ತಮಿಳುನಾಡಿನ ಸಾವಿರಾರು ದೇವಸ್ಥಾನಗಳ ಸ್ಥಿತಿ ದಯನೀಯ ! – ಸದ್ಗುರು ಜಗ್ಗಿ ವಾಸುದೇವ್

* ಎಲ್ಲಿ ದೇವಸ್ಥಾನಗಳಿಗೆ ದಾನ ನೀಡಿ ಅವುಗಳನ್ನು ಯೋಗ್ಯ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ ಹಿಂದಿನ ರಾಜರು ಮತ್ತು ಎಲ್ಲಿ ಹಿಂದೂಗಳ ದೇವಸ್ಥಾನಗಳನ್ನು ಸರಕಾರಿಕರಣದ ಮೂಲಕ ಲೂಟಿ ಮಾಡುವ ಮತ್ತು ಅಕ್ಷಮ್ಯ ನಿರ್ಲಕ್ಷ ತೋರುತ್ತಿರುವ ಇಂದಿನವರೆಗಿನ ಆಡಳಿತಗಾರರು !

* ದೇವಸ್ಥಾನಗಳ ಬಗ್ಗೆ ರಾಜಕಾರಣಿಗಳ ಉದಾಸೀನತೆಯನ್ನು ನೋಡಿದಾಗ ದೇಶದ ಶ್ರೀಮಂತ ದೇವಸ್ಥಾನಗಳು ದೇಶದಲ್ಲಿ ಯಾವ ದೇವಸ್ಥಾನಗಳ ಸ್ಥಿತಿ ದಯನೀಯವಾಗಿದೆಯೋ ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ! ಅಲ್ಲದೇ, ದೇಶಾದ್ಯಂತ ದೇವಸ್ಥಾನಗಳ ನಿರ್ವಹಣೆಗೆ ಅನುಕೂಲವಾಗುವಂತೆ ಒಂದು ಸಮಿತಿ ಅಥವಾ ಮಹಾಸಂಘವನ್ನು ರಚಿಸಬೇಕು !

* ಈಗ ತಮಿಳುನಾಡಿನಲ್ಲಿ ಸುಳ್ಳು ಆರೋಪದ ಮೇಲೆ ಶಂಕರಾಚಾರ್ಯರನ್ನು ಬಂಧಿಸಿದ ಅಣ್ಣಾದ್ರಮುಕ್ ಸರಕಾರ ಅಧಿಕಾರದಲ್ಲಿದೆ. ಅಂತಹ ಹಿಂದೂದ್ವೇಷಿ ಸರಕಾರವು ದೇವಸ್ಥಾನಗಳನ್ನು ಉತ್ತಮ ಸ್ಥಿತಿಯಲ್ಲಿ ಇಡುವುದೇ ?

ಸದ್ಗುರು ಜಗ್ಗಿ ವಾಸುದೇವ್

ನವ ದೆಹಲಿ – ತಮಿಳುನಾಡಿನ ದೇವಸ್ಥಾನಗಳ ಶೋಚನೀಯ ಸ್ಥಿತಿಯ ಬಗ್ಗೆ ಯುನೆಸ್ಕೋ ಈಗಾಗಲೇ ಕಳವಳ ವ್ಯಕ್ತ ಪಡಿಸಿದೆ. ತಮಿಳುನಾಡು ಸರಕಾರವು ಜುಲೈ ೨೦೨೦ ರಲ್ಲಿ ರಾಜ್ಯದಲ್ಲಿ ೧೧ ಸಾವಿರದ ೯೯೯ ದೇವಸ್ಥಾನಗಳಿವೆ, ಅಲ್ಲಿ ಹಣಕಾಸಿನ ತೊಂದರೆಯಿಂದ ಪೂಜೆ ಎಂದಿಗೂ ನಡೆಯುವುದೇ ಇಲ್ಲ. ೩೪ ಸಾವಿರ ದೇವಸ್ಥಾನಗಳಿದ್ದು, ಅಲ್ಲಿ ವಾರ್ಷಿಕ ಆದಾಯ ೧೦ ಸಾವಿರ ರೂಪಾಯಿಗಳಿಗಿಂತ ಕಡಿಮೆಯಿದೆ. ಇದಲ್ಲದೆ, ೩೭ ಸಾವಿರ ದೇವಸ್ಥಾನಗಳಲ್ಲಿ ಪೂಜೆ, ನಿರ್ವಹಣೆ, ಭದ್ರತೆ ಮತ್ತು ಸ್ವಚ್ಛತೆಯ ಜವಾಬ್ದಾರಿ ಒಬ್ಬ ವ್ಯಕ್ತಿಯ ಮೇಲಿದೆ ಎಂದು ಮದ್ರಾಸ್ ಹೈಕೋರ್ಟ್‍ಗೆ ಹೇಳಿತ್ತು, ಎಂಬುದಾಗಿ ತಮಿಳುನಾಡಿನ ದೇವಸ್ಥಾನಗಳ ಶಿಥಿಲಾವಸ್ಥೆ ಬಗ್ಗೆ ‘ಇಂಡಿಯಾ ಟುಡೆ ಕಾನ್ಕ್ಲೇವ್ ಸೌತ್ ೨೦೨೧’ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದಾರೆ.

