯಲು ಸಿಕ್ಕಿರುವ ಅಂಶಗಳು

ಶ್ರೀ. ಗುರುಪ್ರಸಾದ ಗೌಡ

‘ರಾಜ್ಯದಲ್ಲಿ ಧರ್ಮಪ್ರೇಮಿಗಳಿಗಾಗಿ ಸಾಧನೆಯ ಕುರಿತು ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅನೇಕ ಧರ್ಮಪ್ರೇಮಿಗಳು ಪಾಲ್ಗೊಳ್ಳುತ್ತಾರೆ. ಸತ್ಸಂಗದಲ್ಲಿ ಗುರುಕೃಪಾಯೋಗಾನುಸಾರ ಸಾಧನೆ, ಗುರುಗಳ ಮಹತ್ವ, ಸುಖ-ದುಃಖ ಮುಂತಾದ ವಿಷಯಗಳನ್ನು ತೆಗೆದುಕೊಳ್ಳಲಾಗುತ್ತದೆ. ಇದರಿಂದ ಅವರಲ್ಲಿ ಬಹಳಷ್ಟು ಬದಲಾವಣೆಯ ಅರಿವಾಗುತ್ತದೆ. ಅವರು ಭಾವದ ಸ್ಥಿತಿಯಲ್ಲಿದ್ದು ಅನುಭವವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಅವರು ಸತ್ಸಂಗದಲ್ಲಿ ಹೇಳಿದಂತೆ, ಕೃತಿಗಳನ್ನು ಮಾಡಲು ಪ್ರಯತ್ನಿಸುತ್ತಾರೆ. ಈ ಕುರಿತು ಗಮನಕ್ಕೆ ಬಂದ ಕೆಲವು ಅಂಶಗಳನ್ನು ಇಲ್ಲಿ ನೀಡುತ್ತಿದ್ದೇನೆ.

೧. ಪರಾತ್ಪರ ಗುರುದೇವರಿಗೆ ಪ್ರಾರ್ಥನೆ ಮಾಡಿದ ನಂತರ ದಣಿವು ದೂರವಾಗುವ ಬಗ್ಗೆ ಧರ್ಮಪ್ರೇಮಿ ರಾಜು ಇವರಿಗೆ ಬಂದ ಅನೂಭೂತಿ

ಹುಬ್ಬಳ್ಳಿಯ ಧರ್ಮಪ್ರೇಮಿ ಶ್ರೀ. ರಾಜು ಇವರು ಪ್ರತಿಯೊಂದು ಸೇವೆಯನ್ನು ಭಾವದೊಂದಿಗೆ ಮಾಡುತ್ತಾರೆ. ಒಂದು ಬಾರಿ ಅವರಿಗೆ ಕೆಲವು ಕೆಲಸಗಳ ನಿಮಿತ್ತ ಹೊರಗೆ ‘ಲಾಡ್ಜ್’ನಲ್ಲಿರುವ ಪ್ರಸಂಗ ಬಂದಿತು. ಅಲ್ಲಿ ಅವರಿಗೆ ಬೆಳಗ್ಗೆ ಏಳುವಾಗ ಬಹಳ ದಣಿವಿನ (ನಿಶಕ್ತಿ) ಅರಿವಾಗುತ್ತಿತ್ತು. ಆಗ ಅವರ ಮನಸ್ಸಿನಲ್ಲಿ ‘ನನಗೆ ಕೊರೋನಾ ಆಗಿರಬಹುದೇ ? ಹಾಗಾದರೆ ನನ್ನ ಪರಿವಾರದ ಸ್ಥಿತಿ ಏನಾಗಬಹುದು ?’, ಎಂಬ ವಿಚಾರಗಳು ಬರುತ್ತಿದ್ದವು. ಆಗ ಅವರು ಗುರುದೇವರ ಚರಣಗಳಲ್ಲಿ ‘ಗುರುದೇವಾ, ನೀವು ನನ್ನೊಂದಿಗೆ ಇರುವಿರಿ, ನೀವೇ ನನ್ನ ರಕ್ಷಣೆಯನ್ನು ಮಾಡಿರಿ’, ಎಂದು ಪ್ರಾರ್ಥನೆಯನ್ನು ಮಾಡಿದರು. ಆಗ ಅವರಿಗೆ ೫ ನಿಮಿಷಗಳ ಕಾಲ ನಿದ್ದೆ ಬಂದಿತು. ನಿದ್ದೆಯಲ್ಲಿ ಅವರಿಗೆ ಗುರುದೇವರು ಅವರ ಶರೀರವನ್ನು ಸ್ಪರ್ಶಿಸುವುದರ ಅರಿವಾಯಿತು ಮತ್ತು ಆಶ್ಚರ್ಯವೆಂದರೆ ೫ ನಿಮಿಷಗಳ ನಂತರ ಅವರಿಗೆ ಎಚ್ಚರವಾದಾಗ ಅವರ ದಣಿವು ಪೂರ್ಣ ದೂರವಾಗಿತ್ತು. ಈ ಪ್ರಸಂಗದಿಂದ ಶ್ರೀ. ರಾಜು ಅಣ್ಣನವರ ಸಾಧನೆಯ ಮೇಲಿನ ಶ್ರದ್ಧೆಯು ತುಂಬಾ ಹೆಚ್ಚಾಗಿದೆ.

