ಇಶ್ರತ ಜಹಾಂ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ೩ ಪೊಲೀಸ್ ಅಧಿಕಾರಿಗಳು ನಿರಪರಾಧಿಗಳೆಂದು ಖುಲಾಸೆ

ಇಶ್ರತ ಜಹಾಂ ಭಯೋತ್ಪಾದಕಿ ಅಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ! – ಗುಜರಾತ ಉಚ್ಚ ನ್ಯಾಯಾಲಯ

ಈ ಘರ್ಷಣೆ ಸುಳ್ಳು ಎಂದು ಹೇಳಿ ಭಯೋತ್ಪಾದಕರನ್ನು ಕಾಪಾಡುವವರು ಈಗ ಬಾಯಿ ಬಿಡುವರೇ ? ದೇಶಪ್ರೇಮಿಗಳು ಅಂತಹ ಜನರನ್ನು ನ್ಯಾಯಸಮ್ಮತ ರೀತಿಯಲ್ಲಿ ಕಠೋರವಾಗಿ ವಿಚಾರಿಸಬೇಕು ! ಈ ಪ್ರಕರಣದಲ್ಲಿ ಕಳೆದ ೧೬ ವರ್ಷಗಳಲ್ಲಿ ಅಮಾಯಕ ಪೊಲೀಸರು ಅನುಭವಿಸಿದ ಎಲ್ಲಾ ಮಾನಸಿಕ ವೇದನೆ ಮತ್ತು ಆರ್ಥಿಕ ನಷ್ಟವನ್ನು ಆರೋಪಿಸಿದವರು ತುಂಬಿಸುವರೇ ?

ಇಶ್ರತ ಜಹಾಂ

ನವದೆಹಲಿ : ಗುಜರಾತನಲ್ಲಿ ೨೦೦೪ ರ ಇಶ್ರತ ಜಹಾನ ಎನ್‍ಕೌಂಟರ್‍ಗೆ ಸಂಬಂಧಿಸಿದಂತೆ ಕರ್ಣಾವತಿಯ ಸಿಬಿಐಯ ವಿಶೇಷ ನ್ಯಾಯಾಲಯವು ಆರೋಪಿಗಳಾದ ಗಿರೀಶ ಸಿಂಘಲ, ತರುಣ ಬರೋಟ ಮತ್ತು ಅನಾಜು ಚೌಧರಿ ಈ ಮೂರು ಪೊಲೀಸ ಅಧಿಕಾರಿಗಳನ್ನು ನಿರ್ದೋಷಿಗಳೆಂದು ಖುಲಾಸೆಗೊಳಿಸಿದೆ. ‘ಇಶ್ರತ ಜಹಾಂಳು ಲಷ್ಕರ್-ಎ-ತೋಯಬಾದ ಭಯೋತ್ಪಾದಕಿ ಆಗಿದ್ದಳು’, ಎಂದು ಗುಪ್ತಚರ ವಿಭಾಗದ ವರದಿಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಇಶ್ರತ ಜಹಾಂ ಭಯೋತ್ಪಾದಕಿ ಆಗಿರಲಿಲ್ಲ, ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಅಪರಾಧ ದಳದ ಪೊಲೀಸ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಆದ್ದರಿಂದ ಮೂವರೂ ಅಧಿಕಾರಿಗಳನ್ನು ಖುಲಾಸೆ ಗೊಳಿಸಲಾಗುತ್ತಿದೆ’, ಎಂದು ನ್ಯಾಯಾಲಯವು ತಿಳಿಸಿದೆ.
ಪೊಲೀಸ ಅಧಿಕಾರಿ ಗಿರೀಶ ಸಿಂಘಲ ಮತ್ತು ನಿವೃತ್ತ ಪೊಲೀಸ ವರಿಷ್ಠಾಧಿಕಾರಿ ತರುಣ ಬರೋಟ ಮತ್ತು ಸಹಾಯಕ ಸಬ್ ಇನ್ಸ್‍ಪೆಕ್ಟರ್ ಅನಾಜು ಚೌಧರಿ ವಿರುದ್ಧ ಗುಜರಾತ ಸರಕಾರವು ೨೦೦೪ ರಲ್ಲಿ ಕ್ರಮ ಕೈಗೊಳ್ಳಲು ನಿರಾಕರಿಸಿತು.

ಏನಿದು ಇಶ್ರತ್ ಜಹಾಂ ನಕಲಿ ಘರ್ಷಣೆ ಪ್ರಕರಣ ?

ಜೂನ್ ೧೫, ೨೦೦೪ ರಂದು ಇಶ್ರತ ಜಹಾಂ, ಜಾವೇದ ಶೇಖ ಅಲಿಯಾಸ ಪ್ರಾಣೇಶ ಪಿಳ್ಳೈ, ಅಮಜದ ಅಲಿ ಅಕಬರ ಅಲಿ ರಾಣಾ ಮತ್ತು ಜಿಶಾನ ಜೋಹರ ಇವರನ್ನು ಕರ್ಣಾವತಿ ಬಳಿ ನಡೆದ ಎನ್‍ಕೌಂಟರ್‍ನಲ್ಲಿ ಹತ್ಯೆಗೈಯ್ಯಲಾಗಿತ್ತು. ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಲು ಅವರು ಬಂದಿದ್ದರು, ಎಂದು ಪೊಲೀಸರು ತಿಳಿಸಿದ್ದರು. ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಇಶ್ರತ ಜಹಾಂ ಅವರ ತಾಯಿ ಸಮೀಮಾ ಕೌಸರ ಮತ್ತು ಜಾವೇದ ಅವರ ತಂದೆ ಗೋಪಿನಾಥ್ ಪಿಳ್ಳೈ ಅವರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಗುಜರಾತ ಉಚ್ಚ ನ್ಯಾಯಾಲಯ ಸ್ಥಾಪಿಸಿದ ವಿಶೇಷ ತನಿಖಾ ತಂಡವು ಈ ಎನ್‍ಕೌಂಟರ್ ನಕಲಿ ಎಂದು ಹೇಳಿದ್ದು, ತನಿಖೆಗೆ ಆದೇಶಿಸಿತ್ತು.