ಉತ್ತರ ಕನ್ನಡ ಜಿಲ್ಲೆಯ ಗೌಡ ಸಾರಸ್ವತ ಬ್ರಾಹ್ಮಣರ ದೇವಾಲಯಗಳಲ್ಲಿ ಎಲ್ಲಾ ಉತ್ಸವಗಳು ರದ್ದು

ಶ್ರೀ ಶ್ರೀ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೆರ ಸ್ವಾಮೀಜಿ

ಪಣಜಿ – ೨೦೨೧ ರ ಜುಲೈ ೩೦ ರವರೆಗೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಎಲ್ಲಾ ಉತ್ಸವಗಳು, ದಿಂಡಿ(ಮೆರವಣಿಗೆ) ಉತ್ಸವ, ವಧ್ರ್ಯಂತ್ತೂತ್ಸವ, ಕಲ್ಯಾಣೋತ್ಸವ ಮತ್ತು ಸಂತರ್ಪಣೆ ರದ್ದುಗೊಳಿಸುವಂತೆ ಶ್ರೀ ಶ್ರೀ ಶ್ರೀ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೆರ ಸ್ವಾಮೀಜಿಯವರು ಆದೇಶ ಹೊರಡಿಸಿದ್ದಾರೆ. ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಉತ್ಸವವನ್ನು ರದ್ದುಪಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಎರಡನೇ ಹಂತದ ಕೊರೋನಾ ಸಾಂಕ್ರಾಮಿಕ ರೋಗ ಬಂದಿರುವುದರಿಂದ ಈ ಜಿಲ್ಲೆಯ ಜನರಲ್ಲಿ ಚಿಂತೆಯ ವಾತಾವರಣವು ಹರಡಿದೆ. ಸರಕಾರದ ಸೂಚನೆಯ ಮೇರೆಗೆ ಉತ್ಸವಗಳನ್ನು ರದ್ದುಪಡಿಸಲಾಗಿದೆ.