೨. ಪರಾತ್ಪರ ಗುರುದೇವರೊಂದಿಗೆ ಧರ್ಮಪ್ರೇಮಿಗಳು ದೀಪಾವಳಿಯನ್ನು ಆಚರಿಸುವುದು

‘ದೀಪಾವಳಿಯ ದಿನ ನೀವೆಲ್ಲರೂ ಹೇಗೆ ಭಾವವನ್ನು ಇಟ್ಟುಕೊಂಡಿದ್ದಿರಿ ?’, ಎಂದು ಕೇಳಿದೆನು. ಆಗ ಶ್ರೀ. ರಾಜು ಅಣ್ಣನವರು, “ಈ ಬಾರಿ ‘ನಾವು ಗುರುದೇವರನ್ನು ನಮ್ಮ ಜೊತೆಗೆ ಕರೆದುಕೊಂಡೇ ದೀಪಾವಳಿಯನ್ನು ಆಚರಿಸುತ್ತಿದ್ದೇವೆ’, ಎಂಬ ಭಾವವನ್ನಿಟ್ಟುಕೊಂಡಿದ್ದೆವು”, ಎಂದು ಹೇಳಿದರು. ಇತರ ಧರ್ಮಪ್ರೇಮಿಗಳು, “ಈ ಬಾರಿ ನಾವು ದೀಪಾವಳಿಯ ಅರ್ಥವನ್ನು ತಿಳಿದುಕೊಂಡು ದೀಪಾವಳಿಯನ್ನು ಆಚರಿಸಿದೆವು. ಆದುದರಿಂದ ನಮಗೆ ಅದರಲ್ಲಿನ ಆನಂದವನ್ನು ಅನುಭವಿಸಲು ಸಾಧ್ಯವಾಯಿತು” ಎಂದು ಹೇಳಿದರು.

೩. ಧರ್ಮಪ್ರೇಮಿ ಡಾ. ಮಂಜುನಾಥ ಇವರು ಸಾಧನೆಯಲ್ಲಿ ಆನಂದವನ್ನು ಪಡೆಯುತ್ತಿರುವುದು

ಮೈಸೂರಿನ ಧರ್ಮಪ್ರೇಮಿಗಳಾದ ಡಾ. ಮಂಜುನಾಥ (ಓರ್ವ ಸಾಧಕಿಯ ಪತಿ) ಇವರು, “ಮೊದಲಿಗೆ ನಾನು ನನ್ನ ಪತ್ನಿಗೆ ಸಾಧನೆಯಲ್ಲಿ ಸಹಾಯ ಮಾಡುತ್ತಿರಲಿಲ್ಲ; ಆದರೆ ಈಗ ಅವಳು ನನ್ನ ಸಾಧನೆಯಲ್ಲಿ ನನಗೆ ಸಹಾಯ ಮಾಡುತ್ತಿದ್ದಾಳೆ, ನನ್ನ ಸಾಧನೆಯ ವರದಿಯನ್ನೂ ಅವಳೇ ತೆಗೆದುಕೊಳ್ಳುತ್ತಾಳೆ. ಈಗ ನಾನು ಆಸ್ಪತ್ರೆಗೆ ಬರುವ ರೋಗಿಗಳಿಗೆ ನಾಮಜಪದ ಬಗ್ಗೆ ಹೇಳುತ್ತೇನೆ. ಆಗ ನನಗೆ ತುಂಬಾ ಆನಂದ ಸಿಗುತ್ತದೆ”, ಎಂದು ಹೇಳಿದರು.

೪. ಧರ್ಮಪ್ರೇಮಿ ಶ್ರೀ. ನೀಲೇಶ ಇವರಲ್ಲಿ ನಾವು ಆಪತ್ಕಾಲದಲ್ಲಿ ಏನು ಹೇಳುವೆವೋ ಅದನ್ನು ಮಾಡುವ ಸಿದ್ಧತೆ ಇರುವುದು

ಓರ್ವ ಧರ್ಮಪ್ರೇಮಿ ಶ್ರೀ. ನೀಲೇಶ ಇವರು ನನಗೆ, “ಆಪತ್ಕಾಲದಲ್ಲಿ ಎಲ್ಲಿ ಸಾಧಕರಿರುವರೋ, ನಾನು ಅಲ್ಲಿಯೇ ಇರುವವನಿದ್ದೇನೆ. ನನ್ನ ತಾಯಿ-ತಂದೆಯನ್ನು ನಾನು ನನ್ನ ಸಹೋದರನ ಮನೆಯಲ್ಲಿಡುತ್ತೇನೆ; ಏಕೆಂದರೆ ನನಗೆ ಸಾಧನೆಯನ್ನೇ ಮಾಡಬೇಕಾಗಿದೆ. ನೀವು ಹೇಗೆ ಹೇಳುವಿರೋ, ಹಾಗೆ ನಾನು ಮಾಡುವೆನು”, ಎಂದು ಹೇಳಿದರು. ಅವರ ಈ ಮಾತುಗಳಿಂದ ‘ಆಪತ್ಕಾಲದಲ್ಲಿನ ಅವರ ಸಿದ್ಧತೆಯು ಚೆನ್ನಾಗಿ ಆಗಿದೆ’, ಎಂಬುದು ಕಲಿಯಲು ಸಿಕ್ಕಿತು.

