ಪಾಕಿಸ್ತಾನದ ಹಿಂದೂಗಳ ಗಾಂಧಿಗಿರಿಯೋ ದೌರ್ಬಲ್ಯವೋ ? ಇದಲ್ಲದೆ ಪಾಕಿಸ್ತಾನದ ಹಿಂದೂಗಳು ಬೇರೆ ಏನು ಮಾಡಲು ಸಾಧ್ಯ ? ದೇವಾಲಯಗಳ ಮೇಲೆ ದಾಳಿ ನಡೆಸುತ್ತಿರುವವರು ನಾಳೆ ಹಿಂದೂಗಳ ಮೇಲೆ ದಾಳಿ ಮಾಡಿ ಹತ್ಯೆ ಮಾಡಬಹುದು ಎಂಬ ಭಯವಿದ್ದರಿಂದ ಹಿಂದೂಗಳು ಕ್ಷಮಿಸಿರಬಹುದು, ಎಂಬುದರಲ್ಲಿ ಸಂದೇಹವಿಲ್ಲ !
ಪೇಶಾವರ (ಪಾಕಿಸ್ತಾನ) – ಕಳೆದ ವರ್ಷ ಡಿಸೆಂಬರ್ ೩೦ ರಂದು ಸ್ಥಳೀಯ ಮೌಲ್ವಿಗಳು ಮತ್ತು ಜಮಾತ್-ಎ-ಉಲೆಮಾ-ಎ-ಇಸ್ಲಾಂ ಈ ಜಿಹಾದಿ ಪಕ್ಷದ ಸದಸ್ಯರ ನೇತೃತ್ವದಲ್ಲಿ, ಮತಾಂಧರ ಗುಂಪೊಂದು ಖೈಬರ್ ಪಖ್ತುನ್ಖ್ವಾ ಪ್ರದೇಶದ ಕಾರಕ ಜಿಲ್ಲೆಯ ತಾರಿ ಗ್ರಾಮದಲ್ಲಿ ಹಿಂದೂಗಳ ಪ್ರಾಚೀನ ದೇವಸ್ಥಾನದ ಹಾಗೂ ಅಲ್ಲಿರುವ ಶ್ರೀ ಪರಮಹಂಸಜಿ ಮಹಾರಾಜ ಇವರ ಸಮಾಧಿಯನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಿದ್ದರು. ಈ ಪ್ರಕರಣದಲ್ಲಿ, ಈ ಕೃತ್ಯವೆಸಗಿದ ಮತಾಂಧರನ್ನು ಕ್ಷಮಿಸಲು ಇಲ್ಲಿನ ಹಿಂದೂಗಳು ಈಗ ನಿರ್ಧರಿಸಿದ್ದಾರೆ. ವಿವಾದವನ್ನು ಬಗೆಹರಿಸಲು ಸ್ಥಳೀಯ ಧಾರ್ಮಿಕ ಮುಖಂಡರ ಮತ್ತು ಹಿಂದೂ ನಾಯಕರ ನಡುವೆ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
As per the dialogue, informally called 'jigra', the accused have tendered an apology over the attack and a similar incident in 1997. The Muslim clerics have assured full protection to the Hindus and their rights as per the country's Constitution.https://t.co/G75VrIeCsm
— The Hindu (@the_hindu) March 14, 2021
