ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಲು ರಾಷ್ಟ್ರವ್ಯಾಪಿ ಹೋರಾಟ ನಡೆಸುವ ಆವಶ್ಯಕತೆಯಿದೆ ! – ಅಧಿವೇಶನದಲ್ಲಿ ಗಣ್ಯರ ಒಮ್ಮತ
ದೇಶಾದ್ಯಂತ ಸರಕಾರೀಕರಣವಾಗಿರುವ ದೇವಸ್ಥಾನಗಳಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ; ಲಕ್ಷಾಂತರ ಎಕರೆ ಭೂಮಿಯ ಲೂಟಿ ಮಾಡುವುದು; ೨೦೧೪ ರಲ್ಲಿ ಸರ್ವೋಚ್ಚ ನ್ಯಾಯಾಲಯವು ದೇವಸ್ಥಾನಗಳನ್ನು ಭಕ್ತರಿಗೆ ಹಿಂದಿರುಗಿಸಲು ತೀರ್ಪು ನೀಡಿದ್ದರೂ ಅದನ್ನು ಅನುಷ್ಠಾನಗೊಳಿಸದಿರುವುದು, ಅನೇಕ ರಾಜ್ಯಗಳಲ್ಲಿ ಕೇವಲ ಹಿಂದೂಗಳ ದೇವಸ್ಥಾನಗಳನ್ನು ಕಾನೂನು ರೂಪಿಸಿ ಮಾಡಲಾಗುತ್ತಿರುವ ಸರಕಾರೀಕರಣ; ಹಿಂದೂ ದೇವಸ್ಥಾನಗಳಲ್ಲಿ ದೇವನಿಧಿ ಮತ್ತು ಭೂಮಿಯನ್ನು ಇತರ ಪಂಥಗಳಿಗೆ ಅಮಾನ್ಯವಾಗಿ ವಿತರಿಸುವುದು; ತಥಾಕಥಿತ ಸಮಾನತೆ ಮತ್ತು ಆಧುನಿಕತೆಯ ಹೆಸರಿನಲ್ಲಿ ದೇವಸ್ಥಾನಗಳಲ್ಲಿನ ಪ್ರಾಚೀನ ರೂಢಿ-ಪರಂಪರೆಗಳ ಮೇಲೆ ನಿರ್ಬಂಧಗಳನ್ನು ವಿಧಿಸುವುದು; ಸಾಂಪ್ರದಾಯಿಕ ಪುರೋಹಿತರನ್ನು ತೆಗೆದುಹಾಕಲು ಉದ್ದೇಶಪೂರ್ವಕವಾಗಿ ಆಂದೋಲನಗಳನ್ನು ನಡೆಸುವುದು; ದೇವಸ್ಥಾನದಲ್ಲಿನ ನಿರ್ವಹಣೆಯಲ್ಲಿ ಜಾತ್ಯತೀತತೆಯ ಹೆಸರಿನಲ್ಲಿ ಇತರ ಪಂಥೀಯ ಅಧಿಕಾರಿಗಳ ನೇಮಕಾತಿ; ಅಲ್ಲದೆ, ದೇಶಾದ್ಯಂತ ಮತಾಂಧರಿಂದ ದೇವಸ್ಥಾನಗಳ ಮೇಲಾಗುತ್ತಿರುವ ಅತಿಕ್ರಮಣ, ಆಕ್ರಮಣ ಮತ್ತು ವಿಗ್ರಹಗಳ ವಿಧ್ವಂಸಕ ಕೃತ್ಯಗಳಂತಹ ವಿವಿಧ ರೀತಿಯಲ್ಲಿ ದೇವಸ್ಥಾನಗಳ ಮೇಲೆ ಆಘಾತ ಮಾಡಿ ದೇವಸ್ಥಾನ ಸಂಸ್ಕೃತಿಯನ್ನು ನಾಶ ಮಾಡುವ ದೊಡ್ಡ ಪಿತೂರಿ ನಡೆಯುತ್ತಿದೆ. ದೇವಸ್ಥಾನಗಳ ಮೇಲಾಗುವ ಆಘಾತಗಳ ವಿರುದ್ಧ ಈಗ ಹಿಂದೂಗಳು ಸಂಘಟಿತರಾಗಿ ರಾಷ್ಟ್ರವ್ಯಾಪಿ ಹೋರಾಟ ನಡೆಸುವ ಆವಶ್ಯಕತೆ ಇದೆ, ಎಂದು ‘ಆನ್‌ಲೈನ್’ ಮಂದಿರ ಸಂಸ್ಕೃತಿ-ರಕ್ಷಾ ರಾಷ್ಟ್ರೀಯ ಅಧಿವೇಶನ ೨೦೨೧’ ನಲ್ಲಿ ಭಾಗವಹಿಸಿದ ದೇಶಾದ್ಯಂತದ ೨೨ ಕ್ಕೂ ಹೆಚ್ಚು ಗಣ್ಯರು ತಮ್ಮ ಮನೋಗತವನ್ನು ವ್ಯಕ್ತಪಡಿಸಿದರು. ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ ಮತ್ತು ‘ಹಿಂದೂ ಜನಜಾಗೃತಿ ಸಮಿತಿ’ಯ ವತಿಯಿಂದ ಇದೇ ಮೊದಲಬಾರಿ ಅಧಿವೇಶನವನ್ನು ಆಯೋಜಿಸಲಾಗಿತ್ತು.
