ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾದ ಕಾರ್ಯಾಗಾರದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಜಿಜ್ಞಾಸುಗಳಿಗೆ ಮಾಡಿದ ಮಾರ್ಗದರ್ಶನ

ಪರಾತ್ಪರ ಗುರು ಡಾ. ಆಠವಲೆ

ಪರಾತ್ಪರ ಗುರು ಡಾಕ್ಟರರು ‘ಸ್ಪಿರಿಚ್ಯುವಲ್ ಸಾಯನ್ಸ ರಿಸರ್ಚ್ ಫೌಂಡೇಶನ್ ಈ ಸಂಸ್ಥೆಯ ಪ್ರೇರಣಾ ಸ್ರೋತರಾಗಿದ್ದಾರೆ. ಅವರು ಜಗತ್ತಿನಾದ್ಯಂತ ಅಧ್ಯಾತ್ಮದ ಪ್ರಸಾರವನ್ನು ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿದ್ದಾರೆ. ಈ ವಿಶ್ವವಿದ್ಯಾಲಯದ ವತಿಯಿಂದ ಭಾರತದಲ್ಲಿನ ಗೋವಾದ ಆಧ್ಯಾತ್ಮಿಕ ಸಂಶೋಧನೆಯ ಕೇಂದ್ರದಲ್ಲಿ ೫ ದಿನಗಳ ಆಧ್ಯಾತ್ಮಿಕ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಾಗಾರಗಳ ಉದ್ದೇಶ ಜಿಜ್ಞಾಸುಗಳಿಗೆ ಸಾಧನೆಯ ಪ್ರಾಯೋಗಿಕ ಅಂಗಗಳ ಕುರಿತು ಮಾಹಿತಿ ನೀಡಿ ಅವರ ಸಾಧನೆಗೆ ಗತಿ ನೀಡುವುದಾಗಿದೆ. ಪರಾತ್ಪರ ಗುರು ಡಾಕ್ಟರರು ಈ ಕಾರ್ಯಾಗಾರದಲ್ಲಿನ ಜಿಜ್ಞಾಸುಗಳಿಗೆ ಮಾಡಿದ ಮಾರ್ಗದರ್ಶನವನ್ನು ಮುಂದೆ ಕೊಡಲಾಗಿದೆ.

ಗೋವಾದಲ್ಲಿನ ಸನಾತನದ ಆಶ್ರಮದಲ್ಲಿ ತೀರ್ಥಕ್ಷೇತ್ರಗಳಲ್ಲಿನ ಚೈತನ್ಯಕ್ಕಿಂತ ಹೆಚ್ಚು ಚೈತನ್ಯದ ಅರಿವಾಗುವುದು

ಸೌ. ಶ್ವೇತಾ ಕ್ಲಾರ್ಕ್ : ‘ಹಿಂದೆ ಶ್ರೀ. ನೀಲೇಶ ನಾರ್ವೇಕರ ಅಣ್ಣನವರಿಗೆ ತುಂಬಾ ಸಮಸ್ಯೆಗಳಿದ್ದವು. ಅಣ್ಣನವರು ಒಂದು ತೀರ್ಥಯಾತ್ರೆಯನ್ನು ಮಾಡಿದ್ದರು. ಅದರಲ್ಲಿ ಅವರು ದತ್ತಾತ್ರೇಯರ ಸ್ಥಾನಗಳ ದರ್ಶನ ಪಡೆದರು. ಈ ಯಾತ್ರೆಯ ಸಮಯದಲ್ಲಿ ಒಂದು ಬಾರಿ ಅವರು ಒಂದು ದತ್ತನ ದೇವಸ್ಥಾನದ ಗರ್ಭಗುಡಿಯಲ್ಲಿ ಕುಳಿತು ನಾಮಜಪವನ್ನು ಮಾಡುತ್ತಿದ್ದರು; ಆದರೆ ಅವರಿಗೆ ಅಲ್ಲಿ ಸ್ವಲ್ಪ ತೊಂದರೆಯ ಅರಿವಾಯಿತು. ಆ ದೇವಸ್ಥಾನದ ತುಲನೆಯಲ್ಲಿ ಅವರಿಗೆ ಆಶ್ರಮದಲ್ಲಿ ಹೆಚ್ಚು ಒಳ್ಳೆಯದೆನಿಸಿತು. ಇಲ್ಲಿ ಒಳ್ಳೆಯ ಶಕ್ತಿಯ ಪ್ರಮಾಣ ಹೆಚ್ಚಿದೆ ಎಂದು ಅವರಿಗೆ ಅರಿವಾಯಿತು.