(ಸೌಜನ್ಯ : India Today Conclave)

೧. ದೇವಸ್ಥಾನಗಳ ಹೆಸರಿನಲ್ಲಿ ರಾಜ್ಯದಲ್ಲಿ ೫ ಲಕ್ಷ ಎಕರೆ ಭೂಮಿ ಇದೆ. ೨ ಕೋಟಿ ೩೩ ಲಕ್ಷ ಚದರಡಿ ಜಾಗದಲ್ಲಿ ಕಟ್ಟಡವಿದೆ; ಆದರೆ, ವಾರ್ಷಿಕ ಆದಾಯ ಕೇವಲ ೧೨೮ ಕೋಟಿ ರೂಪಾಯಿ ಇದೆ. ಇದರಲ್ಲಿ ಶೇ. ೧೪ ರಷ್ಟು ಮೊತ್ತ ಲೆಕ್ಕ ಪರಿಶೋಧನೆ ಮತ್ತು ನಿರ್ವಹಣೆಗೆ ಖರ್ಚು ಮಾಡಲಾಗಿದ್ದರೆ, ಶೇ. ೧-೨ ರಷ್ಟು ಹಣವು ಪೂಜೆ, ಹಬ್ಬ ಮತ್ತು ಉತ್ಸವಗಳಿಗೆ ಖರ್ಚು ಮಾಡಲಾಗುತ್ತದೆ, ಎಂದು ಸದ್ಗುರು ವಾಸುದೇವ್ ಇವರು ಹೇಳಿದರು.

. ಗುರುದ್ವಾರ ನಿರ್ವಹಣಾ ಸಮಿತಿಯು ೮೫ ಗುರುದ್ವಾರಗಳ ಜವಾಬ್ದಾರಿಯನ್ನು ಹೊಂದಿದೆ. ಅವರ ವಾರ್ಷಿಕ ಆದಾಯ ೧ ಸಾವಿರ ಕೋಟಿ ರೂಪಾಯಿಗಳಿದೆ. ಅವರು ತಮ್ಮ ಧರ್ಮಬಾಂಧವರ ಸೇವೆಯನ್ನೂ ಒಳ್ಳೆಯದಾಗಿ ಮಾಡುತ್ತಾರೆ. ತಮಿಳುನಾಡಿನ ಹಿಂದೂಗಳ ಜನಸಂಖ್ಯೆಯ ಶೇ. ೮೫ ರಷ್ಟಿದೆ. ಇಲ್ಲಿ ೪೪  ಸಾವಿರ ದೇವಸ್ಥಾನಗಳಿವೆ; ಆದರೆ, ಅದರ ವಾರ್ಷಿಕ ಆದಾಯ ಕೇವಲ ೧೨೮ ಕೋಟಿ ರೂಪಾಯಿ ಇದೆ, ಎಂದು ಸದ್ಗುರು ವಾಸುದೇವ್ ಹೇಳಿದರು.