ದೇವಸ್ಥಾನವನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಲು ಸಂತರು ಚಳುವಳಿಯನ್ನು ಆರಂಭಿಸಬೇಕಾಗುತ್ತದೆ, ಇದು ಹಿಂದೂಗಳಿಗಾಗಿ ನಾಚಿಕೆಯ ವಿಷಯವಾಗಿದೆ ! ಕೇವಲ ತಮಿಳುನಾಡು ಅಷ್ಟೇ ಅಲ್ಲ, ಭಾರತಾದ್ಯಂತದ ದೇವಸ್ಥಾನಗಳನ್ನೂ ಸರಕಾರೀಕರಣದಿಂದ ಮುಕ್ತಗೊಳಿಸಬೇಕು, ಇದು ಹಿಂದೂಗಳ ಧರ್ಮಕರ್ತವ್ಯವಾಗಿದ್ದು, ಇದಕ್ಕಾಗಿ ಹಿಂದೂಗಳು ಕಟಿಬದ್ಧರಾಗುವ ಆವಶ್ಯಕತೆಯಿದೆ !
ನವದೆಹಲಿ : ತಮಿಳುನಾಡಿನಲ್ಲಿ ಸರಕಾರೀಕರಣ ಗೊಂಡಿರುವ ದೇವಾಲಯಗಳ ಶಿಥಿಲಾವಸ್ಥೆಯ ಬಗ್ಗೆ ಗಮನ ಸೆಳೆಯಲು ಸದ್ಗುರು ಜಗ್ಗಿ ವಾಸುದೇವ ಇವರು ೧೦೦ ಟ್ವೀಟ್ ಗಳನ್ನು ಮಾಡುತ್ತಾ ಆಂದೋಲನವನ್ನು ಪ್ರಾರಂಭಿಸಿದ್ದಾರೆ.
೧. ನನ್ನ ಈ ಆಂದೋಲನವು ಯಾರ ಮೇಲೂ ಒತ್ತಡ ಹೇರುವುದಕ್ಕಾಗಿ ಮಾಡುತ್ತಿಲ್ಲ, ಅತ್ಯಂತ ತೀವ್ರ ನೋವಿನಿಂದ ಈ ಆಂದೋಲನವನ್ನು ನಡೆಸಲಾಗುತ್ತಿದೆ ಮತ್ತು ಅದಕ್ಕಾಗಿ ನಾನು ೧೦೦ ಟ್ವೀಟ್‌ಗಳನ್ನು ಮಾಡುತ್ತಿದ್ದೇನೆ. ಸಮಾಜದ ಈ ವೇದನೆಯ ಧ್ವನಿಯು ಕೇಳಿಸಲೇಬೇಕು ಈಸ್ಟ್ ಇಂಡಿಯಾ ಕಂಪನಿಯು ನೀಡಿದ್ದ ದುರದೃಷ್ಟಕರ ಪರಂಪರೆಯಿಂದ ತಮಿಳುನಾಡಿನ ಹಿಂದೂ ದೇವಾಲಯಗಳು ಇನ್ನೂ ಸರಕಾರದ ನಿಯಂತ್ರಣದಲ್ಲಿವೆ. ಇದರಿಂದಾಗಿ ವೈಭವಶಾಲಿಯಾದ ತಮಿಳು ಸಂಪ್ರದಾಯವನ್ನು ಕೆಡಿಸಿತು ಮತ್ತು ಕತ್ತು ಹಿಸುಕಿತು. ಎಚ್‌ಆರ್ ಎಂಡ್ ಸಿ (ಹಿಂದೂ ಧಾರ್ಮಿಕ ಮತ್ತು ಮುಜರಾಯಿ ಎಂಡೋಮೆಂಟ್ ಇಲಾಖೆ) ವ್ಯಾಪ್ತಿಯಲ್ಲಿ ರಾಜ್ಯದ ೪೪ ಸಾವಿರದ ೨೨೧ ದೇವಾಲಯಗಳಿವೆ. ೧ ಲಕ್ಷ ೧೨ ಸಾವಿರ ೯೯೯ ದೇವಾಲಯಗಳಿಗೆ ದೈನಂದಿನ ಪೂಜೆಗೆ ಯಾವುದೇ ಆದಾಯವಿಲ್ಲ ಎಂದು ಮದ್ರಾಸ ಉಚ್ಚನ್ಯಾಯಾಲಯವು ತಿಳಿಸಿದೆ.
೨. ಈ ಟ್ವೀಟ್‌ನೊಂದಿಗೆ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಜಗ್ಗಿ ವಾಸುದೇವ್ ಅವರು ಈ ಮಹಾನ್ ಕಲೆ, ತಮಿಳು ಸಂಸ್ಕೃತಿಯ ಆತ್ಮ, ತಮಿಳು ಜನರ ಹೃದಯ, ಹಾಗೆಯೇ ಭಕ್ತಿಯ ಮೂಲದ ಈ ದುಸ್ಥಿತಿಯನ್ನು ನೋಡುವುದು ಹೃದಯ ವಿದ್ರಾವಕವಾಗಿದೆ ಎಂದು ಹೇಳಿದ್ದಾರೆ. ಈ ಭಕ್ತಿಯಿಂದಲೇ ನಮ್ಮ ಭಾಷೆ, ಕಲೆ ಮತ್ತು ಕರಕುಶಲ ವಸ್ತುಗಳನ್ನು ಸಂರಕ್ಷಿಸಲಾಗಿದೆ. ತಮಿಳಿನಲ್ಲಿ ಎಲ್ಲವೂ ಭಕ್ತಿಯಿಂದ ಬೇರೂರಿದೆ ಮತ್ತು ಈ ಭಕ್ತಿಗೆ ದೇವಾಲಯಗಳೇ ಅಡಿಪಾಯವಾಗಿವೆ. ಇವತ್ತು ಅವುಗಳನ್ನು ಇಂತಹ ಶೋಚನೀಯ ಸ್ಥಿತಿಯಲ್ಲಿ ನೋಡಿ ನನ್ನ ಮನಸ್ಸಿಗೆ ಅತೀವ ನೋವಾಗುತ್ತಿದೆ. ಈ ದೇವಾಲಯಗಳನ್ನು ಮುಕ್ತ ಮಾಡುವ ಸಮಯ ಇದೀಗ ಬಂದಿದೆ.