ವಾಸಿಮ್ ರಿಜ್ವಿಯನ್ನು ಇಸ್ಲಾಂನಿಂದ ಬಹಿಷ್ಕರಿಸಬೇಕೆಂದು ಮತಾಂಧರಿಂದ ಒತ್ತಾಯ !

ಜಿಹಾದಿ ಭಯೋತ್ಪಾದನೆಯನ್ನು ಉತ್ತೇಜಿಸುವ ೨೬ ಆಯಾತಗಳನ್ನು ಕುರಾನ್‌ನಿಂದ ತೆಗೆದುಹಾಕುವಂತೆ ಅರ್ಜಿ ಸಲ್ಲಿಸಿದ ಪ್ರಕರಣ

* ಕಥಿತ ಅಂಧಶ್ರದ್ಧಾ ವಿರೋಧಿ ಸಂಸ್ಥೆಗಳು ಹಿಂದೂ ಧರ್ಮದ ‘ಮೂಢನಂಬಿಕೆ’ಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಾರೆ, ಆದರೆ ಅವರಿಗೆ ‘ಅವರು ಇತರ ಧರ್ಮಗಳ ಬಗ್ಗೆ ಏಕೆ ಮಾತನಾಡುವುದಿಲ್ಲ?’ ಎಂದು ಕೇಳಿದಾಗ, ‘ಸ್ವಧರ್ಮದ ಮೂಢನಂಬಿಕೆಗಳನ್ನು ಮೊದಲು ತೆಗೆಯಬೇಕು’, ಎಂದು ಹೇಳುತ್ತಾರೆ. ಈಗ ರಿಜ್ವಿ ಅಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಂತಹ ಸಂಘಟನೆಗಳು ಏಕೆ ಹೇಳುತ್ತಿಲ್ಲ ?

* ಜಾತಿಯ ಕಾರಣದಿಂದಾಗಿ ವ್ಯಕ್ತಿಯನ್ನು ಬಹಿಷ್ಕರಿಸಿದ ಕಥಿತ ಘಟನೆ ಯಾವುದೇ ಒಂದು ಹಳ್ಳಿಯಲ್ಲಿ ನಡೆದರೆ, ತಕ್ಷಣ ಅಲ್ಲಿಗೆ ಓಡಿ ಅದನ್ನು ವಿರೋಧಿಸುವ ಪ್ರಗತಿ(ಅಧೋಗತಿ)ಪರರು, ಜಾತ್ಯತೀತ ಸಂಘಟನೆಗಳಿಗೆ ಇಂತಹ ಘಟನೆಗಳ ಕೇಳಿ ಬಂದಾಗ ಮಾತ್ರ ಜಾಣಗಿವುಡು !

* ವ್ಯಕ್ತಿಯನ್ನು ಬಹಿಷ್ಕರಿಸುವುದು ಅಪರಾಧವಾದ್ದರಿಂದ, ರಿಜ್ವಿಯನ್ನು ಬಹಿಷ್ಕರಿಸುವಂತೆ ಒತ್ತಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವನ್ನು ಸರಕಾರ ತೋರಿಸುವುದೇ ?

ವಾಸಿಮ್ ರಿಜ್ವಿ , ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ

ನವದೆಹಲಿ : ಜಿಹಾದಿ ಭಯೋತ್ಪಾದನೆಯನ್ನು ಉತ್ತೇಜಿಸುವ ಕುರಾನ್‌ನಲ್ಲಿನ ೨೬ ಆಯಾತಗಳನ್ನು ತೆಗೆದುಹಾಕಬೇಕೆಂದು ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಮ್ ರಿಜ್ವಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೂಡಿದನಂತರ ಅವರ ಶಿರಚ್ಛೇದ ಮಾಡುವಂತೆ ಫತ್ವಾ ಹೊರಡಿಸಿದ್ದಾರೆ. ಈಗ ಅವರನ್ನು ಇಸ್ಲಾಂನಿಂದಲೇ ಹೊರಹಾಕುವಂತೆ ಬೇಡಿಕೆ ಮಾಡಲಾಗುತ್ತಿದೆ. ರಿಜ್ವಿಯ ಬೇಡಿಕೆಯಿಂದಾಗಿ ಅವರ ಪತ್ನಿ, ಮಕ್ಕಳು, ಸಹೋದರ ಮತ್ತು ಇತರ ಸಂಬಂಧಿಕರು ಅವರೊಂದಿಗೆ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಅಲ್ಲದೆ ಲಕ್ಷ್ಮಣಪುರಿಯಲ್ಲಿ ಅವರ ‘ಹಯಾತ್ ಕಬ್ರ’ (ಮರಣದ ಮೊದಲು ಹೂಳಲು ಸ್ಥಳವನ್ನು ಕಾಯ್ದಿರಿಸುವುದು) ನೆಲಸಮ ಮಾಡಲಾಗಿದೆ.

