ದೇವಸ್ಥಾನದ ಕಾಣಿಕೆಹುಂಡಿಯಲ್ಲಿ ಕಾಂಡೋಮ್ ಮತ್ತು ಅಶ್ಲೀಲ ಬರಹ : ಇಬ್ಬರು ಮತಾಂಧರ ಬಂಧನ !

ದೇವರ ಶಾಪ ತಗಲಿ ಒಬ್ಬ ಮತಾಂಧನ ಸಾವು, ಆರೋಗ್ಯವು ಹದಗೆಟ್ಟಾಗ, ಇನ್ನೊಬನಿಂದ ಅಪರಾಧದ ಸ್ವೀಕಾರ !

‘ದೇವರು ಇಲ್ಲ’ ಎನ್ನುವ ಅಂನಿಸದವರಿಗೆ ಈ ಬಗ್ಗೆ ಏನು ಹೇಳಲಿಕ್ಕಿದೆ ?

ಮಂಗಳೂರು (ಕರ್ನಾಟಕ) – ಮಂಗಳೂರಿನ ಕೊರಗಜ್ಜ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್ ಮತ್ತು ಅಶ್ಲೀಲ ಬರಹದ ಚೀಟಿಗಳನ್ನು ಹಾಕಿದ ಪ್ರಕರಣದಲ್ಲಿ ಜೋಕಟ್ಟೆಯ ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫಿಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯವಾಗಿ, ಬಂಧಿತ ರಹೀಂ ಮತ್ತು ತೋಫಿಕ್ ಇವರು ಭಗವಾನ ಕೊರಗಜ್ಜನ ಶಾಪದ ಭಯದಿಂದ ದೇವರಿಗೆ ಶರಣಾದರು. ಆ ಸಮಯದಲ್ಲಿ ಅವರನ್ನು ಬಂಧಿಸಲಾಯಿತು. ಮಂಗಳೂರು ಪೊಲೀಸ ಆಯುಕ್ತ ಎನ್. ಶಶಿಕುಮಾರ ಇವರು ಈ ಮಾಹಿತಿ ನೀಡಿದರು. ಕಳೆದ ೩ ತಿಂಗಳುಗಳಲ್ಲಿ, ಇಂತಹ ಅಶ್ಲೀಲ ಕೃತ್ಯಗಳ ೪-೫ ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾದ ನಂತರ, ಭಕ್ತರು ‘ಭಗವಾನ ಕೊರಗಜ್ಜನವರು ಅಪರಾಧಿಗಳನ್ನು ಶಿಕ್ಷಿಸಬೇಕು’ ಎಂದು ಪ್ರಾರ್ಥಿಸಿದರು. ಕೊರಗಜ್ಜ ದೇವರ ಮೇಲೆ ಇಲ್ಲಿನ ಭಕ್ತರಿಗೆ ನಂಬಿಕೆ ಇದ್ದು ಅವರನ್ನು ಭಗವಾನ ಶಿವನ ಅವತಾರವೆಂದು ನಂಬುತ್ತಾರೆ.

ಓರ್ವ ಮತಾಂಧನ ಸಾವು

ಅಬ್ದುಲ್ ರಹೀಮ್ ಮತ್ತು ಅಬ್ದುಲ್ ತೌಫಿಕ್ ಅವರನ್ನು ಅವರ ಸ್ನೇಹಿತ ನವಾಜ್ ಅವರು ದೇವಸ್ಥಾನಕ್ಕೆ ಕರೆದೊಯ್ಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತನ್ನನ್ನು ಮಾಂತ್ರಿಕನೆಂದು ಸ್ವತಃ ಹೇಳಿಕೊಳ್ಳುತ್ತಿದ್ದ. ಈ ಮೂವರು ಅಸಭ್ಯ ಕೃತ್ಯವನ್ನು ಮಾಡಿದ್ದರು. ಕೆಲವು ದಿನಗಳ ನಂತರ, ನವಾಜ್ ನ ಆರೋಗ್ಯವು ಹದಗೆಟ್ಟಿತು. ಆತನಿಗೆ ರಕ್ತ ವಾಂತಿಯಾಗಲು ಆರಂಭವಾಯಿತು. ನಂತರ ಆತನು ತನ್ನ ತಲೆಯನ್ನು ಗೋಡೆಗೆ ಅಪ್ಪಳಿಸಿ ಜೀವನವನ್ನು ಕೊನೆಗೊಳಿಸಿದನು. ಆತ ಸಾಯುವ ಮೊದಲು, ‘ಇದು ಭಗವಾನ ಕೊರಗಜ್ಜನ ಶಾಪವಾಗಿದೆ’ ಎಂದು ಹೇಳಿದ್ದನು. ನವಾಜ್‍ನ ಸಾವಿನ ನಂತರ, ತೌಫಿಕ್‍ನ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿತು ಮತ್ತು ಆತನಿಗೂ ರಕ್ತ ವಾಂತಿಯಾಗಲು ಆರಂಭವಾಯಿತು. ಭಯಭೀತರಾದ ಆರೋಪಿ ಅಬ್ದುಲ್ ರಹೀಮ್ ಮತ್ತು ಅಬ್ದುಲ್ ತೌಫಿಕ್ ಇವರು ಎಮ್ಮೆಕೆರೆಯ ಕೊರಗಜ್ಜ ದೇವಸ್ಥಾನಕ್ಕೆ ಬಂದು ತಪ್ಪಿಗೆ ಕ್ಷಮೆಯಾಚಿಸಲು ಹಾಗೂ ಹಣವನ್ನು ಹುಂಡಿಗೆಯಲ್ಲಿ ಹಾಕಲು ಬಂದಾಗ ಅವರನ್ನು ಬಂಧಿಸಲಾಯಿತು. ವಿಚಾರಣೆಯಲ್ಲಿ ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದಾರೆ.