ಗುರು ಗ್ರಹದ ರಾಶಿಯ ಬದಲಾವಣೆಯಿಂದಾಗಿ ಭಾರತ ಸೇರಿದಂತೆ ಇಡೀ ಜಗತ್ತಿನಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಬಹುದು ! – ಜ್ಯೋತಿರ್ವಿದ ಪಂಡಿತ ದಿವಾಕರ ತ್ರಿಪಾಠಿ, ನಿರ್ದೇಶಕರು, ‘ಉತ್ಥಾನ’ ಜ್ಯೋತಿಷ್ಯ ಸಂಸ್ಥಾನ

ಮುಂಬರುವ ಕಾಲವು ಸಂಕಟಕಾಲವಾಗಿರಲಿದೆ ಎಂದು ಅನೇಕ ಸಂತರು ಮತ್ತು ಮಹಂತರು ಹೇಳಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಸಂಕಟಕಾಲದಲ್ಲಿ ಬದುಕುಳಿಯಲು ಸಾಧನೆ ಮಾಡುವುದು ಅವಶ್ಯಕ !

ಜ್ಯೋತಿರ್ವಿದ ಪಂಡಿತ ದಿವಾಕರ ತ್ರಿಪಾಠಿ

ನವದೆಹಲಿ : ಬರುವ ಏಪ್ರಿಲ್ ೫ ರಂದು ಬೆಳಿಗ್ಗೆ ೫ ಗಂಟೆಗೆ ಗುರುಗ್ರಹ ತನ್ನ ರಾಶಿಯಲ್ಲಿ ಪರಿವರ್ತನೆ ಮಾಡಲಿದೆ. ಸದ್ಯ ಮಕರ ರಾಶಿಯಲ್ಲಿರುವ ಈ ಗ್ರಹವು ಕುಂಭ ರಾಶಿಯಲ್ಲಿ ಪ್ರವೇಶಿಸಲಿದೆ. ಮುಂದಿನ ೧೩ ತಿಂಗಳು ಗುರುಗ್ರಹವು ಈ ರಾಶಿಯಲ್ಲಿ ಇರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರುಗ್ರಹದ ರಾಶಿ ಬದಲಾವಣೆಯು ಒಂದು ಪ್ರಮುಖ ಘಟನೆ ಎಂದು ಪರಿಗಣಿಸಲಾಗಿದೆ. ಈ ಬದಲಾವಣೆಯು ವ್ಯಕ್ತಿ, ಸಮಾಜ ಮತ್ತು ದೇಶದ ಮೇಲೆ ಪರಿಣಾಮ ಬೀರುತ್ತದೆ. ಗುರುಗ್ರಹದ ರಾಶಿ ಬದಲಾವಣೆಯು ಭಾರತ ಸೇರಿದಂತೆ ಇಡೀ ಜಗತ್ತಿನಲ್ಲಿ ಯುದ್ಧದ ಸ್ಥಿತಿಗೆ ಕಾರಣವಾಗಬಹುದು ಎಂದು ‘ಉತ್ಥಾನ’ ಜ್ಯೋತಿಷ್ಯ ಸಂಸ್ಥಾನದ ನಿರ್ದೇಶಕ ಮತ್ತು ಜ್ಯೋತಿರ್ವಿದ ಪಂಡಿತ ದಿವಾಕರ ತ್ರಿಪಾಠಿ ಭವಿಷ್ಯವನ್ನು ಹೇಳಿದ್ದಾರೆ. ‘ಅದಕ್ಕಾಗಿ ಎಲ್ಲರೂ ಜಾಗರೂಕ ಮತ್ತು ಎಚ್ಚರಿಕೆಯಿಂದ ಇರುವುದು ಅವಶ್ಯಕವಾಗಿದೆ. ಅದೇರೀತಿ ಪರಿಣಾಮಕಾರಿಯಾದ ಲಸಿಕೆಗಳನ್ನು ಅಭಿವೃದ್ಧಿಪಡಿಸಿ ಕೊರೋನಾದ ಪ್ರಭಾವ ಕಡಿಮೆ ಆಗುತ್ತಿರುವುದು ಕಂಡುಬರಲಿದೆ’, ಎಂದು ಅವರು ಹೇಳಿದರು.

ಗುರುಗ್ರಹದ ರಾಶಿಯ ಬದಲಾವಣೆಯಿಂದ ಭಾರತದ ಮೇಲೆ ಆಗುವ ಕೆಲವು ಪರಿಣಾಮಗಳ ಬಗ್ಗೆ ಜ್ಯೋತಿರ್ವಿದ ಪಂಡಿತ ದಿವಾಕರ ತ್ರಿಪಾಠಿ ಅವರು ಹೇಳಿದ ಅಂಶಗಳು

೧. ದೇಶದ ಆಂತರಿಕ ಭಾಗಗಳ ಕೆಲವು ಸ್ಥಳಗಳಲ್ಲಿ ಅಶಾಂತಿ ಉದ್ಭವಿಸಬಹುದು, ಭಾರತದ ಪ್ರಗತಿಗೆ ಅಡ್ಡಿಯಾಗಬಹುದು.

. ಭಾರತದಲ್ಲಿ ಆಂತರಿಕ ದಂಗೆಗಳು, ಆಂದೋಲನಗಳು, ಜನಾಂಗೀಯ ಮತ್ತು ಧಾರ್ಮಿಕ ಗಲಭೆಗಳು ನಡೆಯಲಿವೆ.

. ಜಾಗತಿಕ ಮಟ್ಟದಲ್ಲಿ ಭಾರತದ ಪರಾಕ್ರಮ, ಯಶಸ್ಸು ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಮಿತ್ರರಾಷ್ಟ್ರಗಳ ಸಹಕಾರ ಸಿಗಬಹುದು.

. ಭೂಕಂಪಗಳು, ಬೆಂಕಿ, ಭೂಕುಸಿತಗಳು, ಚಂಡಮಾರುತಗಳು ಮುಂತಾದ ನೈಸರ್ಗಿಕ ವಿಕೋಪಗಳು ಸಂಭವಿಸಬಹುದು.