|
ನವ ದೆಹಲಿ : ಕೆಲವು ದಿನಗಳ ಹಿಂದೆ ಉತ್ತರಪ್ರದೇಶದ ಮೀರತ್ ಮತ್ತು ಗಾಜಿಯಾಬಾದ್‌ನಲ್ಲಿ ತಂದೂರ್ ರೋಟಿ ತಯಾರಿಸುವಾಗ, ಅದರ ಮೇಲೆ ಉಗುಳುವುದು ಕಂಡುಬಂದಿದೆ. ಹಾಗೆ ಮಾಡಿದ ಮತಾಂಧರನ್ನು ಸಹ ಬಂಧಿಸಲಾಗಿತ್ತು. ಆದರೂ ಈ ರೀತಿಯಲ್ಲಿ ನಡೆಯುತ್ತಿರುವ ಘಟನೆ ಬೆಳಕಿಗೆ ಬರುತ್ತಿದೆ ಈಗ ದೇಶದ ರಾಜಧಾನಿ ದೆಹಲಿಯಲ್ಲೂ ಇದೇ ನಡೆದಿದೆ. ಈ ಪ್ರಕರಣದಲ್ಲಿ ಇಬ್ಬರು ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಖ್ಯಾಲಾ ಪ್ರದೇಶದ ಚಾಂದ್ ಹೋಟೆಲ್‌ನ ಭಟ್ಟಿಯಲ್ಲಿ ಇಬ್ಬರು ತಂದೂರ್ ರೋಟಿ ತಯಾರಿಸುವ ವೀಡಿಯೋ ಪ್ರಸಾರವಾಯಿತು. ಒಬ್ಬ ವ್ಯಕ್ತಿಯು ತಂದೂರ್ ರೋಟಿ ತಯಾರಿಸಿ ಅದನ್ನು ಭಟ್ಟಿಯ ಒಳಗೆ ಹಾಕುವ ಮೊದಲು ಅದರ ಮೇಲೆ ಉಗುಳುವುದು ಪತ್ತೆಯಾದ ನಂತರ ಪೊಲೀಸರಿಗೆ ದೂರು ನೀಡಲಾಗಿದೆ. ನಂತರ ಮೊಹಮ್ಮದ್ ಇಬ್ರಾಹಿಂ ಮತ್ತು ಸಾಬಿ ಅನ್ವರ್ ಅವರನ್ನು ಬಂಧಿಸಲಾಯಿತು. ಘಟನೆ ನಡೆದ ಹೋಟೆಲ್‌ಗೆ ಅಧಿಕೃತ ಪರವಾನಿಗೆ ಇರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಪರವಾನಿಗೆ ಇಲ್ಲದ ಕಾರಣ ಹೋಟೆಲ್ ಮಾಲೀಕರಿಗೂ ದಂಡ ವಿಧಿಸಲಾಗಿದೆ.