೫. ಧರ್ಮಪ್ರೇಮಿ ಶ್ರೀ. ರಾಜು ಇವರಿಗೆ ದಸರೆಯ ದಿನ ಸತ್ಸಂಗದಲ್ಲಿ ಸಾಕ್ಷಾತ್ ದೇವಿ ದರ್ಶನ ನೀಡುವುದು

ಧರ್ಮಪ್ರೇಮಿ ಶ್ರೀ. ರಾಜು ಇವರಿಗೆ ದಸರೆಯ ದಿನ ನಡೆದ ಸತ್ಸಂಗದಲ್ಲಿ ಭಾವಾರ್ಚನೆಯಲ್ಲಿ ‘ಪ್ರತ್ಯಕ್ಷ ದೇವಿಯ ದರ್ಶನವಾಯಿತು’, ಇದನ್ನು ಅವರು ನನಗೆ ಹೇಳಿದರು. ಅವರು, “ನಾನು ಪ್ರತಿದಿನ ‘ನನಗೆ ದರ್ಶನ ನೀಡು’, ಎಂದು ದೇವಿಗೆ ಪ್ರಾರ್ಥನೆಯನ್ನು ಮಾಡುತ್ತೇನೆ; ಆದರೆ ದರ್ಶನವಾಗುತ್ತಿರಲಿಲ್ಲ. ಇಂದು ಸತ್ಸಂಗದಲ್ಲಿ ನನಗೆ ದೇವಿಯು ದರ್ಶನ ನೀಡಿದಳು”, ಎಂದು ಹೇಳಿದರು.

೬. ಧರ್ಮಪ್ರೇಮಿಗಳಿಂದ ಕಲಿಯಲು ಸಿಕ್ಕಿದ ಇತರ ಅಂಶಗಳು

ಅ. ಧರ್ಮಪ್ರೇಮಿಗಳು ಸತ್ಸಂಗದಲ್ಲಿ ತಮ್ಮ ಅನುಭವಗಳನ್ನು ಹೇಳುತ್ತಾರೆ, ಆಗ ಅವರ ಭಾವಜಾಗೃತಿಯಾಗುತ್ತದೆ. ಅವರು ಭಾವದ ಸ್ಥಿತಿಯಲ್ಲಿಯೇ ಮಾತನಾಡುತ್ತಿರುತ್ತಾರೆ.

ಆ. ಧರ್ಮಪ್ರೇಮಿಗಳಿಗೆ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನ ಸಿಗುತ್ತದೆ, ಆಗ ಅವರು ಸಂತರ ಮಾರ್ಗದರ್ಶನದ ಲಾಭವನ್ನು ಮಾಡಿಕೊಳ್ಳುತ್ತಾರೆ ಮತ್ತು ಅವರ ಚೈತನ್ಯಮಯ ವಾಣಿಯಿಂದ ಅವರಿಗೆ ಸಾಧನೆಯನ್ನು ಮಾಡಲು ಸ್ಫೂರ್ತಿ ಸಿಗುತ್ತದೆ.

ಇ. ಧರ್ಮಪ್ರೇಮಿಗಳಿಗೆ ಕಾಲಾನುಸಾರ ಸಾಧನೆಯ ಮಹತ್ವ ತಿಳಿಯುತ್ತಿದೆ. ಅವರಿಗೆ ಕಡಿಮೆ ಸಮಯದಲ್ಲಿಯೇ ಭಾವಜಾಗೃತಿಯಾಗುತ್ತಿದೆ ಮತ್ತು ಅವರಲ್ಲಿ ಪರಿವರ್ತನೆಯೂ ಕಂಡು ಬರುತ್ತಿದೆ. ಆದುದರಿಂದ ‘ಇದೆಲ್ಲವೂ ಕಾಲದ ಮಹಿಮೆಯಾಗಿದೆ’, ಎಂದು ಗಮನಕ್ಕೆ ಬರುತ್ತದೆ. ‘ಕೇವಲ ಮತ್ತು ಕೇವಲ ಗುರುದೇವರೇ ಅವರನ್ನು ಕಾಲಾನುಸಾರ ತಯಾರು ಮಾಡುತ್ತಿದ್ದಾರೆ’, ಎಂದು ನನಗೆ ಧರ್ಮಪ್ರೇಮಿಗಳ ಮಾಧ್ಯಮದಿಂದ ಕಲಿಯಲು ಸಿಗುತ್ತಿದೆ. ಅದಕ್ಕಾಗಿ ಪರಾತ್ಪರ ಗುರುದೇವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.’

– ಶ್ರೀ. ಗುರುಪ್ರಸಾದ ಗೌಡ, ಮಂಗಳೂರು (೨೪.೧೧.೨೦೨೦)