ಅಮರಾವತಿಯ ‘ಶಿವಧಾರಾ ಆಶ್ರಮ’ದ ಸಂತ. ಡಾ. ಸಂತೋಷಕುಮಾರ ಮಹಾರಾಜ ಮತ್ತು ಸನಾತನ ಸಂಸ್ಥೆಯ ಪೂರ್ವೋತ್ತರ ಭಾರತ ಧರ್ಮಪ್ರಸಾರಕರಾದ ಪೂ. ನಿಲೇಶ ಸಿಂಗಬಾಳ ಅವರ ಶುಭಹಸ್ತದಿಂದ ದೀಪಪ್ರಜ್ವಲನೆ ಮಾಡಿ ಅಧಿವೇಶನವನ್ನು ಉದ್ಘಾಟಿಸಲಾಯಿತು. ಈ ಅಧಿವೇಶನದಲ್ಲಿ ದೇಶಾದ್ಯಂತದ ೧೦೦೦ ಕ್ಕೂ ಹೆಚ್ಚು ಸಂತರು, ದೇವಸ್ಥಾನದ ವಿಶ್ವಸ್ಥರು, ಧಾರ್ಮಿಕ ಸಂಸ್ಥೆಗಳ ಪ್ರತಿನಿಧಿಗಳು, ಪುರೋಹಿತರು, ನ್ಯಾಯವಾದಿಗಳು ಮತ್ತು ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಅಧಿವೇಶನವನ್ನು ಫೇಸ್‌ಬುಕ್, ಯೂಟ್ಯೂಬ್ ಮತ್ತು ಟ್ವಿಟರ್ ಮೂಲಕ ೨೦೪೩೦ ಜನರು ವೀಕ್ಷಿಸಿದರು. ಅಧಿವೇಶನದ ಆರಂಭದಲ್ಲಿ, ‘ದೇವಸ್ಥಾನ ಸರಕಾರಿಕರಣದ ದುಷ್ಪರಿಣಾಮಗಳು ಮತ್ತು ದೇವಸ್ಥಾನಗಳ ಮೇಲಿನ ಆಘಾತಗಳು’ ಎಂಬ ಬಗ್ಗೆ ಒಂದು ಧ್ವನಿಚಿತ್ರಸುರುಳಿಯನ್ನು ತೋರಿಸಲಾಯಿತು, ಕೊನೆಯಲ್ಲಿ ದೇವಸ್ಥಾನ ಸಂಸ್ಕೃತಿಯ ರಕ್ಷಣೆ ಮತ್ತು ಸಮವರ್ಧನೆಗಾಗಿ ವಿವಿಧ ನಿರ್ಣಯಗಳನ್ನು ಮಂಡಿಸಲಾಯಿತು. ಇವೆಲ್ಲ ನಿರ್ಣಯಗಳನ್ನು ‘ಹರ ಹರ ಮಹಾದೇವ’ ಜಯಘೋಷದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಈ ಸಂದರ್ಭದಲ್ಲಿ ನ್ಯಾಯವಾದಿ ಕಿರಣ ಬೆಟ್ಟದಾಪುರ ಇವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಬಯಲಿಗೆಳೆದರು ಅಲ್ಲದೇ ‘ದೇವಸ್ಥಾನ ಹಾಗೂ ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’ದ ರಾಜ್ಯ ವಕ್ತಾರರಾದ ಶ್ರೀ. ಗುರುಪ್ರಸಾದ ಗೌಡ ಇವರು ಮಾತನಾಡಿದರು.