(ಸೌಜನ್ಯ : Ladakh Now)

ವಾಸಿಮ್ ರಿಜ್ವಿಯನ್ನು ಬಂಧಿಸುವಂತೆ ಉಲೆಮಾಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಒತ್ತಾಯಿಸಿದ್ದಾರೆ. ರಿಜ್ವಿ ಅವರ ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿ, ಭಾರಿ ದಂಡ ವಿಧಿಸಬೇಕೆಂದು ಒತ್ತಾಯಿಸಿದೆ. ಬಿಜೆಪಿ ಅಲ್ಪಸಂಖ್ಯಾತ ಮುಖಂಡ ಜಿಶಾನ್ ಖಾನ್ ಸೇರಿದಂತೆ ಅನೇಕ ಮೌಲ್ವಿಗಳು ರಿಜ್ವಿಯ ಮನೆಯ ಹೊರಗೆ ಕುರಾನ್‌ನಿಂದ ಯಾವ ಆಯಾತಗಳನ್ನು ಅಳಿಸಬೇಕೆಂದು ರಿಜ್ವಿ ಒತ್ತಾಯಿಸಿದ್ದಾರೆಯೋ ಅವೇ ೨೬ ಆಯಾತಗಳನ್ನು ಪಠಿಸಿದರು.

ಕೊನೆಯ ಉಸಿರಿರುವವರೆಗೂ ಹೋರಾಟ ಮುಂದುವರಿಸುವೆ ! – ವಾಸಿಮ್ ರಿಜ್ವಿ

ವಾಸಿಮ್ ರಿಜ್ವಿ ಈ ವಿಷಯದ ಬಗ್ಗೆ ಒಂದು ವೀಡಿಯೊವನ್ನು ಪೋಸ್ಟ್ ಮಾಡಿ ತಮ್ಮ ಮಾತನ್ನು ಮಂಡಿಸಿದ್ದಾರೆ. ಅವರು ‘ನಾನು ಆಯಾತಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ ನಂತರ ನನ್ನ ಹೆಂಡತಿ ಮತ್ತು ಮಕ್ಕಳು ನನ್ನನ್ನು ತೊರೆದಿದ್ದಾರೆ. ವಿರೋಧದ ನಂತರವೂ ನಾನು ಈ ಹೋರಾಟವನ್ನು ಬಿಡುವುದಿಲ್ಲ. ನನ್ನ ಕೊನೆಯ ಉಸಿರಿರುವವರೆಗೂ ನಾನು ಈ ವಿಷಯದ ಬಗ್ಗೆ ಹೋರಾಡುತ್ತೇನೆ. ಒಮ್ಮೆ ನಾನು ಸೋಲುವುದು ದೃಢ ಪಟ್ಟರೆ ನಾನು ಆತ್ಮಹತ್ಯೆಯ ಹಾದಿಯನ್ನು ಹಿಡಿಯುತ್ತೇನೆ.’

ನನ್ನ ಶಿರಚ್ಛೇದಕ್ಕಾಗಿ ದೇಶಾದ್ಯಂತ ಫತ್ವಾಗಳನ್ನು ನೀಡಲಾಗುತ್ತಿದೆ ಎಂದು ರಿಜ್ವಿ ಟ್ವೀಟ್ ಮಾಡಿದ್ದಾರೆ. ನಾನು ಮಾನವೀಯತೆಗಾಗಿ ನಿಂತಿದ್ದೇನೆ, ನಾನು ತಪ್ಪು ಮಾಡಿದ್ದೇನೆಯೇ ? ನೀವೆಲ್ಲ ಭಾರತೀಯರು ನನ್ನನ್ನು ಬೆಂಬಲಿಸುತ್ತೀರಾ ?’ ಎಂದು ಅವರು ಪ್ರಶ್ನಿಸಿದ್ದಾರೆ.