ಕೇರಳದಲ್ಲಿ ಅಧಿಕಾರಕ್ಕೆ ಬಂದರೆ, ಜಿಹಾದ್ ವಿರೋಧಿ ಕಾನೂನನ್ನು ಜಾರಿಗೊಳಿಸುತ್ತೇವೆ ! – ರಾಜನಾಥ ಸಿಂಗ

ಕೇರಳದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ, ಕೇವಲ ಲವ ಜಿಹಾದ್ ವಿರುದ್ಧ ಮಾತ್ರವಲ್ಲ, ಮತಾಂತರ, ಜನಸಂಖ್ಯಾ ನಿಯಂತ್ರಣ, ಸಮಾನ ನಾಗರಿಕ ಕಾನೂನು ಇತ್ಯಾದಿಗಳ ವಿರುದ್ಧವೂ ಕೇಂದ್ರ ಸರಕಾರವು ಕಾನೂನುಗಳನ್ನು ಜಾರಿಗೊಳಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ತಿರುವನಂತಪುರಂ (ಕೇರಳ) – ಎಲ್ಲರಿಗೂ ನ್ಯಾಯ, ಯಾರನ್ನೂ ಓಲೈಕೆ ಮಾಡದಿರುವುದು ಇದು ನಮ್ಮ ನೀತಿಯಾಗಿದೆ, ಕೇರಳದಲ್ಲಿ ಅಧಿಕಾರಕ್ಕೆ ಬಂದರೆ, ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಹ ಅವರು ರಾಜ್ಯದ ಪಂಬಡಿಯಲ್ಲಿ ನಡೆದ ರೋಡ ಶೋದಲ್ಲಿ ಭರವಸೆ ನೀಡಿದರು.