ಅಸ್ಸಾಂನಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ, ‘ಲ್ಯಾಂಡ್ ಜಿಹಾದ್’ ಮತ್ತು ‘ಲವ್ ಜಿಹಾದ್’ ವಿರುದ್ಧ ಕಾನೂನು ರಚಿಸುತ್ತೇವೆ ! – ಅಮಿತ್ ಷಾ ಭರವಸೆ

ಕೇಂದ್ರ ಸರಕಾರ ಇಂತಹ ಕಾನೂನುಗಳನ್ನು ಅಸ್ಸಾಂಗೆ ಮಾತ್ರವಲ್ಲ, ಇಡೀ ದೇಶದಲ್ಲಿ ಅನ್ವಯಿಸಬೇಕು ! ಅಷ್ಟೇ ಅಲ್ಲ, ಸಮಾನ ನಾಗರಿಕ ಕಾನೂನು, ಜನಸಂಖ್ಯಾ ನಿಯಂತ್ರಣ ಕಾನೂನು, ಮತಾಂತರ ನಿಷೇಧ ಕಾನೂನು ಇತ್ಯಾದಿ ಕಾನೂನುಗಳನ್ನು ಜಾರಿಗೊಳಿಸುವುದೂ ಅಗತ್ಯವಿದೆ !

ಗೌಹಾಟಿ (ಅಸ್ಸಾಂ) – ಅಸ್ಸಾಂನಲ್ಲಿ ಬಿಜೆಪಿ ಸರಕಾರ ಮತ್ತೆ ಅಧಿಕಾರಕ್ಕೆ ಬಂದರೆ, ‘ಲ್ಯಾಂಡ್ ಜಿಹಾದ್’ ಮತ್ತು ‘ಲವ್ ಜಿಹಾದ್’ ವಿರುದ್ಧ ಕಾನೂನು ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಚುನಾವಣಾ ಪ್ರಚಾರದ ವೇಳೆ ಹೇಳಿದ್ದಾರೆ. ಅಸ್ಸಾಂನಲ್ಲಿ ೩೪ ಜಿಲ್ಲೆಗಳಲ್ಲಿ ೧೧ ಜಿಲ್ಲೆ ಮುಸ್ಲಿಂ ಬಹುಸಂಖ್ಯಾತವಾಗಿವೆ. ರಾಜ್ಯದಲ್ಲಿ ಶೇ. ೨೫ ರಷ್ಟು ಮುಸ್ಲಿಮರಿದ್ದಾರೆ. ರಾಜ್ಯದಲ್ಲಿ ಹಿಂದೂ ಜನಸಂಖ್ಯೆಯ ಪ್ರಮಾಣವು ಶೇಕಡಾ ೨-೩ ರಷ್ಟು ಹೆಚ್ಚಾಗುತ್ತಿದ್ದರೆ ಮುಸಲ್ಮಾನರ ಪ್ರಮಾಣವು ಶೇ. ೨೦ ರಿಂದ ೩೦ ರಷ್ಟು ಹೆಚ್ಚುತ್ತಿದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಬಾಂಗ್ಲಾದೇಶದ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗುತ್ತಿದೆ. ಒಳನುಸುಳುವಿಕೆಯು ಇದಕ್ಕೆ ದೊಡ್ಡ ಕಾರಣವೆಂದು ಪರಿಗಣಿಸಲಾಗಿದೆ.