೧. ‘ಜಿಗ್ರಾ’ ಎಂಬ ಅನೌಪಚಾರಿಕ ಸಭೆಯಲ್ಲಿ ಆರೋಪಿಗಳು ದೇವಾಲಯದ ಮೇಲೆ ದಾಳಿಗೆ ಹಾಗೆಯೇ ೧೯೯೭ ರಲ್ಲಿ ಇದೇ ರೀತಿಯ ದಾಳಿಯನ್ನು ಮಾಡಿದಕ್ಕಾಗಿ ಕ್ಷಮೆಯಾಚಿಸಿದರು. ಅದರ ನಂತರ, ದೇಶದ ಸಂವಿಧಾನದ ಪ್ರಕಾರ ಹಿಂದೂ ನಾಯಕರು ಮತ್ತು ಅವರ ಹಕ್ಕುಗಳನ್ನು ರಕ್ಷಿಸಲಾಗುವುದು’ ಎಂದು ಮುಸ್ಲಿಂ ಮುಖಂಡರು ಈ ಸಮಯದಲ್ಲಿ ಭರವಸೆ ನೀಡಿದರು. (ಈ ಆಶ್ವಾಸನೆಯನ್ನು ಯಾರು ನಂಬಲಿದ್ದಾರೆ ? ಹಾಗೆ ಹೇಳುವುದು ನಾಟಕವಾಗಿದೆ !- ಸಂಪಾದಕ) ಅದೇರೀತಿ ಈ ಸಭೆಯಲ್ಲಿ ಒಪ್ಪಿಕೊಂಡಿರುವ ಕರಾರಿನ ಪ್ರತಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ನೀಡಲಾಗುವುದು ಎಂದೂ ಕೂಡಸ್ಪಷ್ಟ ಪಡಿಸಿದರು. (ನ್ಯಾಯಾಲಯದಲ್ಲಿ ಮತಾಂಧರ ಮೇಲೆ ನಡೆಯುತ್ತಿರುವ ಮೊಕದ್ದಮೆಯನ್ನು ರದ್ದುಪಡಿಸಲು ಅಲ್ಲಿಯ ನಾಯಕರು ಈ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ, ಎಂಬುದು ಇದರಿಂದಲೇ ಕಂಡುಬರುತ್ತದೆ ! – ಸಂಪಾದಕರು)
೨. ಪಾಕಿಸ್ತಾನ ಹಿಂದೂ ಪರಿಷತ್ ಅಧ್ಯಕ್ಷ ಮತ್ತು ಸ್ಥಳೀಯ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಶಾಸಕ ರಮೇಶ ಕುಮಾರ ಇವರು, ಈ ಘಟನೆಯು ವಿಶ್ವದಾದ್ಯಂತ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದೆ. ಖೈಬರ್ ಪಖ್ತುನ್ಖ್ವಾ ಮುಖ್ಯಮಂತ್ರಿ ಮಹಮೂದ್ ಖಾನ್ ಅವರ ಅಧ್ಯಕ್ಷತೆಯಲ್ಲಿ ಜಿಗ್ರಾದ ವಿಚಾರಣೆ ನಡೆಯಿತು.
|
೩. ದೇವಾಲಯದ ವಿಧ್ವಂಸದ ಪ್ರಕರಣದಲ್ಲಿ ಐವತ್ತು ಜನರನ್ನು ಬಂಧಿಸಲಾಗಿತ್ತು. ಈ ಘಟನೆಯ ನಂತರ ಭಾರತವು ಪಾಕಿಸ್ತಾನವನ್ನು ತೀವ್ರವಾಗಿ ಖಂಡಿಸಿತ್ತು. ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಮೇಲೆ ಪದೇ ಪದೇ ಇಂತಹ ಘಟನೆಗಳ ಹಾಗೂ ಅತ್ಯಾಚಾರದ ಬಗ್ಗೆ ವಿದೇಶಾಂಗ ಸಚಿವಾಲಯವು ಭಾರತದಲ್ಲಿರುವ ಪಾಕಿಸ್ತಾನದ ಉಚ್ಚಾಯುಕ್ತರಲ್ಲಿ ಕಳವಳ ವ್ಯಕ್ತಪಡಿಸಿತ್ತು. ಮತ್ತೊಂದೆಡೆ ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವೂ ಖೈಬರ್ ಪಖ್ತುನ್ಖ್ವಾ ಸರಕಾರಕ್ಕೆ ದೇವಾಲಯವನ್ನು ಪುನರ್ನಿರ್ಮಿಸಲು ಆದೇಶಿಸಿತ್ತು.