ತನ್ನ ೧೫ ರಿಂದ ೨೦ ಲಕ್ಷ ಕಪ್ಪು ಹಣಕ್ಕೆ ಬೆಂಕಿ ಹಚ್ಚಿದ ತಹಶೀಲ್ದಾರ !

ರಾಜಸ್ಥಾನದಲ್ಲಿ ಆಘಾತಕಾರಿ ಘಟನೆ !

ಓರ್ವ ತಹಶೀಲ್ದಾರನ ಬಳಿ ಲಕ್ಷಾಂತರ ರೂಪಾಯಿ ಮೌಲ್ಯದ ನೋಟುಗಳು ಸಿಗುತ್ತವೆ, ಇದು ಆಡಳಿತವು ಎಷ್ಟು ಭ್ರಷ್ಟಾಚಾರದಿಂದ ಕೂಡಿದೆ ಎಂಬುದು ತೋರಿಸುತ್ತದೆ. ಆಡಳಿತಕ್ಕೆ ತಗಲಿರುವ ಭ್ರಷ್ಟಾಚಾರದ ಗೆದ್ದಲು ನಾಶ ಮಾಡಲು ಇಂತಹ ಭ್ರಷ್ಟ ಅಧಿಕಾರಿಗಳ ಮತ್ತು ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !

ಸಿರೋಹಿ (ರಾಜಸ್ಥಾನ) – ಇಲ್ಲಿಯ ಪಿಂಗವಾಡಾ ತಾಲ್ಲೂಕಿನ ಭೂ ದಾಖಲೆಗಳ ತನಿಖಾಧಿಕಾರಿ ಪರತಬ ಸಿಂಗ್ ಅವರನ್ನು ಲಂಚ ಪಡೆಯುತ್ತಿರುವಾಗ ಭ್ರಷ್ಟಾಚಾರ ನಿಗ್ರಹ ದಳವು ಬಂಧಿಸಿದೆ. ಅದೇ ಸಂದರ್ಭದಲ್ಲಿ, ಭ್ರಷ್ಟಾಚಾರ ನಿಗ್ರಹ ದಳದ ತಂಡವೊಂದು ತಹಶೀಲ್ದಾರ ಕಲ್ಪೇಶ ಕುಮಾರ ಜೈನ ಅವರನ್ನು ಬಂಧಿಸಲು ಅವರ ಮನೆಗೆ ತಲುಪಿದಾಗ, ಅವರು ಮನೆಯೊಳಗೆ ಬಚ್ಚಿಕೊಂಡು, ಬೀಗ ಹಾಕಿ ಒಲೆಯ ಮೇಲೆ ೧೫ ರಿಂದ ೨೦ ಲಕ್ಷ ರೂಪಾಯಿಗಳ ನೋಟುಗಳನ್ನು ಸುಟ್ಟುಹಾಕಿದರು. ಓರ್ವ ಗುತ್ತಿಗೆದಾರರಿಂದ ಸರಕಾರಿ ಗುತ್ತಿಗೆಗಳನ್ನು ನೀಡುವ ಹೆಸರಿನಲ್ಲಿ ಲಂಚ ಕೇಳಿದ್ದರು ಇದು ಅವರ ಕಚೇರಿಯಲ್ಲಿ ಕೆಲಸ ಮಾಡುವ ಪರಬತ ಸಿಂಗ ಬಹಿರಂಗಪಡಿಸಿದ್ದಾರೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ವಿಭಾಗದ ಮಹಾನಿರ್ದೇಶಕ ಬಿ.ಎಲ್. ಸೋನಿ ಮಾಹಿತಿ ನೀಡಿದ್ದಾರೆ.