ಕೆಲವು ಪೊಲೀಸರಿಗೆ ಗಾಯ ! ದಾಳಿಕೋರರಲ್ಲಿ ಮಹಿಳೆಯರು ಕೂಡ ಇದ್ದರು !
* ಉತ್ತರ ಪ್ರದೇಶದಲ್ಲಿ ಹದಗೆಟ್ಟ ಕಾನೂನು-ವ್ಯವಸ್ಥೆ ! ಪೊಲೀಸರ ಮೇಲೆ ದಾಳಿ ಮಾಡುವ ಮತಾಂಧರ ಧೈರ್ಯವನ್ನು ಮೆಟ್ಟಿಹಾಕಲು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನು ಪೊಲೀಸರಿಗೆ ನೀಡಿ ! * ಮತಾಂಧ ಮಹಿಳೆಯರು ಕೂಡ ಅಪರಾಧಿ ವೃತ್ತಿಯವರಾಗಿರುತ್ತಾರೆ ಹಾಗೂ ಅವರು ಪೊಲೀಸರ ಮೇಲೆ ಹಲ್ಲೆ ಮಾಡಲು ಹಿಂಜರಿಯುವುದಿಲ್ಲ ಎಂಬುದನ್ನು ಗಮಮದಲ್ಲಿಟ್ಟುಕೊಳ್ಳಿ ! |
ಕಾನಪುರ (ಉತ್ತರ ಪ್ರದೇಶ) – ಇಲ್ಲಿಯ ಕಹಿಜರಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆಯಿಂದಾಗಿ ಮಹಿಳೆಯ ಮೇಲೆ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಂದೆ ಹಾಗೂ ಮಗನನ್ನು ಬಂಧಿಸಲು ಭಿಖದೇವ ಗ್ರಾಮಕ್ಕೆ ತೆರಳಿದ್ದಾಗ ಅವರ ಮೇಲೆ ಮತಾಂಧರು ಕಲ್ಲು ಮತ್ತು ಇಟ್ಟಿಗೆಗಳಿಂದ ಹಲ್ಲೆ ಮಾಡಿದ್ದಾರೆ. ಇದರಲ್ಲಿ ಕೆಲವು ಪೊಲೀಸರು ಗಾಯಗೊಂಡಿದ್ದಾರೆ. (ಹಿಂದೂಗಳ ಮೇಲೆ ಗಂಡಸುತನ ತೋರಿಸುವ ಪೊಲೀಸರು ಮತಾಂಧರಿಂದ ಹೊಡೆಸಿಕೊಳ್ಳುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು) ದಾಳಿ ಮಾಡುವವರಲ್ಲಿ ಕೆಲವು ಮಹಿಳೆಯರೂ ಇದ್ದರು. ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.