ಡಾಸನಾ ದೇವಸ್ಥಾನದ ಮಹಂತ ಯತಿ ನರಸಿಂಹಾನಂದ ಅವರ ಹೇಳಿಕೆಯ ಪ್ರಕರಣ
ಭಾರತೀಯ ಕಾನೂನು ಅನೇಕ ವಿಷಯಗಳನ್ನು ಅನುಮತಿಸುವುದಿಲ್ಲ; ಆದರೂ ಮತಾಂಧರು ಅದನ್ನು ಉಲ್ಲಂಘಿಸಿ ಕಾನೂನುದ್ರೋಹಿ ಕೃತ್ಯವನ್ನು ಮಾಡುತ್ತಿರುತ್ತಾರೆ. ಕಮಲೇಶ ತಿವಾರಿ ಇವರ ಬಗ್ಗೆಯೂ ಹೀಗೆ ನಡೆದಿದೆ. ಆದ್ದರಿಂದ ಪೊಲೀಸರು ಇಂತಹ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಮಹಂತ ಯತಿ ನರಸಿಂಹಾನಂದ ಅವರಿಗೆ ಭದ್ರತೆ ಒದಗಿಸಬೇಕು ! ಭಾರತದಲ್ಲಿರುವ ಕಾನೂನುಗಳನ್ನು ಹಿಂದೂಗಳು ಪಾಲನೆ ಮಾಡುತ್ತಿರುವುದರಿಂದ ಹಿಂದೂ ದೇವತೆಗಳನ್ನು ಅವಮಾನಿಸುವ ಹಿಂದೂದ್ವೇಷಿ ವರ್ಣಚಿತ್ರಕಾರ ಎಂ.ಎಫ್. ಹುಸೆನ ವಿರುದ್ಧ ಕಾನೂನಿಗನುಸಾರ ೧ ಸಾವಿರದ ೨೫೦ ದೂರುಗಳು ದಾಖಲಾಗಿರುವಾಗ ಪೊಲೀಸರು ಕೇವಲ ಐದು ಸ್ಥಳಗಳಲ್ಲಿ ಅಪರಾಧಗಳನ್ನು ದಾಖಲಿಸಿದ್ದರು, ಆದರೆ ಹಿಂದೂಗಳು ಅದನ್ನು ಸ್ವೀಕರಿಸಿದ್ದರು ! |
ನವ ದೆಹಲಿ : ದೆಹಲಿಯ ಪ್ರೆಸ್ ಕ್ಲಬ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಮತ್ತು ದೆಹಲಿ ವಕ್ಫ್ ಮಂಡಳಿಯ ಮುಖ್ಯಸ್ಥ ಅಮಾನತುಲ್ಲಾ ಖಾನ್ ಅವರು ಗಾಜಿಯಾಬಾನ ಡಾಸನಾದಲ್ಲಿಯ ದೇವಸ್ಥಾನದ ಮಹಂತ ಯತಿ ನರಸಿಂಹಾನಂದ ಅವರು ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್ ಪೈಗಂಬರ ಕುರಿತು ನೀಡಿದ ಹೇಳಿಕೆಯ ಬಗ್ಗೆ ಮಾತನಾಡುತ್ತಾ ‘ಇಂತಹ ಹೇಳಿಕೆಯನ್ನು ನೀಡುವವರ ಶಿರಚ್ಛೇದ ಮಾಡಬೇಕು, ಅವರ ನಾಲಿಗೆಯನ್ನು ಕತ್ತರಿಸಬೇಕು, ಆದರೆ ಹೀಗೆ ಮಾಡಲು ಭಾರತದ ಕಾನೂನು ನಮಗೆ ಅನುಮತಿ ನೀಡುವುದಿಲ್ಲ. ‘ನಮಗೆ ನಮ್ಮ ಸಂವಿಧಾನದ ಮೇಲೆ ವಿಶ್ವಾಸವಿದೆ ಮತ್ತು ದೆಹಲಿ ಪೊಲೀಸರು ಇದನ್ನು ಗಮನಿಸಬೇಕು’, ಎಂದು ಅವರು ಪ್ರಚೋದನಕಾರಿ ಹೇಳಿಕೆಯನ್ನು ನೀಡಿದ್ದಾರೆ. ಈ ಸಮಯದಲ್ಲಿ ಎಂ.ಐ.ಎಂ.ನ ಸಂಸದ ಅಸದುದ್ದೀನ್ ಒವೈಸಿ ದೆಹಲಿ ಪೊಲೀಸರಿಗೆ ಅವರ ಕರ್ತವ್ಯದ ಬಗ್ಗೆ ಅರಿವು ಮಾಡಿಕೊಟ್ಟರು. ಈ ಪತ್ರಿಕಾಗೋಷ್ಠಿಯಲ್ಲಿನ ಹೇಳಿಕೆಯ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ. ಇದರಿಂದ ಖಾನ್ ಮತ್ತು ಒವೈಸಿ ಅದಕ್ಕೆ ಪ್ರತಿಕ್ರಿಯಿಸಿದರು.
AAP MLA Amanatullah Khan calls for beheading of Yati Narsinghanand Saraswati as ‘punishment’ for criticising Prophet Muhammadhttps://t.co/MA4IvVy89I
— OpIndia.com (@OpIndia_com) April 3, 2021
೧. ಓವೈಸಿ ಸ್ವಂತದ ವಿಡಿಯೋವನ್ನು ಪೋಸ್ಟ ಮಾಡುವ ಮೂಲಕ, ಪೈಗಂಬರ ಅವಮಾನಿಸುವುದನ್ನು ಸಹಿಸಲಾಗುವುದಿಲ್ಲ ಅವರು ಧರ್ಮಗುರುಗಳ ವೇಷದಲ್ಲಿ ಅಡಗಿರುವ ಅಪರಾಧಿಗಳಾಗಿದ್ದಾರೆ. ನಿಮ್ಮ ಧರ್ಮದಲ್ಲಿ ಚರ್ಚಿಸಬಹುದಾದ ಏನಾದರೂ ಇರುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದರು.
೨. ಓವೈಸಿ ದೆಹಲಿ ಪೊಲೀಸರನ್ನು ಉದ್ದೇಶಿಸಿ ನೀಡಿದ ಟ್ವೀಟ್‍ನಲ್ಲಿ, ಮುಸ್ಲಿಮರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸಲು ಮಾತ್ರ ಈ ವ್ಯಕ್ತಿ ಇಸ್ಲಾಂ ಧರ್ಮವನ್ನು ಅವಮಾನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ನಿಮ್ಮ ಮೌನವು ನಾಚಿಕೆ ಪಡುವಂತಹದ್ದಾಗಿದೆ. ನೀವೂ ನಿಮ್ಮ ಕರ್ತವ್ಯಗಳನ್ನು ಮರೆತಿದ್ದರೆ, ನಾವು ನಿಮಗಾಗಿ `ರಿಫ್ರೆಶ್ ಕೋರ್ಸ್’ ಅನ್ನು ಆಯೋಜಿಸಬಹುದು ಎಂದು ಹೇಳಿದರು.