ಶ್ರೀ ಜಗನ್ನಾಥ ದೇವಾಲಯದ ೩೫ ಸಾವಿರ ಎಕರೆ ಭೂಮಿಯನ್ನು ಮಾರಾಟ ಮಾಡುವ ಸುದ್ದಿ ಸಂಪೂರ್ಣವಾಗಿ ತಪ್ಪು ! – ದೇವಾಲಯ ಆಡಳಿತದ ಸ್ಪಷ್ಟೀಕರಣ

ಪುರಿ (ಒಡಿಶಾ) – ಇಲ್ಲಿಯ ಪ್ರಸಿದ್ಧ ಶ್ರೀ ಜಗನ್ನಾಥ ದೇವಾಲಯದ ೩೫ ಸಾವಿರ ಎಕರೆ ಭೂಮಿಯನ್ನು ಮಾರಾಟ ಮಾಡಲಾಗುವುದು ಎಂಬ ಸುದ್ದಿಯ ಬಗ್ಗೆ ದೇವಾಲಯ ಆಡಳಿತವು ಸ್ಪಷ್ಟೀಕರಣ ನೀಡಿದೆ. ಭೂಮಿ ಮಾರಾಟದ ಸುದ್ದಿ ಸಂಪೂರ್ಣವಾಗಿ ಸುಳ್ಳು ಎಂದು ಆಡಳಿತವು ಹೇಳಿದೆ. ಇದನ್ನು ಮಾಧ್ಯಮಗಳು ತಪ್ಪಾಗಿ ನಿರೂಪಿಸಿವೆ ಎಂದು ಹೇಳಿದರು.

ಶ್ರೀ ಜಗನ್ನಾಥ ದೇವಾಲಯ ಕಾರ್ಯಾಲಯವು ತನ್ನ ಟ್ವೀಟ್ ನಲ್ಲಿ, ಬಹಳ ಕಾಲದಿಂದ ದೇವಾಲಯದ ಭೂಮಿಯು ಬೇರೆಬೇರೆ ಜನರ ನಿಯಂತ್ರಣದಲ್ಲಿದೆ, ಅದನ್ನು ಮರಳಿ ಪಡೆಯಲು ೨೦೦೩ ರಲ್ಲಿ ಧೋರಣೆಗಳನ್ನು ರೂಪಿಸಲಾಗಿದೆ. ಅದರ ಅಡಿಯಲ್ಲಿ ಈ ಭೂಮಿಯ ಮೇಲೆ ಹಿಡಿತ ಸಾಧಿಸಲು ಪ್ರಯತ್ನಗಳು ನಡೆಯುತ್ತಿವೆ. ದೇವಾಲಯದ ಭೂಮಿಯನ್ನು ರಕ್ಷಿಸುವುದೇ ಈ ಧೋರಣೆಯ ಉದ್ದೇಶವಾಗಿದೆ.

೨೦೦೧ ರಿಂದ ೨೦೧೦ ರವರೆಗೆ ೨೯೨ ಎಕರೆ ಭೂಮಿಯನ್ನು ಇತರರ ನಿಯಂತ್ರಣದಿಂದ ವಶಪಡಿಸಿಕೊಳ್ಳಲಾಗಿದೆ, ೨೦೧೧ ರಿಂದ ೨೦೨೧ ರವರೆಗೆ ೯೬ ಎಕರೆ ಭೂಮಿಯನ್ನು ಬಿಡಿಸಿಕೊಳ್ಳಲಾಗಿದೆ. ಈ ಭೂಮಿಯನ್ನು ಜನರಿಗಾಗಿ ಬಳಸಲಾಗುತ್ತಿದೆ. ಇವುಗಳಲ್ಲಿ ಶಾಲೆಗಳು, ವೈದ್ಯಕೀಯ ಮಹಾವಿದ್ಯಾಲಯಗಳು, ರಸ್ತೆಗಳು ನಿರ್ಮಿಸುವುದು ಇವುಗಳು ಸೇರಿವೆ ಎಂದು ಹೇಳಿದೆ.