ಪರಾತ್ಪರ ಗುರು ಡಾ. ಆಠವಲೆ : ‘ಆಶ್ರಮದಲ್ಲಿ ನಿಮಗೆ ತೀರ್ಥಕ್ಷೇತ್ರಕ್ಕಿಂತ ಹೆಚ್ಚು ಒಳ್ಳೆಯದೆನಿಸಿತು, ಈ ಅನುಭೂತಿಯು ಒಂದು ಅರ್ಥದಲ್ಲಿ ಯೋಗ್ಯವಾಗಿದೆ. ಬಾರ್ಶಿಯ ಓರ್ವ ಸಂತರಾದ ಪ.ಪೂ. ನಾನಾ ಕಾಳೆ ಮಹಾರಾಜರಿಗೆ ಒಂದು ಯಜ್ಞವನ್ನು ಮಾಡಬೇಕಾಗಿತ್ತು. ಅವರು ಸಂತರಾಗಿರುವುದರಿಂದ ಅಲ್ಲಿಂದಲೇ ‘ಯಜ್ಞಕ್ಕಾಗಿ ಯಾವ ಸ್ಥಳ ಸಾತ್ತ್ವಿಕವಾಗಿದೆ ?, ಎಂಬುದನ್ನು ತಿಳಿದುಕೊಳ್ಳಬಹುದಾಗಿತ್ತು. ಅವರು ಆ ಯಜ್ಞಕ್ಕಾಗಿ ಗೋವಾದ ಸನಾತನ ಆಶ್ರಮವನ್ನು ಆಯ್ದುಕೊಂಡರು. ಇದಕ್ಕೂ ಮೊದಲು ಅವರು ಎಂದಿಗೂ ಸನಾತನ ಸಂಸ್ಥೆಯ ಹೆಸರನ್ನು ಕೇಳಿರಲಿಲ್ಲ. ಈಶ್ವರನೇ ಅವರಿಗೆ ಇಲ್ಲಿಗೆ ಯಜ್ಞಕ್ಕಾಗಿ ಬರಲು ಹೇಳಿದನು. ಅದೇ ರಾತ್ರಿ ಅವರ ಗುರುಗಳೂ ಕನಸಿನಲ್ಲಿ ಬಂದು ‘ಸನಾತನ ಆಶ್ರಮಕ್ಕೆ ಹೋಗುವ ನಿನ್ನ ನಿರ್ಣಯ ಯೋಗ್ಯವಾಗಿದೆ, ಎಂದು ಹೇಳಿದರು. ಆ ಸಮಯದಲ್ಲಿ ಪ.ಪೂ. ನಾನಾರವರಿಗೆ ೮೨ ವರ್ಷ ವಯಸ್ಸಾಗಿತ್ತು ಮತ್ತು ಅವರ ಗುರುಗಳು ೫೦ ವರ್ಷಗಳ ಹಿಂದೆಯೇ ದೇಹತ್ಯಾಗ ಮಾಡಿದ್ದಾರೆ. ನಂತರ ಅವರು ಇಲ್ಲಿಗೆ ಬಂದರು. ಅವರಿಗೆ ಅಶ್ವಮೇಧ ಯಜ್ಞವನ್ನು ಮಾಡುವುದಿತ್ತು. ನಾನು ಅವರಿಗೆ, “ನೀವು ೮೨ ವರ್ಷದವರಾಗಿರುವಿರಿ. ಯಜ್ಞಕ್ಕಾಗಿ ನಿಮಗೆ ಕುದುರೆ ಮತ್ತು ಯಜ್ಞಸಾಮಗ್ರಿಗಳನ್ನು ಇಲ್ಲಿಗೆ ತರಬೇಕಾಗುತ್ತದೆ. ಬಾರ್ಶಿಯಿಂದ ೫೦೦ ಕಿಲೋಮೀಟರ್ ದೂರ ಇಲ್ಲಿ ಬರುವ ನಿರ್ಣಯವನ್ನು ನೀವು ಏಕೆ ತೆಗೆದು ಕೊಂಡಿರಿ ?, ಎಂದು ಕೇಳಿದೆ. ಅದಕ್ಕೆ ಅವರು, “ನಾನು ಇತರ ಯಾವುದೇ ಸ್ಥಳದಲ್ಲಿ ಯಜ್ಞವನ್ನು ಮಾಡಿದ್ದರೆ, ಆ ಯಜ್ಞದಿಂದ ನಿರ್ಮಾಣವಾಗುವ ಚೈತನ್ಯದ ಪೈಕಿ ಶೇ. ೩೦ ರಷ್ಟು ಚೈತನ್ಯವು ಎಲ್ಲಿ ಯಜ್ಞ ನಡೆಯುವುದೋ, ಅಲ್ಲಿನ ಭೂಮಿಯನ್ನು ಶುದ್ಧ ಮಾಡಲು ಮತ್ತು ಶೇ. ೪೦ ರಷ್ಟು ಚೈತನ್ಯವು ಅಲ್ಲಿನ ವಾತಾವರಣದ ಶುದ್ಧಿಗಾಗಿ ಉಪಯೋಗವಾಗುತ್ತಿತ್ತು. ನನಗೆ ಆ ಯಜ್ಞದ ಚೈತನ್ಯದಿಂದ ಕೇವಲ ಶೇ. ೩೦ ರಷ್ಟೇ ಲಾಭವಾಗುತ್ತಿತ್ತು. ಇಲ್ಲಿ ಯಜ್ಞವನ್ನು ಮಾಡುವುದರಿಂದ ನನಗೆ ಯಜ್ಞದ ಚೈತನ್ಯದ ಶೇ. ೧೦೦ ರಷ್ಟು ಲಾಭವಾಗುವುದು. ನಾನು ಸ್ವಾರ್ಥಿಯಾಗಿದ್ದೇನೆ, ಎಂದು ಹೇಳಿದರು. ಆದ್ದರಿಂದ ನಿಮಗೆ ಯಾವ ಅನುಭೂತಿ ಬಂದಿತೋ, ಅದು ಯೋಗ್ಯವಾಗಿದೆ. ಇತರ ಕೆಲವು ತೀರ್ಥಕ್ಷೇತ್ರಗಳಿಗಿಂತ ಆಶ್ರಮದಲ್ಲಿ ಚೈತನ್ಯ ಬಹಳ ಹೆಚ್ಚಿದೆ.

(ಮುಕ್ತಾಯ)