ಕೋಟಾ (ರಾಜಸ್ಥಾನ) ದಲ್ಲಿ ೧೫ ವರ್ಷದ ಬಾಲಕಿಯ ಮೇಲೆ ೧೮ ಮಂದಿಯಿಂದ ೯ ದಿನಗಳ ಕಾಲ ಅತ್ಯಾಚಾರ !

ಕೋಟಾ (ರಾಜಸ್ಥಾನ) – ಇಲ್ಲಿಯ ೧೫ ವರ್ಷದ ಬಾಲಕಿಯನ್ನು ಜಾಲಾವಾಡಗೆ ಕರೆದೊಯ್ದು ೯ ದಿನಗಳ ಕಾಲ ೧೮ ಕ್ಕೂ ಹೆಚ್ಚು ಜನರು ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅತ್ಯಾಚಾರದ ಸಮಯದಲ್ಲಿ ತೊಂದರೆಯಾಗುತ್ತಿರುವಾಗ ಆ ಬಾಲಕಿಗೆ ಮಾದಕ ದ್ರವ್ಯಗಳನ್ನು ನೀಡಲಾಗುತ್ತಿತ್ತು. ಅದನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕಾಗಿ ಅವಳನ್ನು ಹೊಡೆಯುತ್ತಿದ್ದರು. ಈ ಪ್ರಕರಣದಲ್ಲಿ ನಾಲ್ಕು ಅಪ್ರಾಪ್ತರು ಸೇರಿದಂತೆ ೨೦ ಜನರನ್ನು ಬಂಧಿಸಲಾಗಿದೆ.

ಫೆಬ್ರವರಿ ೨೫ ರಂದು ಹುಡುಗಿಯ ಪರಿಚಯಸ್ತ ಹುಡುಗಿ ಹಾಗೂ ಆಕೆಯ ಸಹಚರನು ಆಕೆಗೆ ಬ್ಯಾಗನ್ನು ಖರೀದಿಸುವ ನೆಪದಲ್ಲಿ ಜಾಲಾವಾಡಕ್ಕೆ ಕರೆದೊಯ್ದರು. ಅಲ್ಲಿ ಅವರು ಬಾಲಕಿಯನ್ನು ಕೆಲವು ಜನರ ವಶಕ್ಕೆ ನೀಡಿದರು. ಅವರು ಆಕೆಯನ್ನು ಮನೆ, ಹೋಟೆಲ್, ನಿರ್ಮಾಣ ಹಂತದಲ್ಲಿರುವ ಕಟ್ಟಡ ಮತ್ತು ಜಮೀನಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದರು. ನಂತರ ಮಾರ್ಚ್ ೫ ರಂದು ಅವಳನ್ನು ಮರಳಿ ಕರೆದುಕೊಂಡು ಹೋಗಿ ಬಿಟ್ಟುರು. ಸಂತ್ರಸ್ತೆ ತಾಯಿಯೊಂದಿಗೆ ಹೋಗಿ ಪೊಲೀಸರಿಗೆ ದೂರು ನೀಡಿದ ನಂತರ ಅಪರಾಧವನ್ನು ದಾಖಲಿಸಿದರು.

ಹುಡುಗಿ ನಾಪತ್ತೆಯಾಗಿರುವ ಬಗ್ಗೆ ದೂರನ್ನು ದಾಖಲಿಸಲು ಪೊಲೀಸರಿಂದ ನಕಾರ

ಇಂತಹ ಪೊಲೀಸರ ವಿರುದ್ಧ ಅಪರಾಧಗಳನ್ನು ದಾಖಲಿಸಬೇಕು ಮತ್ತು ಅವರನ್ನು ವಜಾ ಮಾಡಿ ಜೈಲಿಗೆ ತಳ್ಳಬೇಕು ! ಪೊಲೀಸರು ದೂರು ದಾಖಲಿಸಿ ಹುಡುಕಿದ್ದರೆ, ಆಗಲೇ ಬಾಲಕಿ ಪತ್ತೆಯಾಗುತ್ತಿದ್ದಳು !

ಈ ಸಮಯದಲ್ಲಿ ಬಾಲಕಿ ನಾಪತ್ತೆಯಾದ ಬಗ್ಗೆ ಸಂತ್ರಸ್ತೆಯ ಸಹೋದರ ಪೊಲೀಸರಿಗೆ ದೂರು ನೀಡಲು ಪ್ರಯತ್ನಿಸಿದಾಗ, ಆತನನ್ನು ಪೊಲೀಸರು ಓಡಿಸಿದರು ಎಂದು ಅವರು ಆರೋಪಿಸಿದ್ದಾರೆ.