ಚಿಕ್ಕಮಗಳೂರಿನಲ್ಲಿ ದತ್ತಪೀಠದ ಮೇಲಿನ ಇಸ್ಲಾಮಿಕ್ ಅತಿಕ್ರಮಣವನ್ನು ತೆಗೆದುಹಾಕುವಂತೆ ಹಿಂದೂಗಳು ಸರಕಾರವನ್ನು ಒತ್ತಾಯಿಸಬೇಕು! – ಶ್ರೀ. ಪ್ರಮೋದ ಮುತಾಲಿಕ್, ಅಧ್ಯಕ್ಷರು, ಶ್ರೀರಾಮ ಸೇನೆ
ಭಗವಾನ್ ಶ್ರೀ ದತ್ತಾತ್ರೇಯರು ತಪಸ್ಸು ಮಾಡಿದ ದತ್ತಪೀಠವು ಚಿಕ್ಕಮಗಳೂರಿನಲ್ಲಿ ಪ್ರಾಚೀನ ಕಾಲದಿಂದ ಪ್ರಸಿದ್ಧವಾಗಿದೆ; ಆದರೆ ಟಿಪ್ಪು ಸುಲ್ತಾನ್‌ನ ಆಳ್ವಿಕೆಯಲ್ಲಾದ್ಲ ಆಕ್ರಮಣದ ನಂತರ ಮುಸ್ಲಿಮರು ಅಲ್ಲಿ ಇಸ್ಲಾಮೀಕರಣವನ್ನು ಪ್ರಾರಂಭಿಸಿದರು. ಪ್ರಸ್ತುತ ಅಲ್ಲಿ ನಮಾಜುಪಠಣ, ಗೋಹತ್ಯೆ, ಗೋಮಾಂಸ ಭಕ್ಷಣೆಯನ್ನು ಆರಂಭಿಸಿ ತೀರ್ಥಕ್ಷೇತ್ರದ ವಿಡಂಬನೆ ಮಾಡುವ ಕೆಲಸ ನಡೆಯುತ್ತಿದೆ. ಸರ್ವೋಚ್ಚ ನ್ಯಾಯಾಲಯವೂ ಇದು ದತ್ತಪೀಠ ಎಂದು ಒಪ್ಪಿಕೊಂಡಿದೆ ಮತ್ತು ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಸರಕಾರವನ್ನು ಕೇಳಿದೆ; ಆದರೆ ಸರಕಾರವು ಇನ್ನೂ ಹಿಂದೂಗಳ ಪರವಾಗಿ ನಿರ್ಣಯ ತೆಗೆದುಕೊಳ್ಳುತ್ತಿಲ್ಲ. ಈಗ ಹಿಂದೂಗಳು ಒತ್ತಡದ ಗುಂಪನ್ನು ರಚಿಸಿ ದತ್ತಪೀಠವನ್ನು ಇಸ್ಲಾಮಿಕ್ ಅತಿಕ್ರಮಣದಿಂದ ಮುಕ್ತಗೊಳಿಸುವಂತೆ ಸರಕಾರವನ್ನು ಒತ್ತಾಯಿಸಬೇಕು ಎಂದು ಶ್ರೀ ರಾಮಸೇನೆಯ ಅಧ್ಯಕ್ಷ ಶ್ರೀ. ಪ್ರಮೋದ ಮುತಾಲಿಕ್ ಇವರು ಕರೆ ನೀಡಿದರು.
ದೇವಸ್ಥಾನದ ನಿಧಿಯ ಮೇಲೆ ಶೇ. ೨೩.೫ ರಷ್ಟು ತೆರಿಗೆ ವಿಧಿಸುವಿಕೆ ಎಂದರೆ ಇದು ‘ಜಿಝಿಯಾ ತೆರಿಗೆ’ಗಿಂತ ಕೆಟ್ಟದಾಗಿದೆ! – ಸಿ.ಎಸ್. ರಂಗರಾಜನ್
ಭಾರತೀಯ ಸಂವಿಧಾನದ ಪರಿಚ್ಛೇದ ೨೫,೨೬ ಮತ್ತು ೨೭ ಇವುಗಳನ್ನು ಹಿಂದೂಗಳಿಗೆ ಹಾನಿಯಾಗಬೇಕೆಂದೇ ಸೇರಿಸಲಾಗಿದೆ. ಇದರ ಪರಿಚ್ಛೇದ ೨೬ ರ ಮೂಲಕ ಆಂಧ್ರಪ್ರದೇಶದಲ್ಲಿ ದೇವಸ್ಥಾನದ ಹಣದ ಮೇಲೆ ಶೇ. ೨೩.೫ ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ದೇವಸ್ಥಾನಗಳಿಂದ ಈ ರೀತಿ ತೆರಿಗೆ ಪಡೆಯುವುದು ‘ಜಿಝಿಯಾ ತೆರಿಗೆ’ಗಿಂದ ಕೆಟ್ಟದಾಗಿದೆ. ಒಂದು ರೀತಿಯಲ್ಲಿ ಹಿಂದೂಗಳನ್ನು ಇಂದು ಎರಡನೇ ದರ್ಜೆಯವರಂತೆ ಪರಿಗಣಿಸಲಾಗುತ್ತಿದೆ ಎಂದು ತೆಲಂಗಾಣದ ಶ್ರೀ ಬಾಲಾಜಿ ದೇವಸ್ಥಾನದ ವಿಶ್ವಸ್ಥ ಶ್ರೀ. ಸಿ. ಎಸ್. ರಂಗರಾಜನ್ ಹೇಳಿದರು.
ತಮ್ಮ ಸವಿನಯ
ಶ್ರೀ. ಸುನೀಲ ಘನವಟ
ವಕ್ತಾರರು, ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಸಂಪರ್ಕ : 70203 83264